Rahul Gandhiಯನ್ನು 'ನರ್ವಸ್ ಮುಖಂಡ' ಎಂದು ಕರೆದ US ಮಾಜಿ ರಾಷ್ಟ್ರಾಧ್ಯಕ್ಷ ಒಬಾಮಾ

ತಮ್ಮ ಆತ್ಮಚರಿತ್ರೆಯಾದ 'ಎ ಪ್ರಾಮಿಸ್ಡ್ ಲ್ಯಾಂಡ್' ನಲ್ಲಿ ಒಬಾಮಾ ಅವರು ರಾಹುಲ್ ಗಾಂಧಿಯ ಕುರಿತು ಟಿಪ್ಪಣಿ ಮಾಡಿದ್ದಾರೆ. ಇದರಲ್ಲಿ ರಾಹುಲ್ ಅವರನ್ನು ಕಡಿಮೆ ಅರ್ಹತೆ ಮತ್ತು ಉತ್ಸಾಹದ ಕೊರತೆಯಿರುವ ನಾಯಕ ಎಂದು ಬಣ್ಣಿಸಿದ್ದಾರೆ.

Last Updated : Nov 13, 2020, 12:28 PM IST
  • ಒಬಾಮಾ ಅವರ ಆತ್ಮಚರಿತ್ರೆ 'ಎ ಪ್ರಾಮಿಸ್ಡ್ ಲ್ಯಾಂಡ್' ಪ್ರಕಟಗೊಂಡಿದೆ.
  • ಇದರಲ್ಲಿ ಅವರು ರಾಹುಲ್ ಗಾಂಧಿಯನ್ನು ಅವರು ಓರ್ವ ಉತ್ಸಾಹದ ಕೊರತೆ ಇರುವ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
  • ಜೊತೆಗೆ ಮನ್ ಮೋಹನ್ ಸಿಂಗ್ ಅವರನ್ನು ಓರ್ವ ಆಘಾದ ನಿಷ್ಠೆಯುಳ್ಳ ವ್ಯಕ್ತಿ ಎಂದು ಕರೆದಿದ್ದಾರೆ.
Rahul Gandhiಯನ್ನು 'ನರ್ವಸ್ ಮುಖಂಡ' ಎಂದು ಕರೆದ US ಮಾಜಿ ರಾಷ್ಟ್ರಾಧ್ಯಕ್ಷ ಒಬಾಮಾ  title=

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ (Bark Obama) ಅವರ ಹೊಸ ಪುಸ್ತಕ ಪ್ರಕಟಗೊಂಡಿದೆ.ಈ ಪುಸ್ತಕದಲ್ಲಿ ಒಬಾಮಾ ಅವರು ಮಾಜಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಂಸದ ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆಯೂ ಉಲ್ಲೇಖಿಸಿದ್ದಾರೆ.ಅಬಾಮಾ ತಮ್ಮ ಆತ್ಮಚರಿತ್ರೆ 'ಎ ಪ್ರಾಮಿಸ್ಡ್ ಲ್ಯಾಂಡ್' ನಲ್ಲಿ ರಾಹುಲ್ ಗಾಂಧಿಯನ್ನು ಕಡಿಮೆ ಅರ್ಹತೆ ಮತ್ತು ಉತ್ಸಾಹದ ಕೊರತೆಯಿರುವ ನಾಯಕ ಎಂದು ಬಣ್ಣಿಸಿದ್ದಾರೆ.

ಇದನ್ನು ಓದಿ- ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ವಿವಾದಾತ್ಮಕ ಕೃಷಿ ಕಾಯ್ದೆಗಳು ರದ್ದು-ರಾಹುಲ್ ಗಾಂಧಿ

ಬರಾಕ್ ಒಬಾಮಾ ಅವರು ರಾಹುಲ್ ಗಾಂಧಿಯನ್ನು ಪುಸ್ತಕದಲ್ಲಿ ವಿದ್ಯಾರ್ಥಿಗೆ ಹೋಲಿಸಿದ್ದಾರೆ. ರಾಹುಲ್ ಗಾಂಧಿ ಅವರು ಕೋರ್ಸ್‌ವರ್ಕ್ ಮಾಡಿದ ಮತ್ತು ಶಿಕ್ಷಕರನ್ನು ಮೆಚ್ಚಿಸಲು ಉತ್ಸುಕರಾಗಿದ್ದಾರೆ ಆದರೆ ಈ ವಿಷಯವನ್ನು ಕರಗತ ಮಾಡಿಕೊಳ್ಳುವ ಯೋಗ್ಯತೆ ಇಲ್ಲ ಅಥವಾ ಅವರಲ್ಲಿ ಇದರ ಉತ್ಸಾಹದ ಕೊರತೆ ಇದೆ ಎಂದು ಒಬಾಮಾ  ಬರೆದಿದ್ದಾರೆ. ಇದರೊಂದಿಗೆ ಒಬಾಮಾ ರಾಹುಲ್ ಗಾಂಧಿಯನ್ನು ನರ್ವಸ್ ಮುಖಂಡ ಎಂದು ಕರೆದಿದ್ದಾರೆ. 2017 ರಲ್ಲಿ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದರು.

ಮನ್ ಮೋಹನ್ ಸಿಂಗ್ ಅವರಲ್ಲಿ ಆಘಾದ ನಿಷ್ಠೆ ಇದೆ ಎಂದ ಒಬಾಮಾ
ಬರಾಕ್ ಒಬಾಮ ತಮ್ಮ ಪುಸ್ತಕದಲ್ಲಿ, ರಾಹುಲ್ ಗಾಂಧಿ ಜೊತೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೊಗಳಿದ್ದಾರೆ. ಮನಮೋಹನ್ ಸಿಂಗ್ ಬಗ್ಗೆ ಬರೆದುಕೊಂಡಿರುವ ಒಬಾಮಾ, ಮನಮೋಹನ್ ಸಿಂಗ್ ಓರ್ವ ಆಘಾದವಾದ ನಿಷ್ಠೆಯುಳ್ಳ ನಾಯಕರಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ- ನಿಮ್ಮಂತಹ ಪ್ರಧಾನಿ ಅನುಪಸ್ಥಿತಿ ಭಾರತವನ್ನು ಕಾಡುತ್ತಿದೆ: ಮನಮೋಹನ್ ಸಿಂಗ್ ಅವರಿಗೆ ರಾಹುಲ್ ಗಾಂಧಿ

ಜೋ ಬೈಡನ್ ಅವರನ್ನು ಸಭ್ಯ ವ್ಯಕ್ತಿ ಎಂದ ಒಬಾಮಾ 
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿರುವ ಬೈಡನ್ ಕುರಿತು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವ ಒಬಾಮಾ, ಅವರೊಬ್ಬ ಯೋಗ್ಯ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು 'ಸ್ಟ್ರೀಟ್ ಸ್ಮಾರ್ಟ್ ಬಾಸ್' ಗೆ ಹೋಲಿಸಿದ್ದಾರೆ. ಒಂದು ಸಮಯದಲ್ಲಿ ಚಿಕಾಗೊವನ್ನು ನಡೆಸುವ ಸ್ಟ್ರೀಟ್ ಸ್ಮಾರ್ಟ್ ಬಾಸ್ ಗಳನ್ನು ಪುಟಿನ್ ನೆನಪಿಸುತ್ತಾನೆ ಎಂದು ಅವರು ಬರೆದಿದ್ದಾರೆ.

Trending News