ಅಮೇರಿಕಾದ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಬಳಸುವ 'THE BEAST' ವೈಶಿಷ್ಟ್ಯ ಇಲ್ಲಿದೆ

ದೇ ತಿಂಗಳ 24ರಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವಿಶೇಷ ಅತಿಥಿಯ ಸ್ವಾಗತಕ್ಕಾಗಿ ಭಾರತದಲ್ಲಿಯೂ ಕೂಡ ವ್ಯಾಪಕ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

Updated: Feb 18, 2020 , 01:59 PM IST
ಅಮೇರಿಕಾದ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಬಳಸುವ 'THE BEAST' ವೈಶಿಷ್ಟ್ಯ ಇಲ್ಲಿದೆ

ನವದೆಹಲಿ: ಇದೇ ತಿಂಗಳ 24ರಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವಿಶೇಷ ಅತಿಥಿಯ ಸ್ವಾಗತಕ್ಕಾಗಿ ಭಾರತದಲ್ಲಿಯೂ ಕೂಡ ವ್ಯಾಪಕ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಮೇರಿಕಾದ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಅವರಿಗಾಗಿ ಸಿದ್ಧಪಡಿಸಲಾಗಿರುವ ಅವರ ವಿಶೇಷ ಕಾರು 'ದಿ ಬೀಸ್ಟ್' ಕುರಿತು ಇದೀಗ ಚರ್ಚೆಗಳು ಕೇಳಿಬರಲಾರಂಭಿಸಿವೆ. ಹಲವು ಶಸ್ತ್ರಾಸ್ತ್ರಗಳಿಂದ ಕೂಡಿರುವ ಈ ಕಾರು ರಾಸಾಯನಿಕ ಸೇರಿದಂತೆ ಇತರೆ ದಾಳಿಗಳನ್ನು ಎದುರಿಸುವ ಕ್ಷಮತೆ ಹೊಂದಿದೆ. ಟ್ರಂಪ್ ಪ್ರವಾಸದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವೈಟ್ ಹೌಸ್, ಮೊದಲ ದಿನ ಗುಜರಾತ್ ಗೆ ಭೇಟಿ ನೀಡಲಿರುವ ಟ್ರಂಪ್ ಬಳಿಕ 'ದಿ ಬೀಸ್ಟ್' ಕಾರಿನಲ್ಲಿ ಕುಳಿತು ಅಹ್ಮದಾಬಾದ್ ನ ಸರ್ದಾರ್ ಪಟೇಲ್ ಸ್ಟೇಡಿಯಂಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಸಭೆಯೊಂದನ್ನು ಸಂಬೋಧಿಸಲಿದ್ದಾರೆ.

ಬನ್ನಿ 'ದಿ ಬೀಸ್ಟ್' ವಿಶೇಷತೆ ಏನು ಅರಿಯೋಣ
ವರ್ತಮಾನದಲ್ಲಿ ಅಮೆರಿಕಾದ ರಾಷ್ಟ್ರಪತಿ ಅವರಿಂದ ಬಳಸಲ್ಪಡುತ್ತಿರುವ ವಿಶೇಷ ಕಾರ್ ಒಂದು ಶಸ್ತ್ರಸಜ್ಜಿತ ಸುಭದ್ರ ವಾಹನವಾಗಿದೆ. ಈ ಕಾರನ್ನು ಲಿಮೋಸಿನ್ ಮಾಡೆಲ್ ಹೆಸರಿನಿಂದ ಗುರುತಿಸಲಾಗುತ್ತದೆ. 'ಕ್ಯಾಂಡಿಲ್ಯಾಕ್' ಕಂಪನಿ ಈ ಕಾರನ್ನು ತಯಾರಿಸಿದೆ.

'ದಿ ಬೀಸ್ಟ್' ನೂತನ ಆವೃತ್ತಿ 2018ರಲ್ಲಿ ಪರಿಚಯಿಸಲಾಗಿದೆ
ಸೆಪ್ಟೆಂಬರ್ 24, 2018 ರಲ್ಲಿ ಈ ಕಾರಿನ ಆಧುನಿಕ ಮಾಡೆಲ್ ಸಾದರುಪಡಿಸಲಾಗಿತ್ತು. ಈ ಕಾರು ಅಂದಿನ ರಾಷ್ಟ್ರಪತಿಗಳಾಗಿದ್ದ ಬರಾಕ್ ಒಬಾಬಾ ಅವರ ಅಧಿಕೃತ ಲಿಮೋಸಿನ್ ಕಾರನ್ನು ರಿಪ್ಲೇಸ್ ಮಾಡಿತ್ತು. ಮೊಟ್ಟಮೊದಲ ಬಾರಿಗೆ 1910ರಲ್ಲಿ ಅಮೆರಿಕಾದ ರಾಷ್ಟ್ರಾಧ್ಯಕ್ಷರಿಗಾಗಿ ಈ ಕಾರನ್ನು  ಪರಿಚಯಿಸಲಾಗಿತ್ತು. ನಂತರ ಒಂದು ದಶಕದ ಬಳಿಕ ಅಂದಿನ ಅಮೆರಿಕಾದ ಅಧ್ಯಕ್ಷರಾಗಿದ್ದ ಹಾರ್ಬರ್ಟ್ ಹೂವರ್ ಅವರು ಅದನ್ನು ತಮ್ಮ ಅಧಿಕೃತ ಕಾರ್ ಆಗಿ ಬಳಸಿಕೊಂಡಿದ್ದರು.

