ನವದೆಹಲಿ: ಪಾಕಿಸ್ತಾನದ ಲಾಹೋರ್ ನಲ್ಲಿರುವ ಪುರಾತನ ಜನಪ್ರಿಯ ಸೂಫಿ ಕ್ಷೇತ್ರ ದಾತಾ ದರ್ಬಾರ್ ಬಳಿ ಸ್ಫೋಟದಿಂದಾಗಿ ಕನಿಷ್ಠ 8 ಜನರು ಮೃತಪಟ್ಟು 25 ಜನರು ಸಾವನ್ನಪ್ಪಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಸ್ಪೋಟವು ಮಹಿಳಾ ಪ್ರವೇಶ ದ್ವಾರದ ಬಳಿ ಸಂಭವಿಸಿದ್ದು ಪೊಲೀಸರು ಇನ್ನು ಸ್ಪೋಟದ ಸ್ವರೂಪವನ್ನು ತನಿಖೆಗೆ ಒಳಪಡಿಸಿದ್ದಾರೆ.11 ನೇ ಶತಮಾನದ ದಾತಾ ದರ್ಬಾರ್ ದೇವಾಲಯವು ದಕ್ಷಿಣದ ಏಶಿಯಾದ ಅತಿ ದೊಡ್ಡ ಸೂಫಿ ದರ್ಗಾಗಳಲ್ಲಿ ಒಂದು ಎನ್ನಲಾಗಿದೆ. ಇಲ್ಲಿ ಈ ಹಿಂದೆ 2010ರ ಆತ್ಮಹತ್ಯೆ ದಾಳಿಯಲ್ಲಿ 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ನಗರದಲ್ಲಿನ ಪೂರ್ವ ಪೋಲಿಸ್ ರು ಸ್ಪೋಟವನ್ನು ಧೃಡಪಡಿಸಿದ್ದಾರೆ. ಬಾಂಬ್ ಸ್ಪೋಟದ ನಂತರದ ದೃಶ್ಯಗಳನ್ನು ಪಿಟಿವಿ ಪ್ರಸಾರ ಮಾಡಿದೆ ಅದರಲ್ಲಿ ಹಾನಿಗೊಳಗಾದ ವಾಹನಗಳು ಮತ್ತು ತುರ್ತುವಾಹನಗಳನ್ನು ದೃಶ್ಯದಲ್ಲಿ ಸೆರೆಹಿಡಿಯಲಾಗಿದೆ.
ಸ್ಥಳೀಯ ಪೊಲೀಸ್ ಅಧಿಕಾರಿ ಮುಹಮ್ಮದ್ ಕಾಶಿಫ್ ಹೇಳುವಂತೆ ಈ ಸ್ಫೋಟವು "ಸುರಕ್ಷತಾ ಅಧಿಕಾರಿಗಳ ವಾಹನವನ್ನು ಗುರಿಯಾಗಿಸುವ ಆತ್ಮಹತ್ಯೆ ದಾಳಿ ಎಂದು ಹೇಳಿದ್ದಾರೆ.ಸ್ಪೋಟದ ಸ್ಥಳದಿಂದ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿರೀಕ್ಷಿಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