ನದಿಗೆ ಬಿದ್ದ ಅಮೇರಿಕ ವಿಮಾನ; 136 ಪ್ರಯಾಣಿಕರು ಸುರಕ್ಷಿತ

ಗ್ವಾಟೆನಾಮಾದಿಂದ ಬಂದ ವಿಮಾನ ಫ್ಲೋರಿಡಾದ ಜಾಕ್ಸನ್ ವಿಲ್ಲೆ ನೌಕಾನೆಲೆಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಈ ಘಟನೆ ಸಂಭವಿಸಿದೆ. 

Last Updated : May 4, 2019, 11:32 AM IST
ನದಿಗೆ ಬಿದ್ದ ಅಮೇರಿಕ ವಿಮಾನ; 136 ಪ್ರಯಾಣಿಕರು ಸುರಕ್ಷಿತ  title=
file photo

ವಾಷಿಂಗ್ಟನ್: ಅಮೆರಿಕಾದ ಫ್ಲೋರಿಡಾದಲ್ಲಿ ಶುಕ್ರವಾರ ಬೃಹತ್ ವಿಮಾನ ಅಪಘಾತ ಸಂಭವಿಸಿದೆ. 136 ಪ್ರಯಾಣಿಕರಿದ್ದ ಬೋಯಿಂಗ್ 737 ವಿಮಾನ ರನ್ ವೇಯಿಂದ ಜಾರಿ ನದಿಗೆ ಬಿದ್ದಿರುವ ಘಟನೆ ನಡೆದಿದೆ. ಆದರೆ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗ್ವಾಟೆನಾಮಾದಿಂದ ಬಂದ ವಿಮಾನ ಫ್ಲೋರಿಡಾದ ಜಾಕ್ಸನ್ ವಿಲ್ಲೆ ನೌಕಾನೆಲೆಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಇಬ್ಬರು ಪ್ರಯಾಣಿಕರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ವಿಮಾನ ಕೆಳಗಿಳಿಯುವ ಸಂದರ್ಭದಲ್ಲಿ ಬಿರುಗಾಳಿ ಬೀಸುತ್ತಿತ್ತು ಎನ್ನಲಾಗಿದೆ. ಅಮೇರಿಕಾ ಸ್ಥಳೀಯ ಕಾಲಮಾನ ರಾತ್ರಿ 9.40ರಲ್ಲಿ ಈ ಘಟನೆ ಸಂಭವಿಸಿದೆ. 

Trending News