ಈ ಕಾರಣ ವಿಶೇಷ ವೈಶಿಷ್ಟ್ಯಗಳು ಇಲ್ಲಿವೆ
ಈ ಕಾರಿನ ಕಿಟಕಿಯ ಗ್ಲಾಸ್ ಅನ್ನು ಗಾಜು ಹಾಗೂ ಪಾಲಿ ಕಾರ್ಬೋನೆಟ್ ನ ಒಟ್ಟು ಐದು ಪದರುಗಳಿಂದ ತಯಾರಿಸಲಾಗಿದ್ದು , ಇದು ಸಂಪೂರ್ಣ ಬುಲೆಟ್ ಪ್ರೂಫ್ ಆಗಿದೆ. ಈ ಕಿಟಕಿಗಳನ್ನು ಕೇವಲ ಕಾರು ಚಾಲಕ ಮಾತ್ರ ತೆರೆಯಬಲ್ಲ. ಈ ವಾಹನದಲ್ಲಿ ರಾಷ್ಟ್ರಪತಿಗಳ ಸುರಕ್ಷತೆಗೆ ಪಂಪ್ ಆಕ್ಷನ್ ಶಾಟ್ ಗನ್, ಟಿಯರ್ ಗ್ಯಾಸ್ ಕೆನನ್ ಹಾಗೂ ಬ್ಲಡ್ ಬ್ಯಾಗ್ ಇರಿಸಲಾಗಿದೆ.

ಯುಎಸ್ ಸಿಕ್ರೆಟ್ ಸರ್ವಿಸ್ ನಿಂದ ಚಾಲಕ ತರಬೇತಿ ಪಡೆದಿರುತ್ತಾನೆ
ಅಮೆರಿಕಾದ ರಾಷ್ಟ್ರಪತಿ ಅವರ ಈ ಕಾರಿನ ಚಾಲಕ ಯುಎಸ್ ಸಿಕ್ರೆಟ್ ಸರ್ವಿಸ್ ನಿಂದ ತರಬೇತಿ ಪಡೆದಿರುತ್ತಾರೆ. ಹೀಗಾಗಿ ಅವರು ಸವಾಲೊಡ್ಡುವ ಪರಿಸ್ಥಿತಿಗಳಲ್ಲಿ ವಾಹನ ಚಲಿಸುವ ಕ್ಷಮತೆಯನ್ನು ಅವರು ಹೊಂದಿರುತ್ತಾರೆ. ಕಾರಿನ ಹಿಂಭಾಗದಲ್ಲಿ ಕುಳಿತುಕೊಳ್ಳುವ ರಾಷ್ಟ್ರಪತಿಗಳು ಕಾರಿನಲ್ಲಿರುವ ಸೆಟಲೈಟ್ ಫೋನ್ ಬಳಸಿ ಪೆಂಟಗನ್ ಜೊತೆ ನೇರ ಸಂಪರ್ಕ ಸಾಧಿಸಬಹುದಾಗಿದೆ.

ವಾಹನದ ಹಿಂಭಾಗದಲ್ಲಿ ರಾಷ್ಟ್ರಪತಿಗಳ ಜೊತೆಗೆ ಇತರೆ ನಾಲ್ವರಿಗಾಗಿ ಆಸನ ಇರಲಿದೆ. ಕಾರಿನ ಒಳಭಾಗವನ್ನು ಗ್ಲಾಸ್ ಬಳಸಿ ಬೇರ್ಪಡಿಸಲಾಗಿದ್ದು, ಕೇವಲ ರಾಷ್ಟ್ರಪತಿಗಳು ಮಾತ್ರ ಇದನ್ನು ಕೆಳಗಿಳಿಸಬಹುದು. ವಿಪತ್ತಿನ ಪರಿಸ್ಥಿತಿಯಲ್ಲಿ ಒಂದು ಪ್ಯಾನಿಕ್ ಬಟನ್ ಕೂಡ ನೀಡಲಾಗಿದ್ದು, ಜೊತೆಗೆ ಆಕ್ಸಿಜನ್ ಪೂರೈಕೆಗಾಗಿ ಸ್ವತಂತ್ರ ವ್ಯವಸ್ಥೆಯನ್ನೂ ಸಹ ಕಾರಿನಲ್ಲಿ ಕಲ್ಪಿಸಲಾಗಿದೆ. ಕಾರಿನ ಇಂಧನ ಟ್ಯಾಂಕ್ ಗೆ ಆರ್ಮ್ದ್ ವ್ಯವಸ್ಥೆ ಅಳವಡಿಸಲಾಗಿದೆ.

ವಿಸ್ಫೋಟಗಳನ್ನು ತಡೆಯಲು ಈ ಕಾರನ್ನು ಫೋಮ್ ನಿಂದ ಭರ್ತಿ ಮಾಡಲಾಗಿದ್ದು, ಯಾವುದೇ ರೀತಿಯ ಹಲ್ಲೆಗಳನ್ನು ಇದು ಸಹಿಸಬಲ್ಲದು. ಕಾರಿನ ದ್ವಾರಗಳ ಮೇಲೆ 8 ಇಂಚಿನಷ್ಟು ದಪ್ಪ ಆರ್ಮರ್ ಪ್ಲೇಟ್ ಅಳವಡಿಸಲಾಗಿದೆ. ಶೇ.100ರಷ್ಟು ಸೀಲ್ ಆಗಿರುವ ಕಾರಣ ಈ ವಾಹನದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳಿಂದ ಪಾರಾಗಬಹುದು .