ಅಫ್ಘಾನಿಸ್ತಾನದ ಕಂದಹಾರ್‌ ಮಸೀದಿಯೊಂದರಲ್ಲಿ ಬಾಂಬ್ ಸ್ಪೋಟ, 32 ಸಾವು

ದಕ್ಷಿಣ ಅಫ್ಘಾನಿಸ್ತಾನದ ನಗರ ಕಂದಹಾರ್‌ನಲ್ಲಿರುವ ಶಿಯಾ ಮಸೀದಿಯೊಂದರಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಿಂದಾಗಿ ಸುಮಾರು 32 ಜನರು ಸಾವನ್ನಪ್ಪಿರುವುದಲ್ಲದೆ 53 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

Written by - Zee Kannada News Desk | Last Updated : Oct 15, 2021, 05:02 PM IST
  • ದಕ್ಷಿಣ ಅಫ್ಘಾನಿಸ್ತಾನದ ನಗರ ಕಂದಹಾರ್‌ನಲ್ಲಿರುವ ಶಿಯಾ ಮಸೀದಿಯೊಂದರಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಿಂದಾಗಿ ಸುಮಾರು 32 ಜನರು ಸಾವನ್ನಪ್ಪಿರುವುದಲ್ಲದೆ 53 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಅಫ್ಘಾನಿಸ್ತಾನದ ಕಂದಹಾರ್‌ ಮಸೀದಿಯೊಂದರಲ್ಲಿ ಬಾಂಬ್ ಸ್ಪೋಟ, 32 ಸಾವು  title=
ಸಾಂದರ್ಭಿಕ ಚಿತ್ರ

ನವದೆಹಲಿ: ದಕ್ಷಿಣ ಅಫ್ಘಾನಿಸ್ತಾನದ ನಗರ ಕಂದಹಾರ್‌ನಲ್ಲಿರುವ ಶಿಯಾ ಮಸೀದಿಯೊಂದರಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಿಂದಾಗಿ ಸುಮಾರು 32 ಜನರು ಸಾವನ್ನಪ್ಪಿರುವುದಲ್ಲದೆ 53 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ನಗರದ ಕೇಂದ್ರ ಮಿರ್ವಾಯಿಸ್ ಆಸ್ಪತ್ರೆಯ ವೈದ್ಯರು ಮಾತನಾಡಿ "ಮೂವತ್ತೆರಡು ದೇಹಗಳು ಮತ್ತು 53 ಗಾಯಗೊಂಡ ಜನರನ್ನು ಇಲ್ಲಿಯವರೆಗೆ ನಮ್ಮ ಆಸ್ಪತ್ರೆಗೆ ತರಲಾಗಿದೆ." ಎಂದು ತಿಳಿಸಿದರು.ಸ್ಫೋಟದ ಕಾರಣ ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ಇಸ್ಲಾಮಿಕ್ ಸ್ಟೇಟ್ ಗುಂಪು ಹೇಳಿಕೊಂಡ ಉತ್ತರ ನಗರದ ಕುಂಡುಜ್‌ನ ಮಸೀದಿಯಲ್ಲಿ ಶಿಯಾ ಆರಾಧಕರ ಮೇಲೆ ಆತ್ಮಾಹುತಿ ದಾಳಿ ನಡೆದ ಒಂದು ವಾರದ ನಂತರ ಈ ಘಟನೆ ನಡೆದಿದೆ.

ಇದನ್ನೂ ಓದಿ: Bangladesh ಪ್ರಧಾನಿ ಶೇಖ್ ಹಸೀನಾ ಹತ್ಯೆಗೆ ಸಂಚು ರೂಪಿಸಿದ್ದ 14 ಉಗ್ರರಿಗೆ ಮರಣದಂಡನೆ

ಇತರ ವೈದ್ಯಕೀಯ ಮೂಲಗಳು ಮತ್ತು ಪ್ರಾಂತೀಯ ಅಧಿಕಾರಿಯೊಬ್ಬರು 30 ಕ್ಕಿಂತ ಹೆಚ್ಚಿನ ಸಂಖ್ಯೆಯನ್ನು ದೃಢಪಡಿಸಿದರು, ಮತ್ತು ಕನಿಷ್ಠ 15 ಆಂಬ್ಯುಲೆನ್ಸ್‌ಗಳು ಘಟನಾ ಸ್ಥಳಕ್ಕೆ ಧಾವಿಸುತ್ತಿವೆ.ಇದೇ ವೇಳೆ ಮಸೀದಿಯ ಫೇಸ್‌ಬುಕ್ ಖಾತೆಯು ರಕ್ತದಾನಕ್ಕಾಗಿ ಮನವಿ ಮಾಡಿದೆ.

ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ಮೂರು ಸ್ಪೋಟಗಳು ಸಂಭವಿಸಿವೆ ಎನ್ನಲಾಗಿದೆ.ಅದರಲ್ಲಿ , ಒಂದು ಮಸೀದಿಯ ಮುಖ್ಯ ಬಾಗಿಲಲ್ಲಿ, ಇನ್ನೊಂದು ದಕ್ಷಿಣದ ಪ್ರದೇಶದಲ್ಲಿ, ಮತ್ತು ಮೂರನೆಯದು ಪ್ರಾರ್ಥನೆ ಮಾಡುವ ಮೊದಲು ಭಕ್ತರು ತೊಳೆಯುವ ಸ್ಥಳದಲ್ಲಿ ಎನ್ನಲಾಗಿದೆ.

ಇದನ್ನೂ ಓದಿ: ಬಾಂಗ್ಲಾದೇಶ ಭೇಟಿ ವೇಳೆ ಮೋದಿಗೆ ಗರಿಷ್ಟ ಭದ್ರತೆ ಒದಗಿಸಲಾಗುವುದು - ಎ.ಕೆ.ಅಬ್ದುಲ್ ಮೊಮೆನ್

ಈಗ ಈ ಘಟನೆ ಕುರಿತಾಗಿ ಪ್ರತಿಕ್ರಿಯಿಸಿರುವ ತಾಲಿಬಾನ್ ಚಳುವಳಿಯ ಆಂತರಿಕ ಸಚಿವಾಲಯದ ವಕ್ತಾರ ಕರಿ ಸೈಯದ್ ಖೋಸ್ತಿ"ಕಂದಹಾರ್ ನಗರದ ಮೊದಲ ಜಿಲ್ಲೆಯ ಶಿಯಾ ಬಂಧುಗಳ ಮಸೀದಿಯಲ್ಲಿ ಸ್ಫೋಟ ಸಂಭವಿಸಿರುವುದನ್ನು ತಿಳಿದು ನಾವು ದುಃಖಿತರಾಗಿದ್ದೇವೆ, ಇದರಲ್ಲಿ ನಮ್ಮ ಹಲವಾರು ದೇಶವಾಸಿಗಳು ಹುತಾತ್ಮರಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ" ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News