Pilots Fight in Cockpit: ವಿಮಾನದ ಕಾಕ್ಪಿಟ್ ನಲ್ಲಿಯೇ ಕಿತ್ತಾಡಿಕೊಂಡ ಪೈಲಟ್ ಗಳು: ವರದಿಯಲ್ಲಿ ಬಹಿರಂಗವಾಯ್ತು ಆಘಾತಕಾರಿ ಸತ್ಯ

ಪೈಲಟ್‌ಗಳ ಜಟಾಪಟಿ ವಿಮಾನದ ಮೇಲೆ ಪರಿಣಾಮ ಬೀರಲಿಲ್ಲ ಮತ್ತು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಅವರು ಹೇಳಿದರು. ಪ್ರಯಾಣಿಕರ ಸುರಕ್ಷತೆಗೆ ಕಂಪನಿ ಬದ್ಧವಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

Written by - Bhavishya Shetty | Last Updated : Aug 29, 2022, 12:52 PM IST
    • ಕಾಕ್‌ಪಿಟ್‌ನಲ್ಲಿ ಜಗಳವಾಡಿದ ಇಬ್ಬರು ಏರ್ ಫ್ರಾನ್ಸ್ ಪೈಲಟ್‌ಗಳು
    • ಪೈಲಟ್‌ಗಳ ಜಟಾಪಟಿ ವಿಮಾನದ ಮೇಲೆ ಪರಿಣಾಮ ಬೀರಲಿಲ್ಲ
    • ಪೈಲಟ್‌ಗಳನ್ನು ಅಮಾನತುಗೊಳಿಸಿದ ಏರ್ ಫ್ರಾನ್ಸ್
Pilots Fight in Cockpit: ವಿಮಾನದ ಕಾಕ್ಪಿಟ್ ನಲ್ಲಿಯೇ ಕಿತ್ತಾಡಿಕೊಂಡ ಪೈಲಟ್ ಗಳು: ವರದಿಯಲ್ಲಿ ಬಹಿರಂಗವಾಯ್ತು ಆಘಾತಕಾರಿ ಸತ್ಯ title=
Pilots Fight in Cockpit

Pilots Fights in Cockpit: ಕಾಕ್‌ಪಿಟ್‌ನಲ್ಲಿ ಜಗಳವಾಡಿದ ಇಬ್ಬರು ಏರ್ ಫ್ರಾನ್ಸ್ ಪೈಲಟ್‌ಗಳನ್ನು ಅಮಾನತುಗೊಳಿಸಲಾಗಿದೆ. ಇಬ್ಬರೂ ಪೈಲಟ್‌ಗಳು ಕಾಕ್‌ಪಿಟ್‌ನಲ್ಲಿ ಜಗಳವಾಡಿದ್ದರು. ಆ ಸಮಯದಲ್ಲಿ ವಿಮಾನವು ಜಿನೀವಾದಿಂದ ಪ್ಯಾರಿಸ್‌ಗೆ ಹೋಗುತ್ತಿತ್ತು. ಈ ಬಗ್ಗೆ ಏರ್ ಫ್ರಾನ್ಸ್ ಅಧಿಕೃತ ಮಾಹಿತಿ ನೀಡಿದೆ.

ಪೈಲಟ್‌ಗಳ ಜಟಾಪಟಿ ವಿಮಾನದ ಮೇಲೆ ಪರಿಣಾಮ ಬೀರಲಿಲ್ಲ ಮತ್ತು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಅವರು ಹೇಳಿದರು. ಪ್ರಯಾಣಿಕರ ಸುರಕ್ಷತೆಗೆ ಕಂಪನಿ ಬದ್ಧವಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. 

ಇದನ್ನೂ ಓದಿ:  Ganesh Chaturthi Offer : ಕೇವಲ 2, 800 ರೂಪಾಯಿಗೆ 32 ಇಂಚಿನ ಸ್ಮಾರ್ಟ್ ಟಿವಿ

ಸ್ವಿಟ್ಜರ್ಲೆಂಡ್ ಲಾ ಟ್ರಿಬ್ಯೂನ್ ವರದಿಯ ಪ್ರಕಾರ, ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪೈಲಟ್ ಮತ್ತು ಸಹ-ಪೈಲಟ್ ಜಗಳ ಆರಂಭವಾಗಿದೆ. ಇಬ್ಬರೂ ಪರಸ್ಪರರ ಕಾಲರ್ ಹಿಡಿದು ಜಗಳವಾಡಿದ್ದಾರೆ.

