Viral Video: ಪ್ರೇಮಿಗಳಂತೆ ಆಲಿಂಗನದಲ್ಲಿ ಮೈಮರೆತ ಉಡಗಳು: ಅರ್ಧ ಗಂಟೆ ಟ್ರಾಫಿಕ್ ಜಾಮ್!

ಈ ಎರಡು ಉಡಗಳು ನೋಡಲು ಪ್ರೇಮಿಗಳಂತೆ ಆಲಿಂಗನ ಮಾಡಿಕೊಂಡಿವೆ. ಆದರೆ ವಾಸ್ತವದಲ್ಲಿ ಜಾಗಕ್ಕಾಗಿ ಕಿತ್ತಾಟ ನಡೆಸುತ್ತಿವೆ. ಇವೆರಡರ ಜಗಳದಿಂದ ಸಾರ್ವಜನಿಕ ರಸ್ತೆ ಟ್ರಾಫಿಕ್ ಜಾಮ್ ನಲ್ಲಿ ಅರ್ಧ ಗಂಟೆ ಸಿಲುಕಿಕೊಳ್ಳುವಂತೆ ಆಗಿತ್ತು.

Written by - Bhavishya Shetty | Last Updated : Aug 29, 2022, 12:07 PM IST
    • ಈ ಎರಡು ಉಡಗಳು ನೋಡಲು ಪ್ರೇಮಿಗಳಂತೆ ಆಲಿಂಗನ ಮಾಡಿಕೊಂಡಿವೆ
    • ಆದರೆ ವಾಸ್ತವದಲ್ಲಿ ಜಾಗಕ್ಕಾಗಿ ಕಿತ್ತಾಟ ನಡೆಸುತ್ತಿವೆ
    • ಉಡಗಳ ಜಗಳದಿಂದ ಅರ್ಧಗಂಟೆ ಟ್ರಾಫಿಕ್ ನಲ್ಲಿ ಸಿಲುಕಿದ ವಾಹನ ಸವಾರರು
Viral Video: ಪ್ರೇಮಿಗಳಂತೆ ಆಲಿಂಗನದಲ್ಲಿ ಮೈಮರೆತ ಉಡಗಳು: ಅರ್ಧ ಗಂಟೆ ಟ್ರಾಫಿಕ್ ಜಾಮ್! title=
Lizard Fight Video

ನೀವು ಇಂತಹ ಘಟನೆ ಹಿಂದೆಂದೂ ನೋಡಿರಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಕೆಲವು ಜನರು ಬೀದಿಯಲ್ಲಿ ಜಗಳವಾಡುವುದನ್ನು ನೀವು ನೋಡಿರುತ್ತೀರಿ. ಬೆಕ್ಕು, ನಾಯಿ ಹೀಗೆ ಬೀದಿ ಪ್ರಾಣಿಗಳು ಸಹ ಕಿತ್ತಾಡಿಕೊಳ್ಳುವುದನ್ನು ಕಂಡಿರುತ್ತೀರಿ. ಆದರೆ ಎರಡು ಉಡಗಳು ಬೀದಿಯಲ್ಲಿ ಜಗಳವಾಡುವುದನ್ನು ನೀವು ನೋಡಿದ್ದೀರಾ? ಇಲ್ಲದಿದ್ದರೆ ಈ ವರದಿಯಲ್ಲಿ ವಿಡಿಯೋವನ್ನು ನೀಡಲಾಗಿದೆ ಒಮ್ಮೆ ಕಣ್ಣಾಡಿಸಿ. 

