10ರ ಹರೆಯದ ಪೋರನಿಂದ ಗರ್ಭಿಣಿಯಾದ 13 ವರ್ಷದ ಬಾಲಕಿ ...!

ಈ ಕುರಿತು ಹೇಳುವ ಬಾಲಕಿ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ 10 ವರ್ಷದ ತನ್ನ ಬಾಯ್ ಫ್ರೆಂಡ್ ಕಾರಣ ಎಂದು ಹೇಳಿದ್ದಾಳೆ.

Updated: Jan 24, 2020 , 08:48 PM IST
10ರ ಹರೆಯದ ಪೋರನಿಂದ ಗರ್ಭಿಣಿಯಾದ 13 ವರ್ಷದ ಬಾಲಕಿ ...!

ಮಾಸ್ಕೋ:ದೇಶ-ವಿದೇಶಗಳಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ದಿನನಿತ್ಯ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತವೆ. ಆದರೆ, 10 ವರ್ಷದ ಪೋರ 13 ವರ್ಷದ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ ಘಟನೆ ಎಲ್ಲಾದರೂ ಕೇಳಿದ್ದೀರಾ? ಹೌದು, ರಷ್ಯಾದ  zheleznogorsk ಪಟ್ಟಣದಲ್ಲಿ ಇಂತಹ ವಿಚಿತ್ರ ಪ್ರಕರಣ ಬೆಳಗಿದೆ ಬಂದಿದ್ದು, ಇದು ವೈದ್ಯರಿಗೂ ಕೂಡ ಯಕ್ಷಪ್ರಶ್ನೆಯಾಗಿ ಪರಿಣಮಿಸಿದೆ. ಈ ಇಬ್ಬರು ಮಕ್ಕಳು ಟಿವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ.

ರಷ್ಯಾದ ಜೋಡಿಯಾಗಿರುವ ಡರಯಾ ಹಾಗೂ ಇವಾನ್ ಬೇರೆ ಬೇರೆ ಶಾಲೆಗಳಲ್ಲಿ ಓದುತ್ತಾರೆ. ಒಂದು ವರ್ಷದ ಹಿಂದೆ ಇವರು ಕಾಮನ್ ಸ್ನೇಹಿತನ ಮೂಲಕ ಪರಿಚಯಕ್ಕೆ ಒಳಗಾಗಿದ್ದಾರೆ. ಬಳಿಕ ಈ ಇಬ್ಬರು ರಿಲೇಶನ್ ಶಿಪ್ ಬೆಳೆಸಿದ್ದು, ಇದೀಗ ಡರಾಯಾ 8 ವಾರಗಳ ಗರ್ಭಿಣಿಯಾಗಿದ್ದಾಳೆ.

ಇವಾನ್ ನನ್ನು ತಪಾಸಣೆಗೆ ಒಳಪಡಿಸಿರುವ ರಷ್ಯಾದ ಓರ್ವ ವೈದ್ಯ ಎವಗೆನಿ ಗ್ರಿಕೊವ್, "10 ವರ್ಷದ ಬಾಲಕ ನೋರ್ವ ವಿರ್ಯ ಉತ್ಪತ್ತಿಗೆ ಲೈಂಗಿಕವಾಗಿ ಅಪಕ್ವನಾಗಿರುತ್ತಾನೆ. ಅಷ್ಟೇ ಅಲ್ಲ ಆತ ಈ ವಯಸ್ಸಿನಲ್ಲಿ ತಂದೆಯಾಗಲು ಸಾಧ್ಯವಿಲ್ಲ" ಎಂದಿದ್ದಾರೆ. ಆದರೆ, ಇನ್ನೊಂದೆಡೆ ಬಾಲಕಿ ತನಗೆ ಬೇರೆ ಯಾವುದೇ ಪಾರ್ಟ್ನರ್ ಇಲ್ಲ. ಅಷ್ಟೇ ಅಲ್ಲ ಓರ್ವ ಸೈಕಾಲಾಜಿಸ್ಟ್ ಕೂಡ ಬಾಲಕಿ ಹೇಳಿಕೆಗೆ ಬೆಂಬಲ ನೀಡಿದ್ದಾರೆ.

The Rossiya 1 ಚಾನೆಲ್ ನ ಷೋ ಆಗಿರುವ  'Father at 10?' ಕಾರ್ಯಕ್ರಮದ ಲಕ್ಷಾಂತರ ವೀಕ್ಷಕರ ಮುಂದೆ ಇವಾನಾ ಹಾಗೂ ಡರಾಯಾ ಪೋಷಕರು ಮಕ್ಕಳ ವೈದ್ಯಕೀಯ ಪರೀಕ್ಷೆಗೆ ತಮ್ಮ ಅನುಮತಿ ಸೂಚಿಸಿದ್ದಾರೆ.

ಇನ್ನೊಂದೆಡೆ ತಮ್ಮ ಮಗ ನಿಜ ಹೇಳುತ್ತಿದ್ದಾನೆ ಎಂದು ಆತನ ತಾಯಿ ಗೈಲಿನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ತಾಯಿ "ನನಗೆ ನನ್ನ ಮಗನ ಮೇಲೆ ವಿಶ್ವಾಸವಿದ್ದು, ಆತ ತಂದೆಯಾಗಿದ್ದಾನೆ. ಆದರೆ, ಇದೇ ವೇಳೆ ಆತನಿಗೆ ಈ ಕುರಿತು ಯಾವುದೇ ಕಲ್ಪನೆ ಇಲ್ಲ ಎಂಬುದನ್ನು ನಾನು ತಿಳಿಯುತ್ತೇನೆ" ಎಂದಿದ್ದಾಳೆ.

ಇನ್ನೊಂದೆಡೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಲಿನಾ ತಾಯಿ "ನಾನು ನನ್ನ ಮಗಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಪೋಷಣೆ ಮಾಡಲು ಸಿದ್ಧರಿದ್ದು, ತಮ್ಮ ಮಗಳೂ ಕೂಡ ಈ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ ಮತ್ತು ನಮ್ಮ ಕುಟುಂಬ ಸದಸ್ಯರು ಮಗುವಿಗಾಗಿ ಕಾತರದಿಂದ ಕಾಯುತ್ತಿದ್ದಾರೆ" ಎಂದಿದ್ದಾರೆ.