ನವದೆಹಲಿ: Tackle Deadly Covid - ವಿಶ್ವಾದ್ಯಂತ ಕರೋನಾ ಸಾಂಕ್ರಾಮಿಕದ ಭಯವಿದೆ ಮತ್ತು ಎಲ್ಲೆಡೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೇ ವೇಳೆ ನಿಮ್ಮೊಳಗಿನ ಭಯ ಖಂಡಿತ ಕಡಿಮೆಯಾಗುವ ಸುದ್ದಿಯೊಂದನ್ನು ವಿಜ್ಞಾನಿಗಳು (Scientists) ಪ್ರಕಟಿಸಿದ್ದಾರೆ. ಇತ್ತೀಚೆಗೆ ನಡೆಸಲಾಗಿರುವ ಅಧ್ಯಯನವೊಂದು ಶೀತದಿಂದ (Common Coughs) ಕೊರೊನಾ (Covid-19) ವಿರುದ್ಧ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಬಹಿರಂಗಪಡಿಸಿದೆ.
ಕೊರೊನಾ ವಿರುದ್ಧ ಶೀತ 'ರಕ್ಷಣಾತ್ಮಕ ಗುರಾಣಿ'
'ದಿ ಸನ್' ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ವಿಜ್ಞಾನಿಗಳು ತಮ್ಮ ಅಧ್ಯಯನದಲ್ಲಿ ಕೆಮ್ಮು ಮತ್ತು ಶೀತವು ಟಿ-ಕೋಶಗಳನ್ನು ಉತ್ತೇಜಿಸುತ್ತವೆ ಎನ್ನಲಾಗಿದೆ. ಅಂದರೆ ರಕ್ತ ಕಣಗಳು ವೈರಸ್‌ಗಳನ್ನು ಪತ್ತೆಹಚ್ಚುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಇದಲ್ಲದೆ, ಕೋವಿಡ್‌ನಲ್ಲಿ ವಾಸನೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಮೂಲಕ ನಮ್ಮ ರೋಗನಿರೋಧಕ ಶಕ್ತಿಯು ಬಲಗೊಳ್ಳುತ್ತದೆ.
ನಾವು ವೈರಸ್ ಸೋಂಕಿಗೆ ಒಳಗಾದಾಗ, ದೇಹದಲ್ಲಿ ಟಿ-ಕೋಶಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ಇವುಗಳ ಮೂಲಕ ನಾವು ಕೋವಿಡ್‌ನ ಯಾವುದೇ ಸೋಂಕಿನಿಂದ ರಕ್ಷಿಸಲು ಸಿದ್ಧರಾಗುತ್ತೇವೆ ಎಂದು ಡಾ ರಿಯಾ ಕುಂದು ಹೇಳಿದ್ದಾರೆ. ಇದು ಒಂದು ಪ್ರಮುಖ ಆವಿಷ್ಕಾರವಾಗಿದೆ, ಆದರೆ ಇದು ಕೇವಲ ಒಂದು ರಕ್ಷಣೆಯ ವಿಧಾನವಾಗಿದೆ ಮತ್ತು ಅದರ ಮೇಲೆ ಮಾತ್ರ ಅವಲಂಬಿಸಬಾರದು ಎಂದು ವೈದ್ಯರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಟಿ-ಕೋಶಗಳಿಂದ ರಕ್ಷಣೆ ಪಡೆಯುವುದು
ಕರೋನಾವನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಲಸಿಕೆ ಮತ್ತು ಪ್ರತಿಯೊಬ್ಬರೂ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯವಾಗಿದೆ, ಜೊತೆಗೆ ಬೂಸ್ಟರ್ ಡೋಸ್ ಅನ್ನು ಸಹ ಅವರು ತೆಗೆದುಕೊಳ್ಳಬೇಕು.
ಕರೋನಾ ಸೋಂಕಿತರೊಂದಿಗೆ ವಾಸಿಸುತ್ತಿದ್ದ 52 ಜನರ ಗುಂಪಿನ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದೆ. ಆದರೆ ಇವರಲ್ಲಿ ಅರ್ಧದಷ್ಟು ಜನರಿಗೆ ಮಾತ್ರ ಸೋಂಕು ತಗುಲಿದೆ. ಸೋಂಕಿಗೆ ಬಲಿಯಾಗದ 26 ಜನರು ಈ ಹಿಂದೆ ಮತ್ತೊಂದು ಕರೋನವೈರಸ್ ಸೋಂಕಿಗೆ ಒಳಗಾಗಿದ್ದರಿಂದ ಹೆಚ್ಚಿನ ಟಿ-ಸೆಲ್ ಮಟ್ಟವನ್ನು ಹೊಂದಿದ್ದಾರೆ ಎಂದು ರಕ್ತ ಪರೀಕ್ಷೆಗಳು ತೋರಿಸಿವೆ.
