ಟಿಕ್‌ಟಾಕ್ ಡಿಲೀಟ್ ಮಾಡುವಂತೆ ತನ್ನ ನೌಕರರಿಗೆ ಸೂಚಿಸಿದ ಅಮೆಜಾನ್

ವಿಶ್ವಾದ್ಯಂತ 840,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್, ವಾಲ್ಮಾರ್ಟ್ ನಂತರ ಯುಎಸ್ನ ಎರಡನೇ ಅತಿದೊಡ್ಡ ಖಾಸಗಿ ಉದ್ಯೋಗದಾತ. 

Last Updated : Jul 11, 2020, 08:20 AM IST
ಟಿಕ್‌ಟಾಕ್ ಡಿಲೀಟ್ ಮಾಡುವಂತೆ ತನ್ನ ನೌಕರರಿಗೆ ಸೂಚಿಸಿದ ಅಮೆಜಾನ್  title=

ವಾಷಿಂಗ್ಟನ್: ಚೀನಾದ ಕಂಪನಿ ಟಿಕ್‌ಟಾಕ್ ಗೆ ತೊಂದರೆಗಳು ಕಡಿಮೆಯಾದಂತೆ ಕಾಣುತ್ತಿಲ್ಲ. ಈ ಅಪ್ಲಿಕೇಶನ್ ಅನ್ನು ಭಾರತ ನಿಷೇಧಿಸಿದ ನಂತರ ಚೀನಾದ ಆ್ಯಪ್‌ಗಳನ್ನು ನಿಷೇಧಿಸುವ ಬಗ್ಗೆ ಅಮೆರಿಕ ಕೂಡ ಚಿಂತನೆ ನಡೆಸಿದೆ. ಏತನ್ಮಧ್ಯೆ ಅಮೆಜಾನ್ (Amazon) ತನ್ನ ಉದ್ಯೋಗಿಗಳಿಗೆ ಟಿಕ್‌ಟಾಕ್ ಅನ್ನು ಡಿಲೀಟ್ ಮಾಡುವಂತೆ ಕೇಳಿದೆ. ಅಮೆಜಾನ್‌ನಿಂದ ಬರುವ ಇಮೇಲ್ ಬಳಸುವ ಫೋನ್‌ನಿಂದ ಟಿಕ್‌ಟಾಕ್ ಅನ್ನು ತಕ್ಷಣ ತೆಗೆದುಹಾಕುವಂತೆ ಕಂಪನಿ ಇಮೇಲ್ ಮೂಲಕ ನೌಕರರನ್ನು ಕೇಳಿದೆ.

ಚೀನೀ ಅಪ್ಲಿಕೇಶನ್ ಭದ್ರತಾ ಬೆದರಿಕೆ ಎಂದು ತಿಳಿಸಿರುವ ಕಂಪನಿ ಈ ಹಿನ್ನಲೆಯಲ್ಲಿ ಅಮೆಜಾನ್‌ನಿಂದ ಯಾವ ಇಮೇಲ್‌ಗಳು ಬರುತ್ತವೆ ಎಂಬುದರ ಬಗ್ಗೆ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ ಫೋನ್‌ನಲ್ಲಿ ಟಿಕ್‌ಟಾಕ್ (TikTok) ಅನ್ನು ಬಳಸಬಾರದು. ಆದಾಗ್ಯೂ ವಿವಾದ ಉಲ್ಬಣಗೊಂಡ ನಂತರ ಟಿಕ್‌ಟಾಕ್ ಅನ್ನು ತೆಗೆದುಹಾಕುವ ಬಗ್ಗೆ ಕಂಪನಿಯು ಇಮೇಲ್ 'ತಪ್ಪು' ಎಂದು ಹೇಳಿದೆ. ಅಮೆಜಾನ್ ಈ ಹಿಂದೆ ತನ್ನ ಎಲ್ಲ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿತ್ತು ಮತ್ತು ಟಿಕ್‌ಟಾಕ್ ಅನ್ನು ಶುಕ್ರವಾರದಿಂದ ಅಮೆಜಾನ್  ಫೋನ್‌ನಿಂದ ತೆಗೆದುಹಾಕಬೇಕು, ಏಕೆಂದರೆ ಇದು ಸುರಕ್ಷತೆಯ ಅಪಾಯಗಳನ್ನುಂಟುಮಾಡುತ್ತದೆ ಎಂದು ತಿಳಿಸಿತ್ತು. ಆದಾಗ್ಯೂ ನೌಕರರು ಮತ್ತೊಂದು ಫೋನ್‌ನಲ್ಲಿ ಅಥವಾ ಅಮೆಜಾನ್ ಲ್ಯಾಪ್‌ಟಾಪ್ ಬ್ರೌಸರ್‌ನಿಂದ ಟಿಕ್‌ಟಾಕ್ ಅನ್ನು ಬಳಸುವುದನ್ನು ಮುಂದುವರಿಸಬಹುದು. 

