ನವದೆಹಲಿ: ಬಿಹಾರದ ಮದುವೆಗಳು ಯಾವಾಗಲೂ ಸುದ್ದಿಯಲ್ಲಿರುತ್ತವೆ. ಇದುವರೆಗೆ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ವಿಡಿಯೋಗಳು ಹರಿದಾಡುತ್ತಿದ್ದು, ಮದುವೆಯ ಸಂದರ್ಭದಲ್ಲಿ ವಧು ಅಥವಾ ವರನಿಂದ ವಿಚಿತ್ರ ಕೃತ್ಯಗಳು ನಡೆದಿವೆ. ಇದೀಗ ಅಂತಹ ಆಘಾತಕಾರಿ ಪ್ರಕರಣವೊಂದು ಬಿಹಾರದ ಸೀತಾಮರ್ಹಿಯಿಂದ ಮುನ್ನೆಲೆಗೆ ಬಂದಿದೆ. ಮದುವೆಯ ಸಂತೋಷ ಇದ್ದಕ್ಕಿದ್ದಂತೆ ಮೌನವಾಗಿ ಮಾರ್ಪಟ್ಟಿದೆ. ವಧು ಇದ್ದಕ್ಕಿದ್ದಂತೆ ಮದುವೆಯಾಗಲು ನಿರಾಕರಿಸಿದಳು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಬಿಹಾರದ ಸೀತಾಮರ್ಹಿಯ ಸೋನ್ವರ್ಷ ಗ್ರಾಮದಲ್ಲಿ ಈ ಮದುವೆ ನಡೆಯುತ್ತಿತ್ತು. ಮೇ 17ರಂದು ಸಂಗೀತದೊಂದಿಗೆ ಮೆರವಣಿಗೆ ನಡೆದಿತ್ತು. ವರನ ಆಗಮನದ ನಂತರ ಎಲ್ಲಾ ವಿಧಿ-ವಿಧಾನಗಳು ಸಹ ನೆರವೇರಿದವು. ದ್ವಾರಪೂಜೆಯ ನಂತರ ವಧು-ವರರು ಮಾಲೆ ಹಾಕುವ ಕಾರ್ಯಕ್ರಮಕ್ಕೆ ವೇದಿಕೆಗೆ ಬಂದರು. ಸ್ನೇಹಿತರು ಮತ್ತು ಸಂಬಂಧಿಕರ ಖುಷಿಯ ಸಮ್ಮುಖದಲ್ಲಿ ವಧು-ವರರು ಒಬ್ಬರಿಗೊಬ್ಬರು ಮಾಲೆ ಹಾಕಿಕೊಂಡರು.
#BIHAR-दूल्हे का काला रंग देख दुल्हन ने तोड़ दी शादी.. pic.twitter.com/LNwXaj22V5
— gunateet ojha (@GunateetOjha) May 20, 2023
ಇದನ್ನೂ ಓದಿ: SC-ST ಕಾಯಿದೆಯ ಕುರಿತು ಸುಪ್ರೀಂ ಮಹತ್ವದ ಟಿಪ್ಪಣಿ, ಹೇಳಿದ್ದೇನು?
ಇದಾದ ನಂತರ ವಧು ಒಳಗೆ ಹೋದಳು. ಸ್ವಲ್ಪ ಸಮಯದ ನಂತರ ಮದುವೆಯ ವಿಧಿ-ವಿಧಾನಗಳು ನಡೆಯಬೇಕಿತ್ತು. ಹುಡುಗ-ಹುಡುಗಿ ಇಬ್ಬರೂ ಸಂತೋಷದಿಂದ ಮುಂದಿನ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದರು. ವಧು-ವರರು 7 ಸುತ್ತಿನ ಸಮಾರಂಭಕ್ಕೆ ಮಂಟಪಕ್ಕೆ ಬಂದರು. ಇಬ್ಬರೂ ಮಂತ್ರ ಪಠಣದೊಂದಿಗೆ ಸುತ್ತು ಹಾಕತೊಡಗಿದರು. ಅಷ್ಟರಲ್ಲಿ 2 ಸುತ್ತು ಹಾಕಿದ ವಧು ದಿಢೀರನೆ ನಿಂತುಬಿಟ್ಟಿದ್ದಾಳೆ, ನಾನು ಇವನನ್ನು ಮದುವೆಯಾಗುವುದಿಲ್ಲವೆಂದು ಹೇಳಿದ್ದಾಳೆ.
ಕಾರಣ ಕೇಳಿದಾಗ ಆ ಹುಡುಗನ ಮೈಬಣ್ಣ ಕಪ್ಪಾಗಿದೆ. ಹೀಗಾಗಿ ಆತನನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ. ಕೆಲವೇ ಸೆಕೆಂಡುಗಳಲ್ಲಿ ವಾತಾವರಣ ಉದ್ವಿಗ್ನವಾಗಿದೆ. ಆಕೆಯ ಸಂಬಂಧಿಕರು ಹುಡುಗಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಏನೇ ಮಾಡಿದರೂ ಹುಡುಗಿ ಮದುವೆಗೆ ಒಪ್ಪಲಿಲ್ಲ. ಅಷ್ಟರಲ್ಲಿ ಇಡೀ ಘಟನೆಯ ಬಗ್ಗೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಆಗಮನದ ನಂತರ ವಿಷಯ ತಿಳಿಯಾಯ್ತು, ಆದರೆ ವಧು ಇಲ್ಲದೆ ಮೆರವಣಿಗೆ ಕಳೆಗುಂದಿತ್ತು. ಇಡೀ ಘಟನೆಯಿಂದ ವರ ಪೆಚ್ಚಾಗಿ ಹೋಗಿದ್ದಾನೆ.
ಇದನ್ನೂ ಓದಿ: MIG 21 Fighter Jet: ಇನ್ಮುಂದೆ ಯುದ್ಧ ಮೈದಾನಕ್ಕೆ ಇಳಿಯಲ್ಲ ಮಿಗ್ 21 ಫೈಟರ್ ಜೆಟ್ ಗಳು, ಕಾರಣ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.