ಹಳೆಯ ಕೋವಿಡ್ ಲಸಿಕೆ ಇನ್ನೂ ಪರಿಣಾಮಕಾರಿಯಾಗಿದೆ
ಕನಿಷ್ಠ 4 ಇತರ ರೀತಿಯ ಕರೋನಾ ವೈರಸ್‌ಗಳು ಸಾಮಾನ್ಯವಾಗಿ ಯಾವುದೇ ವ್ಯಕ್ತಿಗೆ ಸೋಂಕು ತರುತ್ತವೆ. ಇಂತಹ ವೈರಸ್ ಸೋಂಕಿಗೆ ಒಳಗಾದ ಪ್ರತಿ ಐವರಲ್ಲಿ ಒಬ್ಬರು ಶೀತವನ್ನು ಹೊಂದಿದ್ದಾರೆ. ತಮ್ಮ ದೇಹದಲ್ಲಿ T-ಸೆಲ್ ಗಳನ್ನು ಹೊಂದಿರುವವರು ಎಲ್ಲಾ ಕೊರೊನಾವೈರಸ್‌ಗಳ ವಿರುದ್ಧ ಒಂದೇ ಪ್ರಭಾವ ತೋರಿಸಿದೆ ಎಂದು ಅಧ್ಯಯನವು ಕಂಡುಹಿಡಿದಿದೆ, ಇದು ಇತರ ವೈರಸ್‌ಗಳ ವಿರುದ್ಧ ಬಗ್ ರೀತಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ದೇಹವನ್ನು ಪ್ರವೇಶಿಸದಂತೆ ತಡೆಯುತ್ತದೆ.
ಇದನ್ನೂ ಓದಿ-Corona Update India: ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ ಮತ್ತೆ ಹಳ್ಳಿಗಳತ್ತ ತೆರಳುತ್ತಿರುವ ಕಾರ್ಮಿಕರು
ವಾಸ್ತವದಲ್ಲಿ ಟಿ-ಸೆಲ್ ಗಳು ಅತಿ ಹೆಚ್ಚು ಬಾರಿ ಮ್ಯೂತೆತ್ ಗೊಲ್ಲದ ವೈರಸ್ ರೂಪಾಂತರಿ ಮೇಲೆ ಕಾರ್ಯನಿರ್ವಹಿಸುತ್ತವೆ. ದೇಹದ ಪ್ರತಿಕಾಯಗಳು ಕಡಿಮೆ ಪರಿಣಾಮಕಾರಿಯಾಗಿದ್ದರೂ ಸಹ, ನಮ್ಮ ಹಳೆಯ ಲಸಿಕೆಗಳು ಇನ್ನೂ ಹೊಸ ಕೋವಿಡ್ ರೂಪಾಂತರಿ ವಿರುದ್ಧ ಕಾರ್ಯನಿರ್ವಹಿಸುತ್ತಿರುವುದಕ್ಕೆ ಇದೇ ಕಾರಣ.
ಇದನ್ನೂ ಓದಿ-Pig heart to Human:ಮಾನವನಿಗೆ 'ಹಂದಿ ಹೃದಯ' ಅಳವಡಿಸಿದ ವೈದ್ಯರ ತಂಡ
ಈ ಕ್ರಾಸ್-ಪ್ರೊಟೆಕ್ಷನ್ ಎಂದರೆ ಎಲ್ಲಾ ಕರೋನಾ ವೈರಸ್‌ಗಳ ವಿರುದ್ಧ ಕಾರ್ಯನಿರ್ವಹಿಸುವ ಸುರಕ್ಷತಾ ಗುರಾಣಿ ಎಂದು ತಜ್ಞರು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಪ್ರೊಫೆಸರ್ ಅಜಿತ್ ಲಾಲ್ವಾನಿ, 'ದೇಹದಲ್ಲಿರುವ ನೆಗಡಿಯಿಂದ ತಯಾರಾದ ಟಿ-ಕೋಶಗಳು ಕೊರೊನಾ ವೈರಸ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಸ್ಪಷ್ಟವಾಗಿದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ-ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾದರೆ ಬಿಜೆಪಿ ಸರ್ಕಾರವೇ ನೇರ ಹೊಣೆ: ಸಿದ್ದರಾಮಯ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.