Earthquake in Mexico: ಮೆಕ್ಸಿಕೋದಲ್ಲಿ 7.1 ತೀವ್ರತೆಯ ಭೂಕಂಪ, ಅಲುಗಾಡಿದ ಕಟ್ಟಡಗಳು

Earthquake in Mexico: ಭೂಕಂಪದ ಕೇಂದ್ರವು ಗೆರೆರೊ ರಾಜ್ಯದ ಅಕಾಪುಲ್ಕೊ ಬೀಚ್ ರೆಸಾರ್ಟ್ ನಿಂದ ಆಗ್ನೇಯಕ್ಕೆ 14 ಕಿಲೋಮೀಟರ್ ದೂರದಲ್ಲಿದೆ.

Written by - Yashaswini V | Last Updated : Sep 8, 2021, 10:50 AM IST
  • ನೈಋತ್ಯ ಮೆಕ್ಸಿಕೊದ ಅಕಾಪುಲ್ಕೊ ಬೀಚ್ ರೆಸಾರ್ಟ್ ಬಳಿ ಪ್ರಬಲ ಭೂಕಂಪ ಸಂಭವಿಸಿದೆ
  • ಅಕಪುಲ್ಕೊ, ಗೆರೆರೊದ ರೆಸಾರ್ಟ್‌ನಿಂದ 11 ಮೈಲಿ ಈಶಾನ್ಯದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ
  • ಭೂಕಂಪದ ಕೇಂದ್ರವು ಗೆರೆರೊ ರಾಜ್ಯದ ಅಕಾಪುಲ್ಕೊದಿಂದ 11 ಕಿಲೋಮೀಟರ್ (ಏಳು ಮೈಲಿ) ಆಗ್ನೇಯದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪನ ಸೇವೆ ವರದಿ ಮಾಡಿದೆ
Earthquake in Mexico: ಮೆಕ್ಸಿಕೋದಲ್ಲಿ 7.1 ತೀವ್ರತೆಯ ಭೂಕಂಪ, ಅಲುಗಾಡಿದ ಕಟ್ಟಡಗಳು title=
Earthquake In Mexico

Earthquake in Mexico:  ಮೆಕ್ಸಿಕೋದ ಪೆಸಿಫಿಕ್ ರೆಸಾರ್ಟ್ ನಗರ ಅಕಾಪುಲ್ಕೊ ಬಳಿ ಮಂಗಳವಾರ 7.1-ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಅಲುಗಾಡುವ ಅನುಭವವಾಗಿದೆ ಎಂದು ವರದಿಯಾಗಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) 7.0 ತೀವ್ರತೆಯ ಭೂಕಂಪವು ಗೆರೆರೊದ ಅಕಾಪುಲ್ಕೊದ ಈಶಾನ್ಯಕ್ಕೆ 11 ಮೈಲಿ (17.7 ಕಿಮೀ) ದೂರದಲ್ಲಿ ಸಂಭವಿಸಿದೆ ಎಂದು ಹೇಳಿದೆ.  ಭೂಕಂಪದ ಮೊದಲು, ಹಿಡಾಲ್ಗೊ ರಾಜ್ಯದ ತುಲಾ ನಗರದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಅನೇಕ ಜನರು ಸಾವನ್ನಪ್ಪಿದ್ದರು.

ಮೆಕ್ಸಿಕೋದ ಪೆಸಿಫಿಕ್ ಕರಾವಳಿಯಲ್ಲಿ 6.9 ತೀವ್ರತೆಯ ಭೂಕಂಪ (Earthquake in Mexico) ಸಂಭವಿಸಿದೆ ಎಂದು ಮೊದಲು ಹೇಳಲಾಗಿತ್ತು, ಆದರೆ ನಂತರ ಅದನ್ನು 7.1 ಕ್ಕೆ ನವೀಕರಿಸಲಾಯಿತು. ಭೂಕಂಪ ಸಂಭವಿಸಿದಾಗ, ರಾಜಧಾನಿಯಲ್ಲಿ ನೂರಾರು ಕಿಲೋಮೀಟರ್ ದೂರದಲ್ಲಿ ಕಟ್ಟಡಗಳು ಅಲುಗಾಡುತ್ತಿರುವುದು ಕಂಡುಬಂದಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಸೇವೆ ತಿಳಿಸಿದೆ.  ಈ ಸಂದರ್ಭದಲ್ಲಿ ಜನರು ಮನೆಯಿಂದ ಹೊರಬಂದಿರುವುದಾಗಿ ವರದಿಯಾಗಿದೆ.