ಭಾರತದಲ್ಲಿ 59 ಚೀನೀ ಅಪ್ಲಿಕೇಶನ್ ನಿಷೇಧ: ಚೀನೀಯರು ಹೆಚ್ಚು ಚಿಂತಿತರಾಗಿರುವುದೇಕೆ?

ವಿಶ್ವಾದ್ಯಂತ 840,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್, ವಾಲ್ಮಾರ್ಟ್ ನಂತರ ಯುಎಸ್ನ ಎರಡನೇ ಅತಿದೊಡ್ಡ ಖಾಸಗಿ ಉದ್ಯೋಗದಾತ. ಅಂತಹ ಪರಿಸ್ಥಿತಿಯಲ್ಲಿ ಕಂಪನಿಯು ತನ್ನ ಆದೇಶವನ್ನು ಹಿಂತೆಗೆದುಕೊಳ್ಳದಿದ್ದರೆ ಟಿಕ್‌ಟಾಕ್ ಸಾಕಷ್ಟು ತೊಂದರೆ ಅನುಭವಿಸಬೇಕಾಗಬಹುದು.

ಅಮೆಜಾನ್‌ನ ಉದ್ಯೋಗಿಗಳೆಂದು ಹೇಳಿಕೊಂಡ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಗ್ಗೆ ತಕ್ಷಣವೇ ಮಾಹಿತಿಯನ್ನು ಹಂಚಿಕೊಂಡರು. ಟಿಕ್‌ಟಾಕ್ ಕೂಡ ಈ ಬಗ್ಗೆ ತಕ್ಷಣವೇ ಪ್ರತಿಕ್ರಿಯಿಸಿದ್ದು  ಈ ಬಗ್ಗೆ ಅಮೆಜಾನ್ ನಮಗೆ ಮಾಹಿತಿ ನೀಡಿಲ್ಲ ಎಂದು ಅವರ ಪರವಾಗಿ ಹೇಳಲಾಗಿತ್ತು. ಅವರ ಕಾಳಜಿಗಳನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಈ ನಿಟ್ಟಿನಲ್ಲಿ ನಾವು ಶೀಘ್ರದಲ್ಲೇ ಅಮೆಜಾನ್‌ನೊಂದಿಗೆ ಮಾತನಾಡುತ್ತೇವೆ ಎಂದಿತ್ತು. ಈ ಬೆಳವಣಿಗೆಯ ಬಳಿಕ ಟಿಕ್‌ಟಾಕ್ ಡಿಲೀಟ್ ಮಾಡುವಂತೆ ಕೇಳಿರುವ ಇಮೇಲ್ 'ತಪ್ಪು' ಎಂದು ಅಮೆಜಾನ್ ಸ್ಪಷ್ಟಪಡಿಸಬೇಕಾಯಿತು. ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರ ಪ್ರಕಾರ ಅಮೆಜಾನ್‌ನ ಹಿರಿಯ ಅಧಿಕಾರಿಗಳಿಗೆ ಈ ನಿರ್ಧಾರದ ಬಗ್ಗೆ ತಿಳಿದಿರಲಿಲ್ಲ. ನಂತರ ಅಮೆಜಾನ್ ಮತ್ತು ಟಿಕ್‌ಟಾಕ್ ಅಧಿಕಾರಿಗಳ ನಡುವೆ ಚರ್ಚೆಗಳು ನಡೆದವು, ಅದರ ಆಧಾರದ ಮೇಲೆ ಚೀನಾದ ಅಪ್ಲಿಕೇಶನ್ ಅನ್ನು ತೆಗೆದುಹಾಕುವ ಆದೇಶವನ್ನು ರದ್ದುಗೊಳಿಸಲಾಯಿತು.

