Aamir Khan Crackers Ad : ಪಟಾಕಿ ಜಾಹೀರಾತಿನಿಂದ ಟ್ರೋಲ್ ಆದ ಅಮೀರ್ ಖಾನ್! 

ಬಾಲಿವುಡ್ ನಟ ಅಮೀರ್ ಖಾನ್ ಅವರ ಜಾಹೀರಾತು ಕೂಡ ರಸ್ತೆಯ ಮೇಲೆ ಪಟಾಕಿಗಳನ್ನು ಸಿಡಿಸದಂತೆ ಮನವಿಗೆ ಸಂಬಂಧಿಸಿದಂತೆ ಮುಂಚೂಣಿಗೆ ಬಂದಿದೆ. ಆದರೆ ಈ ಜಾಹೀರಾತಿನಿಂದಾಗಿ, ಈಗ ಅಮೀರ್ ಖಾನ್ ಗೆ ಸಮಸ್ಯೆ ಎದುರಾಗಿದೆ. ಇವಾ ಈ ಜಾಹೀರಾತು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗುತ್ತಿದೆ.

Written by - Channabasava A Kashinakunti | Last Updated : Oct 22, 2021, 12:52 PM IST
  • ಟ್ರೊಲ್ ಆದ ಅಮೀರ್ ಖಾನ್ ಪಟಾಕಿ ಜಾಹೀರಾತು
  • ಜಾಹೀರಾತಿಗೆ ಬಿಜೆಪಿ ಸಂಸದರ ವಿರೋಧ
  • ಕಂಪನಿಯ ಮುಖ್ಯಸ್ಥರಿಗೆ ದೀರ್ಘ ಪತ್ರ ಬರೆದ ಅನಂತಕುಮಾರ ಹೆಗಡೆ
Aamir Khan Crackers Ad : ಪಟಾಕಿ ಜಾಹೀರಾತಿನಿಂದ ಟ್ರೋಲ್ ಆದ ಅಮೀರ್ ಖಾನ್!  title=

ನವದೆಹಲಿ : ಟಿ20 ವಿಶ್ವಕಪ್ ಕ್ರಿಕೆಟ್ ಮತ್ತು ದೀಪಾವಳಿ ಸಂದರ್ಭದಲ್ಲಿ, ಟಿವಿಯಲ್ಲಿ ಹಲವು ಹೊಸ ಜಾಹೀರಾತುಗಳು ಕಾಣಿಸಿಕೊಳ್ಳಲಾರಂಭಿಸಿವೆ. ಹಾಗೆ ಬಾಲಿವುಡ್ ನಟ ಅಮೀರ್ ಖಾನ್ ಅವರ ಜಾಹೀರಾತು ಕೂಡ ರಸ್ತೆಯ ಮೇಲೆ ಪಟಾಕಿಗಳನ್ನು ಸಿಡಿಸದಂತೆ ಮನವಿಗೆ ಸಂಬಂಧಿಸಿದಂತೆ ಮುಂಚೂಣಿಗೆ ಬಂದಿದೆ. ಆದರೆ ಈ ಜಾಹೀರಾತಿನಿಂದಾಗಿ, ಈಗ ಅಮೀರ್ ಖಾನ್ ಗೆ ಸಮಸ್ಯೆ ಎದುರಾಗಿದೆ. ಇವಾ ಈ ಜಾಹೀರಾತು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗುತ್ತಿದೆ. ಇದರೊಂದಿಗೆ ಕರ್ನಾಟಕದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರ ವಿರುದ್ಧವೂ ಪತ್ರ ಬರೆದಿದ್ದಾರೆ.

ಸಂಸದ ಅನಂತಕುಮಾರ ಬರೆದ ಪತ್ರ ದಲ್ಲಿ ಏನಿದೆ?