ಭೂಕಂಪವು ಅಕಾಪುಲ್ಕೊದಲ್ಲಿನ ಕಟ್ಟಡಗಳಿಗೂ ಹಾನಿ ಮಾಡಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿ ಸಂಸ್ಥೆ ರಾಯಿಟರ್ಸ್ ಗೆ ತಿಳಿಸಿದ್ದಾರೆ. ಇದಲ್ಲದೆ, ಮೆಕ್ಸಿಕೋ ನಗರದ ಮೇಯರ್ ಕ್ಲೌಡಿಯಾ ಶೀನ್ಬಾಮ್ ಅವರು ರಾಜಧಾನಿಯಲ್ಲಿ ಗಂಭೀರ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ ಎಂದು ಹೇಳಿದರು.

ಇದನ್ನೂ ಓದಿ- Afghanistan: ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ ಹೇಗಿರುತ್ತೆ? ತಾಲಿಬಾನ್‌ನ ನಾಯಕ ಹೇಳಿದ್ದೇನು?

ಮೆಕ್ಸಿಕೋ (Mexico) ನಗರದ ನೆರೆಹೊರೆಯ ರೋಮಾ ಸುರ್ ನಗರದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ ಮತ್ತು ಗಾಬರಿಗೊಂಡ ಜನರು ತಮ್ಮ ಮನೆಗಳಿಂದ ಹೊರಗೆ ಧಾವಿಸಿದರು ಎಂದು ರಾಯಿಟರ್ಸ್ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಹೈಟಿಯಲ್ಲಿ ಭೀಕರ ಭೂಕಂಪ:
ಕಳೆದ ತಿಂಗಳ ಮಧ್ಯದಲ್ಲಿ, ಹೈಟಿಯಲ್ಲಿ 7.2 ರ ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪದಲ್ಲಿ 1300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು 6 ಸಾವಿರ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು. 

ಇದನ್ನೂ ಓದಿ- Taliban : ಶಾಲಾ-ಕಾಲೇಜಿಗೆ ತೆರಳುವ ಹುಡುಗಿಯರಿಗಾಗಿ 7 ಕಠಿಣ ನಿಯಮ ಜಾರಿಗೊಳಿಸಿದ ತಾಲಿಬಾನ್

ವಾಸ್ತವವಾಗಿ, ಆಗಸ್ಟ್ 14ರಂದು ಹೈಟಿಯಲ್ಲಿ ಭೂಕಂಪ ಸಂಭವೀದ ವೇಳೆ ಕಟ್ಟಡಗಳು ಕುಸಿಯಲಾರಂಭಿಸಿದವು. ಹೈಟಿಯ ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿಯ ನಿರ್ದೇಶಕ ಜೆರ್ರಿ ಚಾಂಡ್ಲರ್ ಈ ಮೊದಲು ಸಾವಿನ ಸಂಖ್ಯೆ 304ರಷ್ಟಿದೆ ಮತ್ತು ದೇಶದ ದಕ್ಷಿಣ ಭಾಗದಲ್ಲಿ ಹೆಚ್ಚಿನ ಸಾವು-ನೋವುಗಳು ಸಂಭವಿಸಿವೆ ಎಂದು ತಿಳಿಸಿದ್ದರು. ಆದರೆ ನಂತರ ಸಾವಿನ ಸಂಖ್ಯೆ ವೇಗವಾಗಿ ಹೆಚ್ಚಾಯಿತು. ಈ ಭೂಕಂಪದಿಂದ ಅನೇಕ ನಗರಗಳು ಸಂಪೂರ್ಣವಾಗಿ ನಾಶವಾಗಿವೆ ಮತ್ತು ಭೂಕುಸಿತದಿಂದಾಗಿ ರಕ್ಷಣಾ ಕಾರ್ಯಾಚರಣೆಯನ್ನೂ ಕೂಡ ಸರಿಯಾಗಿ ಮಾಡಲು ಸಾಧ್ಯವಾಗಿರಲಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News