ಇಂಥಾ ಘೋರ ಅವಮಾನ ನೀವು ನಿಮ್ಮ ಲೈಫಲ್ಲೆ ನೋಡಿರಲಿಕ್ಕಿಲ್ಲ.... ವಿಡಿಯೋ ನೋಡಿ!

Viral Video: ಹಲವು ಜನರು ಪ್ರಾಣಿಗಳಿಗೆ ತಮ್ಮ ಕೈಯಾರೆ ಆಹಾರ ತಿನ್ನಿಸಲು ಇಷ್ಟಪಡುತ್ತಾರೆ, ಆದರೆ ಪ್ರಾಣಿಗಳು ಪ್ರತಿ ಬಾರಿ ನಿಮ್ಮ ಕೈಯಿಂದ ಆಹಾರವನ್ನು ಸೇವಿಸಬೇಕು ಎಂಬುದು ಅನಿವಾರ್ಯವಲ್ಲ. ಕೆಲವೊಮ್ಮೆ ವಿಷಯಗಳು ಪ್ರಾಣಿಗಳ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಅಂತಹುದೇ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೀವೂ ಕೂಡ 'ಘೋರ ಅವಮಾನ ಅಂದ್ರೆ ಇದೆ ನೋಡಿ' ಎನ್ನುವಿರಿ (Viral News In Kannada)

Written by - Nitin Tabib | Last Updated : Dec 16, 2023, 05:59 PM IST
  • ಮುಂಬೈನಲ್ಲಿ ವಾಸಿಸುತ್ತಿರುವ ಸಲೋನಿ ಸಾತ್ಪುತೆ ಅವರು ಈ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
  • ಇವರು ವೃತ್ತಿಯಲ್ಲಿ ನೃತ್ಯ ನಿರ್ದೇಶಕರು ಆಗಿದ್ದಾರೆ. ಏಳು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ ಮತ್ತು
  • ಕೋಟ್ಯಂತರ ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದರೊಂದಿಗೆ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.
ಇಂಥಾ ಘೋರ ಅವಮಾನ ನೀವು ನಿಮ್ಮ ಲೈಫಲ್ಲೆ ನೋಡಿರಲಿಕ್ಕಿಲ್ಲ.... ವಿಡಿಯೋ ನೋಡಿ! title=

Monkey Viral Video: ಒಂದು ವೇಳೆ ನೀವೂ ಕೂಡ ಇಂಟರ್ನೆಟ್ ಜಗತ್ತಿನಲ್ಲಿ ಭಾರಿ ಸಕ್ರಿಯರಾಗಿದ್ದಾರೆ. ಅಲ್ಲಿ ನಿಮಗೆ ಒಂದಕ್ಕಿಂತ ಮತ್ತೊಂದು ಒಳ್ಳೆಯ ವಿಡಿಯೋಗಳನ್ನು ನೋಡಲು ಸಿಗುತ್ತವೆ ಎಂಬ ಸಂಗತಿ ನಿಮಗೆ ತಿಳಿದೇ ಇರುತ್ತದೆ. ಕೆಲ ವಿಡಿಯೋಗಳು ನೋಡಿದಾಕ್ಷಣ ಬಂಧು ಮಿತ್ರರಿಗೆ ಹಂಚಿಕೊಳ್ಳಲು ಆಣಿಯಾಗುತ್ತೇವೆ. ಇನ್ನೊಂದೆಡೆ ಕೆಲ ವಿಡಿಯೋಗಳನ್ನು ನೋಡಿದಾಗ ಅವು ಹೊಟ್ಟೆ ಹಿಡಿದು ನಗುವಂತೆ ಮಾಡುತ್ತವೆ. ಅಂತಹುದೇ ಒಂದು ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಜನ ಸಿಕ್ಕಾಪಟ್ಟೆ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ನೋಡಿ ನೀವು ಕೂಡ 'ಘೋರ ಅಪಮಾನ ಅಂದ್ರೆ ಇದೇ ನೋಡಿ' ಅನ್ನುವುದು ಗ್ಯಾರಂಟಿ. 

ಸಾಮಾನ್ಯವಾಗಿ ನಾವು ಹೊರಗೆ ಹೋದಾಗಲೆಲ್ಲಾ ನಮ್ಮಲ್ಲಿ ಏನಿದೆಯೋ ಅದನ್ನು ನಮ್ಮಲ್ಲಿಯೇ ಹಂಚಿಕೊಳ್ಳುತ್ತೇವೆ ಮತ್ತು ಉಳಿದವುಗಳನ್ನು ನಾವು ಪ್ರಾಣಿಗಳಿಗೆ ತಿನ್ನಿಸಲು ಪ್ರಯತ್ನಿಸುತ್ತೇವೆ, ಪ್ರತಿ ಬಾರಿ ಪ್ರಾಣಿ ನಿಮ್ಮ ಕೈಯಲ್ಲಿರುವುದನ್ನು ತಿನ್ನುತ್ತದೆ ಎನ್ನುವುದು ಅನಿವಾರ್ಯವಲ್ಲ. ಹಲವು ಬಾರಿ ಮೂಡ್ ಇಲ್ಲದಿದ್ದಾಗ ನೀವು ಕೊಟ್ಟ ಆಹಾರವನ್ನು ಅವು ತಿರಸ್ಕರಿಸುತ್ತವೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇತ್ತೀಚಿನ ದಿನಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವತಿಯೊರ್ವಳು ಕೋತಿಗಳಿಗೆ ಬಿಸ್ಕೆಟ್ ತಿನ್ನಿಸಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಕೋತಿಗಳು ಅವಳ ಕೈಯಿಂದ ತಿನ್ನಲು ನಿರಾಕರಿಸುತ್ತಿವೆ.