ಏರ್ ಫ್ರಾನ್ಸ್‌ನ ತನಿಖಾ ಸಂಸ್ಥೆ BEA ಬುಧವಾರ ವರದಿಯೊಂದನ್ನು ಬಿಡುಗಡೆ ಮಾಡಿದ ನಂತರ ಈ ಸುದ್ದಿ ಹೊರಬಂದಿದೆ, ಭದ್ರತಾ ಘಟನೆಗಳ ಸಮಯದಲ್ಲಿ ಕೆಲವು ಏರ್ ಫ್ರಾನ್ಸ್ ಪೈಲಟ್‌ಗಳು ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ಜಾಗರೂಕತೆಯನ್ನು ಹೊಂದಿಲ್ಲ ಎಂದು ಹೇಳಿದರು.

ಪತ್ರಿಕೆಯ ವರದಿಯ ಪ್ರಕಾರ, ಜೂನ್‌ನಲ್ಲಿ ನಡೆದ ಈ ಘಟನೆಯಲ್ಲಿ, ವಿಮಾನವು ಕೆಲ ದೂರಗಳವರೆಗೆ ತಲುಪಿದ ತಕ್ಷಣ, ಇಬ್ಬರೂ ಪೈಲಟ್‌ಗಳು ಪರಸ್ಪರ ಕಿತ್ತಾಡಿಕೊಂಡರು. ಕಾಲರ್ ಹಿಡಿದು ಪರಸ್ಪರ ಹೊಡೆದಾಡಿಕೊಳ್ಳಲು ಪ್ರಾರಂಭಿಸಿದರು. ಕಾಕ್‌ಪಿಟ್‌ನಲ್ಲಿ ಕಾದಾಟದ ಶಬ್ದವನ್ನು ಕೇಳಿದಾಗ ಕ್ಯಾಬಿನ್ ಸಿಬ್ಬಂದಿ ಮಧ್ಯಪ್ರವೇಶಿಸಿದ್ದು, ಜಗಳ ಬಿಡಿಸಿದ್ದಾರೆ. ಬಳಿಕ ಒಬ್ಬ ಸಿಬ್ಬಂದಿ ಇಡೀ ವಿಮಾನದಲ್ಲಿ ಕಾಕ್‌ಪಿಟ್‌ನಲ್ಲಿಯೇ ಇದ್ದರು. ವಿಮಾನಕ್ಕೆ ಯಾವುದೇ ಹಾನಿಯಾಗದ ಕಾರಣ ಘಟನೆಯ ಬಗ್ಗೆ ತಿಳಿಸಲಾಗಿಲ್ಲ ಎಂದು ಬಿಇಎ ಹೇಳಿದೆ. 

ಇದನ್ನೂ ಓದಿ:  Viral Video: ಪ್ರೇಮಿಗಳಂತೆ ಆಲಿಂಗನದಲ್ಲಿ ಮೈಮರೆತ ಉಡಗಳು: ಅರ್ಧ ಗಂಟೆ ಟ್ರಾಫಿಕ್ ಜಾಮ್!

2020 ರ ಡಿಸೆಂಬರ್‌ನಲ್ಲಿ ನಡೆದ ಮತ್ತೊಂದು ಘಟನೆಯ ಕುರಿತು BEA ವರದಿಯಲ್ಲಿ ಹಲವು ವಿಷಯಗಳು ಮುನ್ನೆಲೆಗೆ ಬಂದಿವೆ. ಈ ವೇಳೆಯೂ ಏರ್ ಫ್ರಾನ್ಸ್ ವಿಮಾನದಲ್ಲಿ ಪೈಲಟ್‌ಗಳ ನಡುವೆ ಮಾರಾಮಾರಿ ನಡೆದಿದೆ. ಆ ಸಮಯದಲ್ಲಿ ವಿಮಾನವು ಚಾಡ್ ಮೇಲೆ ಹಾದು ಹೋಗುತ್ತಿತ್ತು. ಈ ವೇಳೆ ವಿಮಾನದ ಟ್ಯಾಂಕ್‌ನಿಂದ 1.4 ಟನ್ ಇಂಧನ ನಾಪತ್ತೆಯಾಗಿರುವುದು ಪತ್ತೆಯಾಗಿತ್ತು. ಸಿಬ್ಬಂದಿ ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸದಿರುವುದು ಬೆಂಕಿ ಕಾಣಿಸಿಕೊಳ್ಳುವ ಅಪಾಯವನ್ನು ಹೆಚ್ಚಿಸಿತ್ತು ಎಂದು ವರದಿಯು ಹೇಳಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News