ಅನಂತಕುಮಾರ್ ಹೆಗ್ಡೆ(Anantkumar Hegde) ಅವರು ಸಿಟ್ ಟೈರ್ ಕಂಪನಿಯ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ, ಇತ್ತೀಚೆಗೆ ರಸ್ತೆಯಲ್ಲಿ ಪಟಾಕಿಗಳನ್ನು ಸಿಡಿಸದಂತೆ ಮನವಿ ಮಾಡಿರುವ ಜಾಹಿರಾತು ಅನ್ನು ನಾನು ಆಕ್ಷೇಪಿಸುತ್ತೇನೆ. ಭವಿಷ್ಯದಲ್ಲಿ ಕಂಪನಿಯು ಹಿಂದೂಗಳ ಭಾವನೆಗಳನ್ನು ಗೌರವಿಸುತ್ತದೆ ಮತ್ತು ಅವರಿಗೆ ನೋವಾಗುವುದಿಲ್ಲ ಎಂದು ಅವರು ಭರವಸೆ ವ್ಯಕ್ತಪಡಿಸಿದರು, ಏಕೆಂದರೆ ಇಂತಹ ಜಾಹೀರಾತುಗಳು ಹಿಂದೂಗಳಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿವೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅನಂತ್ ವರ್ಧನ್ ಗೋಯೆಂಕಾಗೆ ಅಕ್ಟೋಬರ್ 14 ರಂದು ಬರೆದ ಪತ್ರದಲ್ಲಿ, ಅನಂತಕುಮಾರ್ ಜಾಹೀರಾತನ್ನು ವಿರೋಧಿಸಿದರು, ಇದರಲ್ಲಿ ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಜನರಿಗೆ ಬೀದಿಗಳಲ್ಲಿ ಪಟಾಕಿ ಸಿಡಿಸದಂತೆ ಸಲಹೆ ನೀಡುತ್ತಾರೆ.

ಇದನ್ನೂ ಓದಿ : #JrChirubirthday : ದಿ. ನಟ ಚಿರಂಜೀವಿ ಸರ್ಜಾ, ಮೇಘನಾ ರಾಜ್ ಪುತ್ರನಿಗೆ ಇಂದು ಮೊದಲ ವರ್ಷದ ಜನ್ಮದಿನದ ಸಂಭ್ರಮ

ರಸ್ತೆಯಲ್ಲಿ ನಮಾಜ್ ಗೆ ವಿರೋಧವೂ ಇರಬೇಕು

ಈ ಪತ್ರ(Anantkumar Hegde Letter)ದಲ್ಲಿ, 'ನಮಾಜ್ ಹೆಸರಿನಲ್ಲಿ ರಸ್ತೆಗಳನ್ನು ನಿರ್ಬಂಧಿಸುವ ಸಮಸ್ಯೆ ಮತ್ತ ಅಜಾನ್ ಸಮಯದಲ್ಲಿ ಮಸೀದಿಗಳಿಂದ ಉಂಟಾಗುವ ಶಬ್ದ ಮಾಲಿನ್ಯದ ಸಮಸ್ಯೆಯನ್ನು ಕಂಪನಿಯು ಪರಿಹರಿಸಬೇಕು' ಎಂದೂ ಹೆಗ್ಡೆ ಬರೆದಿದ್ದಾರೆ.

 

ಅಮೀರ್ ಹಿಂದೂ ವಿರೋಧಿ ನಟ ಎಂದ ಹೆಗ್ಡೆ

ಇನ್ನು ಪತ್ರದಲ್ಲಿ, 'ನೀವು ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕುತೂಹಲ ಮತ್ತು ಸೂಕ್ಷ್ಮವಾಗಿರುವುದರಿಂದ ಮತ್ತು ನೀವು ಕೂಡ ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದೀರಿ. ಶತಶತಮಾನಗಳಿಂದ ಹಿಂದುಗಳು(Hindus) ಅನುಭವಿಸುತ್ತಿರುವ ತಾರತಮ್ಯವನ್ನು ನೀವು ಅನುಭವಿಸಬಹುದು ಎಂದು ನನಗೆ ಖಾತ್ರಿಯಿದೆ. ಹಿಂದೂ ವಿರೋಧಿ ನಟರ ಗುಂಪು ಯಾವಾಗಲೂ ಹಿಂದೂ ಭಾವನೆಗಳನ್ನು ಘಾಸಿಗೊಳಿಸುತ್ತದೆ, ಆದರೆ ಅವರು ಎಂದಿಗೂ ತಮ್ಮ ಸಮುದಾಯದ ತಪ್ಪುಗಳನ್ನು ಬಹಿರಂಗಪಡಿಸಲು ಪ್ರಯತ್ನಿಸುವುದಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.

ಸಂದೇಶ ಚೆನ್ನಾಗಿದೆ ಆದರೆ ...

