ಕಾಬೂಲ್: Afghanistan Crisis - ಆಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ (Taliban) ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಿಂದ ಹೃದಯ ವಿದ್ರಾವಕ ಚಿತ್ರಣಗಳು (Kabul Heartbreaking Photo) ಹೊರಹೊಮ್ಮುತ್ತಿವೆ. ಸಾವಿರಾರು ಜನರು ತಾಲಿಬಾನ್ ಭಯದ ಹಿನ್ನೆಲೆ ಕಾಬೂಲ್ ತೊರೆದು ಓಡಿಹೋಗಲು ಯತ್ನಿಸುತ್ತಿದ್ದಾರೆ. ಕಾಬೂಲ್ ಏರ್ಪೋರ್ಟ್ (Kabul Airoport) ನಲ್ಲಿ ಸಾವಿರಾರ್ರು ಜನರು ಟ್ಯಾಕ್ಸಿ ಓಡಿಸುತ್ತಿರುವುದು ಕಂಡುಬಂದಿದೆ. ವಿಮಾನದಲ್ಲಿ ಏರಲು ನಡೆಸುತ್ತಿರುವ ವಿಡಿಯೋಗಳು ಕೂಡ ಮಾಧ್ಯಮಗಳಲ್ಲಿ ಹರಿದಾಡಲಾರಂಭಿಸಿವೆ. ಆದರೆ, ಇದೀಗ ಅವೆಲ್ಲಕ್ಕಿಂತ ಹೆಚ್ಚು ನೋವು ನೀಡುವ ಚಿತ್ರವೊಂದು ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ-Viral News: ಸೌದಿ ಅರೇಬಿಯಾದ ಗುಹೆಯಲ್ಲಿ ಮೂಳೆಗಳ ರಾಶಿ ಪತ್ತೆ..!
ಪೋಷಕರಿಂದ ಬೇರ್ಪಟ್ಟ 7 ತಿಂಗಳ ಹಸುಳೆ
ತಾಲಿಬಾನ್ ಭಯ ಒಂದು 7 ತಿಂಗಳ ಹಸುಳೆಯನ್ನು ಪೋಷಕರಿಂದ ಬೇರ್ಪಡಿಸಿದೆ. ಈ ಮುಗ್ಧ ಹಸುಳೆ ತನ್ನ ಪೋಷಕರಿಂದ ಬೇರ್ಪಟ್ಟು ವಿಮಾನ ನಿಲ್ದಾಣದಲ್ಲಿ ಅಳುತ್ತಿರುವುದು ಕಂಡುಬಂದಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ಲಾಸ್ಟಿಕ್ ನ ಒಂದು ಕ್ರೇಟ್ ನಲ್ಲಿ ಈ ಮಗುವನ್ನು ಇಡಲಾಗಿದೆ. ಈ ಹಸುಳೆಯ ಫೋಟೋ ಹಾಗೂ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದ ಮೇಲೆ ವೈರಲ್ ಆಗುತ್ತಿವೆ. ಹಸುಳೆ ಇರುವ ಪರಿಸ್ಥಿತಿ ಮನ ಕಿವುಚುವಂತಿದೆ. ಆದರೆ, ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಹಸುಳೆಯ ಪೋಷಕರು ಪತ್ತೆಯಾಗುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ-Viral Video: ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಚಿಕ್ಕಮಕ್ಕಳಂತೆ ಆಟವಾಡಿದ ತಾಲಿಬಾನ್ ಉಗ್ರರು..!
ಸದ್ಯ ಈ ಹಸುಳೆಯ ಮನೆಗಾಗಿ ಹುಡುಕಾಟ ತೀವ್ರಗೊಂಡಿದೆ
ಆಫ್ಥಾನಿಸ್ತಾನದ ಸುದ್ದಿ ಸಂಸ್ಥೆಯಾಗಿರುವ ಅಸಾವಾಕಾ ನ್ಯೂಜ್ ಏಜೆನ್ಸಿ ಪ್ರಕಾರ, ಹಸುಳೆಯ ಪೋಷಕರು ಪಿಡಿ-5, ಕಾಬೂಲ್ ನ ನಿವಾಸಿಗಳಾಗಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಸಂಸ್ಥೆ ಹಸುಳೆಯ ಪೋಷಕರ ಹುಡುಕಾಟದಲ್ಲಿ ನಿರತವಾಗಿದೆ. ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಫೋಟೋಗೆ ಜನ ಕಾಮೆಂಟ್ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಿರುದ್ಧ ಹೋರಾಟ ನಡೆಸಲು ವಿಫಲವಾಗಿರುವ ಅಂತಾರಾಷ್ಟ್ರೀಯ ಏಜೆನ್ಸಿಗಳ ವಿರುದ್ಧ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮ ಬಳಕೆದಾರರು ಅಮೆರಿಕಾದ ಅಷ್ಯಕ್ಷ ಜೋ ಬಿಡೆನ್ ಹಾಗೂ ಉತ್ತರ ಆಟ್ಲಾಂಟಿಕ್ ಒಪ್ಪಂದ ಸಂಘಟನೆ (NATO) ಮೌನವನ್ನು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