ಗುಡ್ಡಗಾಡು ಪ್ರದೇಶದಲ್ಲಿ ಯುವತಿಯೊಬ್ಬಳು ಮಂಗಗಳಿಗೆ ಬಿಸ್ಕೆಟ್ ತಿನ್ನಿಸಲು ಪ್ರಯತ್ನಿಸುತ್ತಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಅವಳು ಕೋತಿಗೆ ಬಿಸ್ಕೆಟ್ ಕೊಟ್ಟಾಗ ಮಂಗ ಅದರ ವಾಸನೆಯನ್ನು ನೋಡಿ ಎಸೆದು ಮುಂದೆ ಸಾಗುತ್ತದೆ. ಇದಾದ ನಂತರ, ಅವಳು ಬಿಸ್ಕತ್ತನ್ನು ಮತ್ತೊಂದು ಮಗಕ್ಕೆ ಆಫರ್ ಮಾಡುತ್ತಾಳೆ. ಅದು ಬಿಸ್ಕೀಟ್ ನತ್ತ ದುರುಗುಟ್ಟುಕೊಂಡು ಮುಂದಕ್ಕೆ ಸಾಗುತ್ತದೆ.  ಅದರ ನಂತರ ಬರುವ ಕೋತಿಗಳು ಕೂಡ ಮೊದಲ ಮಂಗ ಮಾಡಿದ ಕೃತಿಯನ್ನೇ ಕಾಪಿ ಮಾಡುತ್ತವೆ. ಅರ್ಥಾತ್ ಬಿಸ್ಕೀಟ್ ಕೈಗೆ ತೆಗೆದುಕೊಂಡು ಮೂಸಿ ನೋಡಿ ಎಸೆದು ಹೋಗುತ್ತವೆ. ಮಂಗಗಳ ಈ ವರ್ತನೆ ನೋಡಿ ಯುವತಿಗೆ ತುಂಬಾ ಆಶ್ಚರ್ಯವಾಗುತ್ತದೆ. 

ಇದನ್ನೂಓದಿ- ಕಾಂಡೋಮ್ ಗಳನ್ನು ಬಳಸಿ ಗೌನ್ ತಯಾರಿಸಿದ ವ್ಯಕ್ತಿ, ಕಾರಣ ಕೇಳಿ ಆಶ್ಚರ್ಯಚಕಿತರಾಗುತ್ತಿದ್ದಾರೆ ಜನ.. ವಿಡಿಯೋ ನೋಡಿ!

ಮುಂಬೈನಲ್ಲಿ ವಾಸಿಸುತ್ತಿರುವ ಸಲೋನಿ ಸಾತ್ಪುತೆ ಅವರು ಈ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇವರು ವೃತ್ತಿಯಲ್ಲಿ ನೃತ್ಯ ನಿರ್ದೇಶಕರು ಆಗಿದ್ದಾರೆ. ಏಳು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ ಮತ್ತು ಕೋಟ್ಯಂತರ ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದರೊಂದಿಗೆ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ವಿಡಿಯೋಗೇ ಪ್ರತಿಕ್ರಿಯೆ ನೀಡಿರುವ ಓರ್ವ ಬಳಕೆದಾರ, 'ಬಿಕ್ಷೆ ಹಾಕಿದ್ದನ್ನು ನಾವು ತಿನ್ನುವುದಿಲ್ಲ, ನಾವು ಮಂಗಗಳು ಕಸಿದು ತಿನ್ನುತ್ತೇವೆ' ಎಂದಿದ್ದಾರೆ, ಮತ್ತೊರ್ವ ಬಳಕೆದಾರ 'ಕೊಟ್ಟಿದನ್ನು ಬಾಯ್ಮುಚ್ಚಿ ತಿನ್ನೋಕೆ ನಿನ್ನ ಗಂಡಾ ಅಂಕೊಂಡಿಯಾ?' ಅಂತ ಪ್ರಶ್ನಿಸಿದ್ದಾರೆ.  ಅಷ್ಟೇ ಅಲ್ಲ ಇನ್ನೂ ಹಲವು ಸ್ವಾರಸ್ಯಕರ ಪ್ರತಿಕ್ರಿಯೆಗಳು ಈ ವಿಡಿಯೋಗೆ ಬಂದಿವೆ.

ಇದನ್ನೂ ಓದಿ-OMG ! ಎರಡು ಬಾರಿ ಸಿಡಿಲು ಅಪ್ಪಳ್ಳಿಸಿದರೂ, ಈ ವ್ಯಕ್ತಿ ಸಾವನ್ನು 'ಟಕ್' ಅಂತ ಮುಟ್ಟಿ ವಾಪಸ್ ಬಂದಿದ್ದಾನೆ,,,!
 
ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News