Video : ಮದುವೆ ಮಂಟಪದಲ್ಲಿ ಎಲ್ಲರೆದುರು ವರನಿಗೆ ಮುತ್ತಿಕ್ಕಿದ ನಾದಿನಿ, ವಧು ವಿನ ಶಾಕಿಂಗ್ ಪ್ರತಿಕ್ರಿಯೆ

Wedding Viral Video :ಇತ್ತೀಚೆಗಷ್ಟೇ ಇಂತಹ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಮದುವೆಯ ವೇದಿಕೆಯಲ್ಲಿ ಕುಳಿತಿದ್ದ ವರನಿಗೆ, ನಾದಿನಿ ಎಲ್ಲರೆದುರೇ ಮುತ್ತಿಕ್ಕಿರುವ  ದೃಶ್ಯ  ಭಾರೀ ಸದ್ದು ಮಾಡಿದೆ. 

Written by - Ranjitha R K | Last Updated : Oct 3, 2022, 12:30 PM IST
  • ಭಾರತದಲ್ಲಿ ಮದುವೆಗೆ ವಿಶೇಷ ಪ್ರಾಶಸ್ತ್ಯವಿದೆ.
  • ಮದುವೆಗೂ ಮುನ್ನ ಅನೇಕ ಶಾಸ್ತ್ರಗಳು ನಡೆಯುತ್ತವೆ.
  • ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Video : ಮದುವೆ ಮಂಟಪದಲ್ಲಿ ಎಲ್ಲರೆದುರು  ವರನಿಗೆ ಮುತ್ತಿಕ್ಕಿದ ನಾದಿನಿ, ವಧು ವಿನ ಶಾಕಿಂಗ್ ಪ್ರತಿಕ್ರಿಯೆ  title=
Wedding Video Viral (photo instagram)

Wedding Viral Video : ಭಾರತದಲ್ಲಿ ಮದುವೆಗೆ  ವಿಶೇಷ ಪ್ರಾಶಸ್ತ್ಯವಿದೆ. ಮದುವೆಗೂ ಮುನ್ನ ಅನೇಕ ಶಾಸ್ತ್ರಗಳು ನಡೆಯುತ್ತವೆ. ಮದುವೆ ಸಮಾರಂಭದ ಶಾಸ್ತ್ರಗಳು ಸ್ಥಳದಿಂದ ಸ್ಥಳಕ್ಕೆ, ಜಾತಿಯಿಂದ ಜಾತಿಗೆ, ಧರ್ಮದಿಂದ ಧರ್ಮಕ್ಕೆ ಭಿನ್ನವಾಗಿರುತ್ತದೆ. ಕೆಲವೊಂದು ಕಡೆಗಳಲ್ಲಿ ಮದುವೆ ಶಾಸ್ತ್ರಗಳು ಒಂದು ವಾರದವರೆಗೂ ನಡೆಯುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಒಂದೇ ದಿನಕ್ಕೆ ಎಲ್ಲವೂ ಮುಗಿದು ಬಿಡುತ್ತದೆ. ಮದುವೆಗೆ ಸಂಬಂಧಪಟ್ಟ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇವೆ. ಇತ್ತೀಚೆಗಷ್ಟೇ ಇಂತಹ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಮದುವೆಯ ವೇದಿಕೆಯಲ್ಲಿ ಕುಳಿತಿದ್ದ ವರನಿಗೆ, ನಾದಿನಿ ಎಲ್ಲರೆದುರೇ ಮುತ್ತಿಕ್ಕಿರುವ  ದೃಶ್ಯ  ಭಾರೀ ಸದ್ದು ಮಾಡಿದೆ. 

 ಈ ವಿಡಿಯೋ ನೋಡುವಾಗ, ಇಲ್ಲಿ ಫೋಟೋ ಸೆಷನ್ ನಡೆಯುತ್ತಿರುವಂತೆ ಕಾಣುತ್ತದೆ. ವಧು ವರನ ಪಕ್ಕದಲ್ಲಿ ಕುಳಿತಿರುವ ನಾದಿನಿ, ಫೋಟೋಗೆ ಪೋಸ್ ನೀಡುತ್ತಿದ್ದಾಳೆ. ಆದರೆ ಇದ್ದಕ್ಕಿದ್ದಂತೆ ಅದೇನಾಗುತ್ತದೆಯೋ, ವರನಿಗೆ ಚುಂಬಿಸಲು ಮುಂದಾಗುತ್ತಾಳೆ. ನಾದಿನಿಯ ಈ ಕೆಲಸದಿಂದ ತಬ್ಬಿಬ್ಬಾದ ವರ ನಾದಿನಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. 

ಇದನ್ನೂ ಓದಿ : Viral Video : ಹಾವಿನ ಹೆಡೆಗೆ ಮುತ್ತಿಡಲು ಹೋದ ಯುವಕ.! ಆಗಿದ್ದೇನು ನೋಡಿ..

ವಧುವಿನ ಪ್ರತಿಕ್ರಿಯೆ ಹೇಗಿತ್ತು? :
ವರ ಕ್ಯಾಮೆರಾವನ್ನು ನೋಡುತ್ತಾ ಮದುವೆಯ ಫೋಟೋಗಳಿಗೆ ಪೋಸ್ ನೀಡುತ್ತಿರುವಾಗ, ನಾದಿನಿ ಈ ರೀತಿ ಇದ್ದಕ್ಕಿದ್ದಂತೆ ಬಲವಂತವಾಗಿ ಚುಂಬಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.  ವರ ಕೂಡಾ ಈ ವರ್ತನೆಯಿಂದ ತೀರಾ ಮುಜುಗರಕ್ಕೊಳಗಾಗುತ್ತಾನೆ. ಅತಿಥಿಗಳು ಮತ್ತು ವಧು ಕೂಡಾ ಈ ದೃಶ್ಯವನ್ನು ನೋಡಿ ಬೆಕ್ಕಸ ಬೆರಗಾಗಿ ಹೋಗುತ್ತಾರೆ. 

 

ಇದನ್ನೂ ಓದಿ : ಬೆಚ್ಚಗೆ ಮಲಗಿದ್ದ ಹೆಬ್ಬಾವಿನ ಮೇಲೆ ಮೊಸಳೆಯ ಟೆರರ್ ಅಟ್ಯಾಕ್: ಮೈ ಜುಂ ಎನಿಸುವ ಭಯಾನಕ ವಿಡಿಯೋ ನೋಡಿ

ಈ ವೀಡಿಯೊವನ್ನು Instagram ನಲ್ಲಿ 'butterfly__mahi' ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು  ಇದುವರೆಗೆ ಸಾವಿರಾರು ಜನ ವೀಕ್ಷಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.a

 

Trending News