ಟಿಕ್‌ಟಾಕ್‌ ಬ್ಯಾನ್ ಬಳಿಕ ಭಾರತೀಯ ಅಪ್ಲಿಕೇಶನ್‌ಗೆ ಮನ್ನಣೆ: 2.5 ಕೋಟಿಗೂ ಹೆಚ್ಚು ಡೌನ್ಲೋಡ್

ಈ ವಾರದ ಆರಂಭದಲ್ಲಿ ಅಮೆಜಾನ್ ಪರವಾಗಿ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಲಾಗಿದೆ. ಇದರಲ್ಲಿ ಚೀನಾದ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ಕಂಪನಿಯ ಒಡೆತನದ ಮೊಬೈಲ್ ಫೋನ್‌ನಿಂದ ತಕ್ಷಣ ತೆಗೆದುಹಾಕಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಏಕೆಂದರೆ ಇದು ಗೌಪ್ಯತೆ ಮತ್ತು ಸುರಕ್ಷತೆಯ ಕಾಳಜಿಯಾಗಬಹುದು. ಕಂಪನಿಯು ಒದಗಿಸುವ ಉಪಕರಣಗಳನ್ನು ಕಂಪನಿಯ ಕೆಲಸಕ್ಕೆ ಮಾತ್ರ ಬಳಸಬೇಕು. ನೌಕರರು ಟಿಕ್‌ಟಾಕ್ ಅನ್ನು ಬಳಸಲು ಬಯಸಿದರೆ, ಅವರು ಅದನ್ನು ಮತ್ತೊಂದು ಸಾಧನದಲ್ಲಿ ಸ್ಥಾಪಿಸಬಹುದು ಎಂದು ಹೇಳಲಾಗಿದೆ.

ಯುಎಸ್-ಚೀನಾ ವಿವಾದ ಮತ್ತು ನಂತರ ಇಂಡೋ-ಚೀನಾ (Indo-China) ನಡುವೆ ಹೆಚ್ಚುತ್ತಿರುವ ವಿವಾದದ ದೃಷ್ಟಿಯಿಂದ ಟಿಕ್‌ಟಾಕ್ ಚೀನಾದಿಂದ ದೂರವಿರಲು ಪ್ರಯತ್ನಿಸುತ್ತಿದೆ. ಕಂಪನಿಯು ಇತ್ತೀಚೆಗೆ ಯುಎಸ್ನಲ್ಲಿ ಡಿಸ್ನಿಯ ಹಿರಿಯ ಕಾರ್ಯನಿರ್ವಾಹಕ ಕೆವಿನ್ ಮೆಯೆರ್ ಅವರನ್ನು ಸಿಇಒ ಆಗಿ ನೇಮಿಸಿತು. ಆದ್ದರಿಂದ ಅವರು ಅಗತ್ಯವಿದ್ದರೆ ಯುಎಸ್ ಆಡಳಿತದೊಂದಿಗೆ ಮಾತುಕತೆ ನಡೆಸಬಹುದು. ಇದರೊಂದಿಗೆ ಚೀನಾದ ಹೊಸ ರಾಷ್ಟ್ರೀಯ ಭದ್ರತಾ ಕಾಯ್ದೆಯಿಂದಾಗಿ ಟಿಕ್‌ಟಾಕ್ ಹಾಂಗ್ ಕಾಂಗ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಆದಾಗ್ಯೂ ಟಿಕ್‌ಟಾಕ್ ಸೇರಿದಂತೆ ಎಲ್ಲಾ ಚೀನೀ ಅಪ್ಲಿಕೇಶನ್‌ಗಳನ್ನು ಯುಎಸ್ ಇನ್ನೂ ಸುರಕ್ಷತಾ ಬೆದರಿಕೆ ಎಂದು ಪರಿಗಣಿಸುತ್ತಿರುವುದು ವಿಭಿನ್ನವಾಗಿದೆ. ಚೀನಾದ ಆ್ಯಪ್‌ಗಳನ್ನು ನಿಷೇಧಿಸುವುದನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಇತ್ತೀಚೆಗೆ ವಿದೇಶಾಂಗ ಸಚಿವ ಮೈಕ್ ಪೊಂಪಿಯೊ ಹೇಳಿದ್ದಾರೆ. ವಿಶೇಷವೆಂದರೆ ಲಡಾಖ್‌ನಲ್ಲಿನ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ಭಾರತ ಈಗಾಗಲೇ  ಟಿಕ್‌ಟಾಕ್ ಸೇರಿದಂತೆ 59 ಚೀನಾದ ಅಪ್ಲಿಕೇಶನ್‌ಗಳನ್ನು (Chinese applications) ನಿಷೇಧಿಸಿದೆ.

Trending News