Afghanistan Crisis - ತಾಲಿಬಾನ್ ಉಗ್ರರಿಂದ 150 ಜನರ ಅಪಹರಣ, ಬಹುತೇಕರು ಭಾರತೀಯರು!

Afghanistan Crisis - ಅಫ್ಘಾನಿಸ್ತಾನದಿಂದ ಭಾರತದ ಪಾಲಿಗೆ ಕೆಟ್ಟ ಸುದ್ದಿಯೊಂದು ಪ್ರಕಟವಾಗಿದೆ. ಅಲ್-ಇತ್ತೇಹಾ ರೂಜ್ ವರದಿಯ ಪ್ರಕಾರ, ಸುಮಾರು 150 ಜನರನ್ನು (Indians Kidnapped) ಅಪಹರಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಭಾರತೀಯರು ಎಂದು ಹೇಳಲಾಗಿದೆ. ಈ ಜನರನ್ನು ಕಾಬೂಲ್ ವಿಮಾನ ನಿಲ್ದಾಣದ ಬಳಿ ಅಪಹರಿಸಲಾಗಿದೆ. 

Written by - Nitin Tabib | Last Updated : Aug 21, 2021, 01:40 PM IST
  • ಅಫ್ಘಾನಿಸ್ತಾನದಿಂದ ಭಾರತದ ಪಾಲಿಗೆ ಕೆಟ್ಟ ಸುದ್ದಿಯೊಂದು ಪ್ರಕಟವಾಗಿದೆ.
  • ಅಲ್-ಇತ್ತೇಹಾ ರೂಜ್ ವರದಿಯ ಪ್ರಕಾರ, ಸುಮಾರು 150 ಜನರನ್ನು ಅಪಹರಿಸಲಾಗಿದೆ.
  • ಇವರಲ್ಲಿ ಹೆಚ್ಚಿನವರು ಭಾರತೀಯರು ಎಂದು ಹೇಳಲಾಗಿದೆ.
Afghanistan Crisis - ತಾಲಿಬಾನ್ ಉಗ್ರರಿಂದ 150 ಜನರ ಅಪಹರಣ, ಬಹುತೇಕರು ಭಾರತೀಯರು! title=
Indians Kidnapped In Afghanistan(File Photo)

Afghanistan Crisis - ಅಫ್ಘಾನಿಸ್ತಾನದಿಂದ ಭಾರತದ ಪಾಲಿಗೆ ಕೆಟ್ಟ ಸುದ್ದಿಯೊಂದು ಪ್ರಕಟವಾಗಿದೆ. ಅಲ್-ಇತ್ತೇಹಾ ರೂಜ್ ವರದಿಯ ಪ್ರಕಾರ, ಸುಮಾರು 150 ಜನರನ್ನು (Indians Kidnapped) ಅಪಹರಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಭಾರತೀಯರು ಎಂದು ಹೇಳಲಾಗಿದೆ. ಈ ಜನರನ್ನು ಕಾಬೂಲ್ ವಿಮಾನ ನಿಲ್ದಾಣದ ಬಳಿ ಅಪಹರಿಸಲಾಗಿದೆ. ಮೂಲಗಳ ಮಾಹಿತಿಯನ್ನು ಉಲ್ಲೇಖಿಸಿರುವ  ಅಲ್-ಇತ್ತೇಹಾ, ಅಪಹರಣಕಾರರು ತಾಲಿಬಾನ್‌ (Taliban) ಉಗ್ರರ ಜೊತೆಗೆ  ಸಂಪರ್ಕ ಹೊಂದಿದ್ದಾರೆ ಮತ್ತು ಅವರು ಎಂಟು ಮಿನಿವಾನ್‌ಗಳಲ್ಲಿ ಜನರನ್ನು ತಾರ್ಖೀಲ್‌ಗೆ ಕರೆದೊಯ್ದಿದ್ದಾರೆ ಎಂದಿದೆ.

ಇದನ್ನೂ ಓದಿ-Afghanistan crisis: ಕಾಬೂಲ್‌ನಿಂದ ವಾಯುಪಡೆ ವಿಮಾನದಲ್ಲಿ 85ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ

ಅಪಹರಣಕಾರರು ಮೊದಲು ಎರಡನೇ ಗೇಟ್‌ನಿಂದ ಜನರನ್ನು ವಿಮಾನ ನಿಲ್ದಾಣಕ್ಕೆ (Kabul Airport) ಕರೆದೊಯ್ಯುವ ಬಗ್ಗೆ ಮಾತನಾಡಿದ್ದರು ಎಂದು ಹೇಳಲಾಗುತ್ತಿದೆ, ಆದರೆ ಅವರು ಜನರನ್ನು ಎಲ್ಲಿಗೆ ಕರೆದೊಯ್ದರು ಎಂಬ ಸಂಗತಿ ಇನ್ನೂ ಸ್ಪಷ್ಟವಾಗಿಲ್ಲ. 150 ಕ್ಕೂ ಹೆಚ್ಚು ಜನರನ್ನು ಅಪಹರಿಸಿದ ಆರೋಪವನ್ನು ತಾಲಿಬಾನ್ ವಕ್ತಾರ ಅಹ್ಮದುಲ್ಲಾ ವಾಸಿಕ್ ನಿರಾಕರಿಸಿದ್ದಾರೆ.  ಇದುವರೆಗೆ ಅಲ್-ಇತ್ತೇಹಾದ ಪ್ರಕಟಿಸಿರುವ ಈ ವರದಿಯ ಬಗ್ಗೆ ಭಾರತ ಸರ್ಕಾರವು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ-"ಇತಿಹಾಸದಲ್ಲಿಯೇ ಕಾಬೂಲ್ ಸ್ಥಳಾಂತರ ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್‌ಗಳಲ್ಲಿ ಒಂದು"

ಆಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ (Taliban Rule) ಸಾಧಿಸಿದ ಬಳಿಕ ಅಲ್ಲಿನ ಪರಿಸ್ಥಿತಿ ಈಗಾಗಲೇ ಭಾರಿ ಬಿಗಡಾಯಿಸಿದ್ದು, ಭಾರತ ಸರ್ಕಾರ ಕೂಡ ಅಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಪ್ರಯಾಸ ಮುಂದುವರೆಸಿದೆ. ಆದರೆ, ಇನ್ನೂ ಆಫ್ಘಾನಿಸ್ತಾನದಲ್ಲಿ ಹಲವು ಭಾರತೀಯರಿದ್ದು, ಅವರನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ.

ಇದನ್ನೂ ಓದಿ-ಅಫ್ಘಾನಿಸ್ತಾನ್ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಕೊಟ್ಟ ಆ ಐಡಿಯಾ ಏನು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News