10 ಮಕ್ಕಳನ್ನು ಹೆರುವ ಮಹಿಳೆಯರಿಗೆ 13 ಲಕ್ಷ ಬಹುಮಾನ..!

ದೇಶದಲ್ಲಿ ಜನಸಂಖ್ಯೆಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆಗಸ್ಟ್ 15 ರಂದು 10 ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರಿಗೆ 13 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

Last Updated : Aug 18, 2022, 08:30 PM IST
  • ಒಂದು ವೇಳೆ ಅಷ್ಟು ಮಕ್ಕಳನ್ನು ಮಹಿಳೆಯೊಬ್ಬರು ಹೆತ್ತರೆ ಅಂತವರಿಗೆ ಮದರ್ ಮದರ್ ಹೀರೋಯಿನ್" ಎಂಬ ಬಿರುದನ್ನು ನೀಡುವುದಾಗಿ ಘೋಷಿಸಿದ್ದಾರೆ
10 ಮಕ್ಕಳನ್ನು ಹೆರುವ ಮಹಿಳೆಯರಿಗೆ 13 ಲಕ್ಷ ಬಹುಮಾನ..!  title=

ನವದೆಹಲಿ: ದೇಶದಲ್ಲಿ ಜನಸಂಖ್ಯೆಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆಗಸ್ಟ್ 15 ರಂದು 10 ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರಿಗೆ 13 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಒಂದು ವೇಳೆ ಅಷ್ಟು ಮಕ್ಕಳನ್ನು ಮಹಿಳೆಯೊಬ್ಬರು ಹೆತ್ತರೆ ಅಂತವರಿಗೆ ಮದರ್ ಮದರ್ ಹೀರೋಯಿನ್" ಎಂಬ ಬಿರುದನ್ನು ನೀಡುವುದಾಗಿ ಘೋಷಿಸಿದ್ದಾರೆ.ಇದೆ ನಿಯಮವನ್ನು ಈ ಹಿಂದೆ ಜೋಸೆಫ್ ಸ್ಟಾಲಿನ್ ಅವರು 1944 ರಲ್ಲಿ ಎರಡನೇ ಮಹಾಯುದ್ಧದಲ್ಲಿ ದೇಶದ ಗಮನಾರ್ಹ ಜೀವಹಾನಿಯ ನಂತರ ಜಾರಿಗೆ ತಂದಿದ್ದರು.

ಇದನ್ನೂ ಓದಿ : ರಾಯಚೂರಿನ ಜನ ತೆಲಂಗಾಣದೊಂದಿಗೆ ವಿಲೀನಕ್ಕೆ ಒತ್ತಾಯಿಸುತ್ತಿದ್ದಾರೆ: ಸಿಎಂ ಕೆ.ಚಂದ್ರಶೇಖರ್ ರಾವ್

ರಶಿಯಾ ಕೆಲವು ವರ್ಷಗಳಿಂದ ಜನನ ದರದಲ್ಲಿ ಕುಸಿತವನ್ನು ಕಂಡಿರುವ ಹಿನ್ನೆಲೆಯಲ್ಲಿ 400,000 ರಷ್ಟು ಕುಸಿದಿದೆ, ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಈಗ ಪುಟಿನ್ ರಷ್ಯಾದ ಮಹಿಳೆಯರಿಗೆ ಈ ಆಫರ್ ನೀಡಿದ್ದಾರೆ.

ಈ ಹಿಂದೆ 400,000 ಕ್ಕೂ ಹೆಚ್ಚು ಜನರಿಗೆ ಈ ಗೌರವವನ್ನು ನೀಡಲಾಗಿತ್ತು, ಆದರೆ, 1991 ರಲ್ಲಿ ಸೋವಿಯತ್ ಒಕ್ಕೂಟದ ವಿಸರ್ಜನೆಯೊಂದಿಗೆ ಇದನ್ನು ರದ್ದುಗೊಳಿಸಲಾಯಿತು. ರಾಷ್ಟ್ರದ ತ್ವರಿತ ಜನಸಂಖ್ಯಾ ಕಡಿತವನ್ನು ಪರಿಹರಿಸಲು ಇಂತಹ ಕ್ರಮಗಳ ಅಗತ್ಯವಿದೆ ಎಂದು ಪುಟಿನ್ ಹೇಳಿದ್ದಾರೆ.

ಇದನ್ನೂ ಓದಿ : Breaking News : ಬಿಜೆಪಿ ಸಂಸದೀಯ ಮಂಡಳಿಯನ್ನು ಘೋಷಿಸಿದ ನಡ್ಡಾ : ಸಚಿವ ಗಡ್ಕರಿ ಔಟ್

ಕೊರೊನಾದ ಹಿನ್ನೆಲೆಯಲ್ಲಿ ರಷ್ಯಾದ ಜನಸಂಖ್ಯೆ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡಿದೆ. ಆದ್ದರಿಂದ ಈಗ ಜನಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪುಟಿನ್ ಈ ಕ್ರಮಕ್ಕೆ ಮುಂದಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News