ವಿಪರೀತ ಪ್ರೀತಿ ತೋರುವ ಗಂಡನಿಂದ ಬೇಸತ್ತು ವಿಚ್ಚೇದನ ಕೇಳಿದ ಮಹಿಳೆ !

ವಿವಾಹಿತ ಮಹಿಳೆಯೊಬ್ಬಳು ಗಂಡ ತನ್ನ ಮೇಲೆ ತೋರಿಸಿದ ವಿಪರೀತ ಪ್ರೀತಿಯಿಂದ ಬೇಸತ್ತು ಪತಿಯಿಂದ ವಿಚ್ಚೇದನ ಕೋರಿದ್ದಾಳೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

Last Updated : Aug 24, 2019, 05:20 PM IST
ವಿಪರೀತ ಪ್ರೀತಿ ತೋರುವ ಗಂಡನಿಂದ ಬೇಸತ್ತು ವಿಚ್ಚೇದನ ಕೇಳಿದ ಮಹಿಳೆ ! title=

ನವದೆಹಲಿ: ವಿವಾಹಿತ ಮಹಿಳೆಯೊಬ್ಬಳು ಗಂಡ ತನ್ನ ಮೇಲೆ ತೋರಿಸಿದ ವಿಪರೀತ ಪ್ರೀತಿಯಿಂದ ಬೇಸತ್ತು ಪತಿಯಿಂದ ವಿಚ್ಚೇದನ ಕೋರಿದ್ದಾಳೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಫುಜೈರಾದ ಶರಿಯಾ ನ್ಯಾಯಾಲಯವೊಂದರಲ್ಲಿ, ಹೆಸರಿಸದ ಮಹಿಳೆ ತನ್ನ ಪತಿಯಿಂದ ಒಂದು ವರ್ಷದ ವಿಚ್ಚೇದನವನ್ನು ಕೋರಿದ್ದಳು.ನ್ಯೂಯಾರ್ಕ್ ಪೋಸ್ಟ್ ಪ್ರಕಾರ ತನ್ನ ಗಂಡನ ದಯೆ ಜೀವನವನ್ನು ನರಕವನ್ನಾಗಿ ಪರಿವರ್ತಿಸಿದೆ. ಅತಿಯಾದ ಪ್ರೀತಿ ಮತ್ತು ವಾತ್ಸಲ್ಯದಿಂದ ತನಗೆ ಉಸಿರುಗಟ್ಟಿದಂತೆ ಭಾಸವಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆಕೆ ಬಹಳ ದಿನದಿಂದಲೂ ಗಂಡನ ಜೊತೆಗೆ ಸಂಘರ್ಷಕ್ಕಾಗಿ ಕಾಯ್ದಿದ್ದಳು, ಆದರೆ ಗಂಡನ ಮನ್ನಿಸುವ ಗುಣದಿಂದಾಗಿ ಇದು ಆಕೆ ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. "ನಾನು ವಿವಾದಕ್ಕಾಗಿ ಹಾತೊರೆಯುತ್ತಿದ್ದೆ, ಆದರೆ ನನ್ನ ಗಂಡ ಯಾವಾಗಲೂ ನನ್ನನ್ನು ಕ್ಷಮಿಸಿ ಉಡುಗೊರೆಗಳನ್ನು ನೀಡುತಿದ್ದ" ಎಂದು ಮಹಿಳೆ ಹೇಳಿದಳು. "ನನಗೆ ನಿಜವಾದ ಚರ್ಚೆ ಬೇಕು, ಒಂದು ವಾದವೂ ಸಹ, ಜಗಳವಿಲ್ಲದ ಈ ವಿಧೇಯತೆ ಜೀವನವೇ ಅಲ್ಲ " ಎಂದು ಅವರು ಹೇಳಿದರು.

ಈಗ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದೂಡಲಾಗಿದೆ, ಆದ್ದರಿಂದ ಪತಿ ನ್ಯಾಯಾಧೀಶರೊಂದಿಗೆ ಮನವಿ ಮಾಡಿದ ನಂತರ ದಂಪತಿಗಳು ಹೊಂದಾಣಿಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ. "ಮದುವೆಯನ್ನು ಒಂದು ವರ್ಷದಿಂದ ನಿರ್ಣಯಿಸುವುದು ನ್ಯಾಯವಲ್ಲ, ಮತ್ತು ಪ್ರತಿಯೊಬ್ಬರೂ ತಮ್ಮ ತಪ್ಪುಗಳಿಂದ ಕಲಿಯುತ್ತಾರೆ" ಎಂದು ಅವರ ಪತಿ ಹೇಳಿದ್ದಾರೆ.

Trending News