ಇಸ್ಲಾಮಾಬಾದ್: ಪಾಕಿಸ್ತಾನದ ಸಿವಿಲ್ ಏವಿಯೇಷನ್ ಅಥಾರಿಟಿ (ಸಿಎಎ) ದೇಶಾದ್ಯಂತ ಎಲ್ಲಾ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನ ಕಾರ್ಯಾಚರಣೆಗಳು ಗುರುವಾರ ಅಮಾನತುಗೊಳ್ಳಲಿವೆ ಎಂದು ಬುಧವಾರ ತಿಳಿಸಿದೆ.
ಮುಂದಿನ ನೋಟಿಸ್ ತನಕ ದೇಶದಲ್ಲಿ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ ಎಂದು ಸಿಎಎ ಅನ್ನು ಉಲ್ಲೇಖಿಸಿ, ಪಾಕಿಸ್ತಾನ ಮೂಲದ ARY ನ್ಯೂಸ್ ವರದಿ ಮಾಡಿದೆ.
ನೋಟಮ್ ಇನ್ನೂ ಜಾರಿಯಲ್ಲಿದ್ದು, ಪಾಕಿಸ್ತಾನದ ವಾಯುಯಾನ ಸದ್ಯಕ್ಕೆ ಸ್ಥಗಿತಗೊಂಡಿದೆ. ವಾಣಿಜ್ಯ ವಾಯುಯಾನಕ್ಕಾಗಿ ನಮ್ಮ ವಾಯುಪ್ರದೇಶದ ಭಾಗಶಃ ತೆರೆಯುವಿಕೆಯನ್ನು ಸೂಚಿಸುವ ಹಿಂದಿನ ಟ್ವೀಟ್ಗಾಗಿ ಕ್ಷಮೆಯಾಚಿಸಿ. ವಿಮಾನ ಹಾರಾಟದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಸಿಎಎ ಗುರುವಾರ ಟ್ವೀಟ್ ಮಾಡಿದೆ.
ಕತಾರ್ ಏರ್ವೇಸ್ ಭಾರತ-ಪಾಕಿಸ್ತಾನ ಗಡಿಯಲ್ಲಿ ಸಂಭವಿಸಿರುವ ಉದ್ವಿಗ್ನತೆಯಿಂದಾಗಿ ಫೈಸಾಲಾಬಾದ್, ಇಸ್ಲಾಮಾಬಾದ್, ಕರಾಚಿ, ಲಾಹೋರ್, ಮುಲ್ತಾನ್, ಪೇಷಾವರ್ ಮತ್ತು ಸಿಯಾಲ್ಕೊಟ್ ವಿಮಾನ ನಿಲ್ದಾಣಗಳಿಗೆ ತಾತ್ಕಾಲಿಕವಾಗಿ ವಿಮಾನ ಹಾರಾಟ ನಿಷೇಧಿಸಲಾಗಿದೆ ಎಂದು ದೃಢಪಡಿಸಿದರು.
ಅಮೃತಸರ್, ಪಠಾನ್ಕೋಟ್, ಶ್ರೀನಗರ, ಜಮ್ಮು, ಶಿಮ್ಲಾ, ಧರ್ಮಶಾಲಾ, ಕುಲ್ಲು ಮತ್ತು ಲೇಹ್ ಸೇರಿದಂತೆ ಭಾರತದಲ್ಲಿ ಎಂಟು ವಿಮಾನ ನಿಲ್ದಾಣಗಳಲ್ಲಿ ಕೆಲವೇ ಗಂಟೆಗಳವರೆಗೆ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದಾಗ್ಯೂ, ವಿಮಾನ ಕಾರ್ಯಾಚರಣೆಗಳು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸಹಜವಾಗಿ ಪುನರಾರಂಭಗೊಂಡವು ಎಂದು ಪಿಟಿಐ ವರದಿ ಮಾಡಿದೆ.
ಏತನ್ಮಧ್ಯೆ, ಪಾಕಿಸ್ತಾನ ತನ್ನ ವಾಯುಯಾನವನ್ನು ನಿಷೇಧಿಸಲು ನಿರ್ಧರಿಸಿದ ಬಳಿಕ ಭಾರತಕ್ಕೆ ವಿಮಾನಯಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಏರ್ ಕೆನಡಾ ನಿರ್ಧರಿಸಿದೆ.
ಪಾಕಿಸ್ತಾನವು ಇಂದು ಬೆಳಿಗ್ಗೆ ಭಾರತದ ಮೇಲೆ ದಾಳಿಗೆ ಯತ್ನಿಸಿತ್ತು, ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಭಾರತೀಯ ಮಿಗ್ ವಿಮಾನವು ದಾಳಿಗೆ ತುತ್ತಾಯ್ತು ಅದರಲ್ಲಿದ್ದ ಅಭಿನಂದನ್ ಅವರು ಪಾಕಿಸ್ತಾನ ಸೈನಿಕರಿಗೆ ಸಿಕ್ಕಿಹಾಕಿಕೊಂಡರು.