ಭಾರತದಲ್ಲಿ 59 ಚೀನೀ ಅಪ್ಲಿಕೇಶನ್ ನಿಷೇಧ: ಚೀನೀಯರು ಹೆಚ್ಚು ಚಿಂತಿತರಾಗಿರುವುದೇಕೆ?

Weibo ಸೋಷಿಯಲ್ ಮೀಡಿಯಾಕ್ಕೆ ಚೀನಾ ನಿಷೇಧ ಹೇರಿರುವುದನ್ನು ಭಾರತದಿಂದ ನಿಷೇಧಿಸಲಾಗಿದೆ. #Indiabans59Chineseapps ಎಂಬ ಹ್ಯಾಶ್‌ಟ್ಯಾಗ್ ನಿನ್ನೆಯಿಂದ ವೀಬೊದಲ್ಲಿ ಟ್ರೆಂಡಿಂಗ್ ಆಗಿದೆ.  

Updated: Jun 30, 2020 , 01:27 PM IST
ಭಾರತದಲ್ಲಿ 59 ಚೀನೀ ಅಪ್ಲಿಕೇಶನ್ ನಿಷೇಧ:  ಚೀನೀಯರು ಹೆಚ್ಚು ಚಿಂತಿತರಾಗಿರುವುದೇಕೆ?

ನವದೆಹಲಿ: 59 ಚೀನೀ ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿರುವುದರಿಂದ ಚೀನಾದಲ್ಲಿ ಕೋಲಾಹಲ ಉಂಟಾಗಿದೆ. ಭಾರತದ ನಿರ್ಧಾರ ಚೀನಾದಲ್ಲಿ ದೊಡ್ಡ ಪರಿಣಾಮ ಬೀರುತ್ತಿದೆ. ಚೀನಾದ ವೀಬೊ ಸೋಷಿಯಲ್ ಮೀಡಿಯಾಕ್ಕೆ ಭಾರತ ನಿಷೇಧ ಹೇರಿಸುವುದರಿಂದ #Indiabans59Chineseapps ಎಂಬ ಹ್ಯಾಶ್‌ಟ್ಯಾಗ್ ನಿನ್ನೆಯಿಂದ ವೀಬೊದಲ್ಲಿ ಟ್ರೆಂಡಿಂಗ್ ಆಗಿದೆ. ಹೆಚ್ಚು ಜನಪ್ರಿಯ ಸೋಷಿಯಲ್ ಮೀಡಿಯಾದ ಬಗ್ಗೆ ಭಾರತ ತೆಗೆದುಕೊಂಡ ನಿರ್ಧಾರದಿಂದ ಚೀನಾದ ಜನರು ಅಸಮಾಧಾನಗೊಂಡಿದ್ದಾರೆ.

59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ ಚೀನಾಕ್ಕೆ 5 ಕಟ್ಟುನಿಟ್ಟಿನ ಸಂದೇಶ ರವಾನಿಸಿದ ಭಾರತ

ಭಾರತದ ನಿರ್ಧಾರವು ಚೀನಾದಲ್ಲಿ ನಿರುದ್ಯೋಗವನ್ನು ಹೆಚ್ಚಿಸುತ್ತದೆ ಎಂದು ಚೀನಾದ ಜನರು ಅಸಮಾಧಾನಗೊಂಡಿದ್ದಾರೆ. ಕ್ಯಾನ್ಸರ್ಗೆ ಸಂಬಂಧಿಸಿದ ಅನೇಕ ಪ್ರಮುಖ ಔಷಧಿಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ, ಒಂದೊಮ್ಮೆ ಭಾರತ ಇದಕ್ಕೂ ನಿಷೇಧ ಹೇರಿದರೆ ಎಂಬ ಆತಂಕ ಚೀನೀಯರಿಗೆ ಹೆಚ್ಚಾಗಿದೆ. ಚೀನಾದ ಜನರಿಗೆ ತೊಂದರೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ. 

TikTok ಮತ್ತು Helo ಅಪ್ಲಿಕೇಶನ್ ಬಗ್ಗೆ ಗೂಗಲ್, ಆಪಲ್ ಸಹ ಕೈಗೊಂಡಿದೆ ಈ ಮಹತ್ವದ ನಿರ್ಧಾರ

ದೇಶದಲ್ಲಿ ಹೆಚ್ಚು ಜನಪ್ರಿಯವಾಗಿದ್ದ  ಚೀನಿ ಆ್ಯಪ್‌ಗಳನ್ನು (Chinese apps) ಬ್ಯಾನ್ ಮಾಡಿದ ಭಾರತದ ನಿರ್ಧಾರವನ್ನು ವಿಶ್ವದ ಹಲವು ದೇಶಗಳಲ್ಲಿ ಪ್ರಶಂಸಿಸಲಾಗುತ್ತಿದೆ. ಭಾರತದ ನಿರ್ಧಾರವನ್ನು ಅಂತರರಾಷ್ಟ್ರೀಯ ಮಾಧ್ಯಮಗಳು ಶ್ಲಾಘಿಸುತ್ತಿವೆ. ಇದರ ಬೆನ್ನಲ್ಲೇ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ಯುರೋಪ್‌ನ ಅನೇಕ ದೇಶಗಳಲ್ಲಿ ಚೀನಾದ ಕಂಪನಿ ಮತ್ತು ಚೀನೀ ಆ್ಯಪ್ ಅನ್ನು ನಿಷೇಧಿಸುವ ಧ್ವನಿ ಹೆಚ್ಚಾಗಿದೆ. ಭಾರತದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜನರು ಹುವಾವೇ ಮತ್ತು ಚೀನಾದ ಕಂಪನಿಯಾದ ZTE ಅನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ.