Viral Video: ಬ್ಯಾಗ್ ಹಾಕಿಕೊಂಡು ಶಾಲಾ ಬಸ್ ಗೆ ಕಾಯುತ್ತಿರುವ ಮುದ್ದಾದ ನಾಯಿಗಳು: ವಿಡಿಯೋ ನೋಡಿದ್ರೆ ನಗು ತಡೆಯುವುದಿಲ್ಲ…

ಶನಿವಾರದಂದು ಟ್ವಿಟ್ಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಎಂಬ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ನಾಯಿ ಶಾಲೆಯ ಬಸ್‌ಗಾಗಿ ಕಾಯುತ್ತಿದೆ" ಎಂದು ಶೀರ್ಷಿಕೆ ನೀಡಿದ್ದಾರೆ.

Written by - Bhavishya Shetty | Last Updated : Oct 2, 2022, 04:24 PM IST
    • ಸಾಕು ನಾಯಿಗಳನ್ನು ಅವುಗಳ ಮಾಲೀಕರು ತರಬೇತಿಗೆಂದು ಕಳುಹಿಸುತ್ತಾರೆ
    • ಸಾಕುನಾಯಿಗಳ ಗುಂಪೊಂದು ಕಾರಿಡಾರ್‌ನಲ್ಲಿ ಶಾಲಾ ಬಸ್‌ಗಾಗಿ ಕಾಯುತ್ತಿವೆ
    • ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ
Viral Video: ಬ್ಯಾಗ್ ಹಾಕಿಕೊಂಡು ಶಾಲಾ ಬಸ್ ಗೆ ಕಾಯುತ್ತಿರುವ ಮುದ್ದಾದ ನಾಯಿಗಳು: ವಿಡಿಯೋ ನೋಡಿದ್ರೆ ನಗು ತಡೆಯುವುದಿಲ್ಲ…  title=
viral video

ನೀವು ಅಂತರ್ಜಾಲದಲ್ಲಿ ಸಾಕಷ್ಟು ನಾಯಿ ವೀಡಿಯೊಗಳನ್ನು ನೋಡಿರಬೇಕು. ತಮ್ಮ ಮುದ್ದಾದ ಮತ್ತು ಮನುಷ್ಯರ ಜೊತೆ ಅವುಗಳು ಹೊಂದಿರುವ ನಿಷ್ಠೆಯನ್ನು ಈ ವಿಡಿಯೋಗಳು ತೋರಿಸುತ್ತವೆ. ಅನೇಕ ಸಾಕು ನಾಯಿಗಳನ್ನು ಅವುಗಳ ಮಾಲೀಕರು ತರಬೇತಿಗೆಂದು ಕಳುಹಿಸುತ್ತಾರೆ. ಅಂತಹ ಒಂದು ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು,  ಸಾಕುನಾಯಿಗಳ ಗುಂಪೊಂದು ತಮ್ಮ ಮನೆಯ ಕಾರಿಡಾರ್‌ನಲ್ಲಿ ತಮ್ಮ ಶಾಲಾ ಬಸ್‌ಗಾಗಿ ಕಾಯುತ್ತಿರುವುದನ್ನು ತೋರಿಸುತ್ತದೆ. 

ಇದನ್ನೂ ಓದಿ: Viral Video : ಮದುವೆ ಮಂಟಪದಲ್ಲಿಯೇ ವಧು - ವರರ ಫೈಟ್.! ದಂಗಾದ ನೆಂಟರಿಷ್ಟರು

ಶನಿವಾರದಂದು ಟ್ವಿಟ್ಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಎಂಬ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ನಾಯಿ ಶಾಲೆಯ ಬಸ್‌ಗಾಗಿ ಕಾಯುತ್ತಿದೆ" ಎಂದು ಶೀರ್ಷಿಕೆ ನೀಡಿದ್ದಾರೆ.

 

 

ಮನೆಯ ಕಾರಿಡಾರ್‌ನಲ್ಲಿ ಕಾರ್ಪೆಟ್ ಮೇಲೆ ಕುಳಿತಿರುವ ವಿವಿಧ ತಳಿಗಳ ನಾಯಿಗಳ ಗುಂಪಿನೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಅವರೆಲ್ಲರೂ ತಮ್ಮ ಬೆನ್ನಿನ ಮೇಲೆ ಬ್ಯಾಗ್ ಗಳನ್ನು ಹಾಕಿ, ಅಗತ್ಯ ಉಡುಪುಗಳೊಂದಿಗೆ ಸಿದ್ಧರಾಗಿದ್ದಾರೆ. ಎಲ್ಲಾ ನಾಯಿಗಳ ಕುತ್ತಿಗೆಗೆ ಹಳದಿ ಬಣ್ಣದ ಕರ್ಚಿಪ್ ನ್ನು ಕಟ್ಟಲಾಗಿದೆ. 

ಇದನ್ನೂ ಓದಿ: Uttar Pradesh: ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರಾಕ್ಟರ್ ಉರುಳಿ 22 ಸಾವು

ವೀಡಿಯೊವು ಕೇವಲ ಒಂದು ದಿನದಲ್ಲಿ 2.2 ಮಿಲಿಯನ್ ವೀಕ್ಷಣೆಗಳನ್ನು ಮತ್ತು 71,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. 6,500 ಕ್ಕೂ ಹೆಚ್ಚು ಬಳಕೆದಾರರು ಪೋಸ್ಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. ಹಲವಾರು ಜನರು ತಮ್ಮ ಹೃದಯಸ್ಪರ್ಶಿ ಟೀಕೆಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News