ಹಿಂದೂಗಳಲ್ಲಿ ಅಶಾಂತಿ ಸೃಷ್ಟಿಸಿರುವ ಕಂಪನಿಯ ಇತ್ತೀಚಿನ ಜಾಹೀರಾತಿನ(Aamir Khan Crackers Ad) ಬಗ್ಗೆ ಗಮನ ಹರಿಸುವಂತೆ ಅವರು ನಿರ್ವಹಣೆಯನ್ನು ವಿನಂತಿಸಿದರು. ಪತ್ರದಲ್ಲಿ, 'ನಿಮ್ಮ ಕಂಪನಿಯ ಇತ್ತೀಚಿನ ಜಾಹೀರಾತು, ಇದರಲ್ಲಿ ಅಮೀರ್ ಖಾನ್ ಜನರಿಗೆ ಬೀದಿಗಳಲ್ಲಿ ಪಟಾಕಿ ಸಿಡಿಸದಂತೆ ಸಲಹೆ ನೀಡಿದ್ದು, ಉತ್ತಮ ಸಂದೇಶವನ್ನು ನೀಡುತ್ತಿದೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ನಿಮ್ಮ ಕಾಳಜಿಗೆ ಚಪ್ಪಾಳೆ ತಟ್ಟಬೇಕು. ಈ ನಿಟ್ಟಿನಲ್ಲಿ, ಬೀದಿಗಳಲ್ಲಿ ಜನರು ಎದುರಿಸುತ್ತಿರುವ ಇನ್ನೊಂದು ಸಮಸ್ಯೆಯನ್ನು ಪರಿಹರಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಶುಕ್ರವಾರ ಮತ್ತು ಇತರ ಪ್ರಮುಖ ಹಬ್ಬದ ದಿನಗಳಲ್ಲಿ ಮುಸ್ಲಿಮರನ್ನು ನಮಾಜ್ ಹೆಸರಿನಲ್ಲಿ ರಸ್ತೆಗಳನ್ನು ನಿರ್ಬಂಧಿಸದಂತೆ ಕೇಳಿ. ಇದು ಅನೇಕ ಭಾರತೀಯ ನಗರಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ, ಅಲ್ಲಿ ಮುಸ್ಲಿಮರು ಬಿಡುವಿಲ್ಲದ ರಸ್ತೆಗಳನ್ನು ನಿರ್ಬಂಧಿಸುತ್ತಾರೆ ಮತ್ತು ಪ್ರಾರ್ಥನೆ ಮಾಡುತ್ತಾರೆ ಮತ್ತು ಆ ಸಮಯದಲ್ಲಿ ವಾಹನಗಳು, ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ದಳಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳುತ್ತವೆ ಮತ್ತು ಗಂಭೀರ ಹಾನಿಯನ್ನುಂಟುಮಾಡುತ್ತವೆ. ನಮ್ಮ ದೇಶದಲ್ಲಿ, ಪ್ರತಿ ದಿನ ಅಜಾನ್ ನೀಡುವಾಗ, ಮಸೀದಿಗಳ ಮೇಲಿರುವ ಮೈಕಿನಿಂದ ಜೋರಾಗಿ ಶಬ್ದ ಹೊರಬರುತ್ತದೆ. ಶುಕ್ರವಾರ, ಮಸೀದಿಗಳಲ್ಲಿ ಪ್ರಾರ್ಥನೆ ಹೆಚ್ಚು. ಇದು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ, ವಿಶ್ರಾಂತಿ ತೆಗೆದುಕೊಳ್ಳುವ ಮತ್ತು ಬೋಧಿಸುತ್ತಿರುವವರಿಗೆ ಬಹಳ ತೊಂದರೆಯಾಗಿದೆ.

ಇದನ್ನೂ ಓದಿ : ಯಶ್, ವಿಜಯ್ ದೇವರಕೊಂಡ, ಅವರನ್ನು ಹಿಂದಿಕ್ಕಿ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ರಶ್ಮಿಕಾ ಮಂದಣ್ಣ

ವಿವಾದ ಈ ಹಿಂದೆಯೂ ನಡೆದಿತ್ತು

ಅಮೀರ್ ಖಾನ್(Aamir Khan) ಮೊದಲ ಬಾರಿಗೆ ಇಂತಹ ವಿವಾದದಲ್ಲಿ ಭಾಗಿಯಾಗಿಲ್ಲ. ಈ ಹಿಂದೆ ಕೂಡ ಅವರು ಕೆಲವು ಹೇಳಿಕೆಗಳಿಂದಾಗಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲವು ವರ್ಷಗಳ ಹಿಂದೆ, ಅವರ ಪತ್ನಿ ಕಿರಣ್ ಭಾರತದಲ್ಲಿ ಬದುಕಲು ಹೆದರುತ್ತಿದ್ದರು ಎಂದು ಹೇಳುವ ಮೂಲಕ ಸಮಸ್ಯೆ ಹುಟ್ಟು ಹಾಕಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News