ಇದನ್ನೂ ಓದಿ: ದಿನವಿಡೀ ಇಷ್ಟು ಮಾತ್ರ ಮೊಟ್ಟೆ ತಿನ್ನಬೇಕು, ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

 ಈ ಎರಡು ಉಡಗಳು ನೋಡಲು ಪ್ರೇಮಿಗಳಂತೆ ಆಲಿಂಗನ ಮಾಡಿಕೊಂಡಿವೆ. ಆದರೆ ವಾಸ್ತವದಲ್ಲಿ ಜಾಗಕ್ಕಾಗಿ ಕಿತ್ತಾಟ ನಡೆಸುತ್ತಿವೆ. ಇವೆರಡರ ಜಗಳದಿಂದ ಸಾರ್ವಜನಿಕ ರಸ್ತೆ ಟ್ರಾಫಿಕ್ ಜಾಮ್ ನಲ್ಲಿ ಅರ್ಧ ಗಂಟೆ ಸಿಲುಕಿಕೊಳ್ಳುವಂತೆ ಆಗಿತ್ತು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಉಡಗಳ ನಡುವೆ ಆಯಾ ಪ್ರದೇಶಗಳಿಗಾಗಿ ನಡೆಯುತ್ತಿರುವ ಯುದ್ಧವನ್ನು ಕಾಣಬಹುದು.

 
 
 
 

 
 
 
 
 
 
 
 
 
 
 

A post shared by NowThis (@nowthisnews)

 

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಎರಡು ಉಡಗಳು ರಸ್ತೆಯ ಮಧ್ಯದಲ್ಲಿ ಕುಸ್ತಿಯಾಡುತ್ತಿರುವುದನ್ನು ಕಾಣಬಹುದು. ಸರೀಸೃಪಗಳು ತಮ್ಮ ಕಿತ್ತಾಟ ಮುಗಿಸುವಷ್ಟರೊಳಗೆ ಸುಮಾರು 30 ನಿಮಿಷಗಳ ಕಾಲ ರಸ್ತೆ ಸಂಚಾರವನ್ನು ಬಂದ್ ಆಗಿತ್ತು.  ಸ್ಥಳೀಯ ಮಾಧ್ಯಮಗಳ ಪ್ರಕಾರ, ಸ್ಥಳದಲ್ಲಿದ್ದ ಚಾಲಕ ಕೋಟ್ ಥಾನತ್ಪನ್ ಎಂಬವರು ಅವುಗಳನ್ನು ಓಡಿಸಿದ್ದಾರೆ. ಮೊದಲಿಗೆ ಉಡಗಳು ಜೋಡಿಗಳೆಂದು ಭಾವಿಸಿದ್ದರಂತೆ. ಆ ಬಳಿಕ ಅವುಗಳು ಜಗಳವಾಡುತ್ತಿವೆ ಎಂದು ಯಾರೋ ಹೇಳಿದ್ದಾರೆ. ಈ ವಿಡಿಯೋಗೆ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾಕಷ್ಟು ಕಾಮೆಂಟ್‌ಗಳು ಬಂದಿವೆ.

ಇದನ್ನೂ ಓದಿ: Zodiac Signs : ಅತೀ ಚಿಕ್ಕ ವಯಸ್ಸಿನಲ್ಲೇ ಯಶಸ್ಸು ಪಡೆಯುತ್ತಾರೆ ಈ ರಾಶಿಯ ಯುವಕರು

ಈ ವೀಡಿಯೊವನ್ನು ವೀಕ್ಷಿಸಿದ ನಂತರ, ಸೋಶಿಯಲ್ ಮೀಡಿಯಾ ಬಳಕೆದಾರರು ತಮಾಷೆಯಾಗಿ ಕಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ 'ಇದು ಡೆಡ್‌ಲಾಕ್ ಆಗಿದೆ. ರೆಫ್ರಿ ಎಲ್ಲಿದ್ದಾರೆ? ಅವರನ್ನು ಕರೆದು ಮತ್ತೆ ಪಂದ್ಯ ಶುರು ಮಾಡಿ ಎಂದು ಬರೆದುಕೊಂಡಿದ್ದಾರೆ. 'ಮನೆಗಳಲ್ಲಿ ಅಥವಾ ಬೀದಿಗಳಲ್ಲಿ ವನ್ಯಜೀವಿಗಳಿಗೆ ಏನಾದರೂ ಹುಚ್ಚು ಸಂಭವಿಸುತ್ತದೆ ಎಂದರೆ ಅದು ಥೈಲ್ಯಾಂಡ್‌ನಲ್ಲಿ ಸಂಭವಿಸುತ್ತದೆ' ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News