Pig heart to Human:ಮಾನವನಿಗೆ 'ಹಂದಿ ಹೃದಯ' ಅಳವಡಿಸಿದ ವೈದ್ಯರ ತಂಡ

Transplant pig heart into human: 57 ವರ್ಷದ ರೋಗಿಗೆ ಹಂದಿಯ ಹೃದಯವನ್ನು ಅಮೆರಿಕದ ವೈದ್ಯರು ಯಶಸ್ವಿಯಾಗಿ ಅಳವಡಿಸಿದ್ದಾರೆ.

Edited by - Chetana Devarmani | Last Updated : Jan 11, 2022, 02:31 PM IST
  • ವೈದ್ಯಕೀಯ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ
  • ಮಾನವನಿಗೆ 'ಹಂದಿ ಹೃದಯ' ಅಳವಡಿಸಿದ ವೈದ್ಯರ ತಂಡ
  • ಯಶಸ್ವಿಯಾಗಿ ಕಸಿ ಮಾಡಿದ ಅಮೆರಿಕದ ಶಸ್ತ್ರಚಿಕಿತ್ಸಕರು
Pig heart to Human:ಮಾನವನಿಗೆ 'ಹಂದಿ ಹೃದಯ' ಅಳವಡಿಸಿದ ವೈದ್ಯರ ತಂಡ  title=
ಹೃದಯ ಕಸಿ

ನವದೆಹಲಿ: ವೈದ್ಯಕೀಯ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ  ಅಮೆರಿಕದ ಶಸ್ತ್ರಚಿಕಿತ್ಸಕರು ಹೃದ್ರೋಗ ಹೊಂದಿರುವ 57 ವರ್ಷದ ರೋಗಿಗೆ ಹಂದಿಯ (Porcine) ಹೃದಯವನ್ನು ಯಶಸ್ವಿಯಾಗಿ ಕಸಿ (Transplant pig heart into human) ಮಾಡಿದ್ದಾರೆ. 

ಮಾರಣಾಂತಿಕ ಹೃದ್ರೋಗ ಹೊಂದಿರುವ 57 ವರ್ಷದ ಮೇರಿಲ್ಯಾಂಡ್ ನಿವಾಸಿಗೆ ಹಂದಿ ಹೃದಯವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಡೇವಿಡ್ ಬೆನೆಟ್ ತೀವ್ರವಾದ ಹೃದಯ ಸಂಬಂಧಿ (Heart disease) ಕಾಯಿಲೆಯಿಂದ ಬಳಲುತ್ತಿದ್ದರು. 

ಶುಕ್ರವಾರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ಹಂದಿ ಹೃದಯವನ್ನು ಯಶಸ್ವಿಯಾಗಿ (OrganTransplant) ಜೋಡಣೆ ಮಾಡಲಾಗಿದೆ. ಡೇವಿಡ್ ಬೆನೆಟ್ ಗೆ ಮಾನವ ಕಸಿ ಮಾಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಇದನ್ನೂ ಓದಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಗೆ Covid ದೃಢ, ICUಗೆ ದಾಖಲು

ಇದು ರೋಗಿಗೆ ಪ್ರಸ್ತುತ ಲಭ್ಯವಿರುವ ಏಕೈಕ ಆಯ್ಕೆಯಾಗಿದೆ ಎಂದು ಮೇರಿಲ್ಯಾಂಡ್ ಮೆಡಿಸಿನ್ ವಿಶ್ವವಿದ್ಯಾಲಯವು ಸೋಮವಾರ (ಜನವರಿ 10, 2022) ಐತಿಹಾಸಿಕ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಹೇಳಿದೆ.

ಈ ಅಂಗಾಂಗ ಕಸಿ ಮೊದಲ ಬಾರಿಗೆ ತಳೀಯವಾಗಿ ಮಾರ್ಪಡಿಸಿದ ಪ್ರಾಣಿಗಳ ಹೃದಯವು (Animal Heart) ದೇಹದಿಂದ ತಕ್ಷಣ ತಿರಸ್ಕರಿಸದೆ ಮಾನವ ಹೃದಯದಂತೆ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸಿದೆ ಎಂದು ವಿಶ್ವವಿದ್ಯಾಲಯದ ಹೇಳಿಕೆಯಲ್ಲಿ ತಿಳಿಸಿದೆ. 

ಈ ಕಸಿ ಜೀವ ಉಳಿಸುವ ಪ್ರಯೋಜನಗಳನ್ನು ನೀಡುತ್ತದೆಯೇ ಎಂದು ನಿರ್ಧರಿಸಲು ರೋಗಿ ಡೇವಿಡ್ ಬೆನೆಟ್ ಅವರನ್ನು ಮುಂದಿನ ದಿನಗಳು ಮತ್ತು ವಾರಗಳಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವೈದ್ಯರ ತಂದ ತಿಳಿಸಿದೆ. 

 

 

ಹಂದಿಯ ಹೃದಯವನ್ನು ಶಸ್ತ್ರಚಿಕಿತ್ಸೆಯಿಂದ ಕಸಿ ಮಾಡಿದ ಬಾರ್ಟ್ಲಿ ಪಿ ಗ್ರಿಫಿತ್ "ಇದೊಂದು ಅದ್ಭುತ ಶಸ್ತ್ರಚಿಕಿತ್ಸೆಯಾಗಿದೆ ಮತ್ತು ಅಂಗಾಂಗ ಕೊರತೆಯ ಬಿಕ್ಕಟ್ಟನ್ನು ಪರಿಹರಿಸಲು ನಮ್ಮನ್ನು ಒಂದು ಹೆಜ್ಜೆ ಹತ್ತಿರಕ್ಕೆ ತರುತ್ತದೆ" ಎಂದು ಹೇಳಿದರು.

ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ವಿಸ್ತೃತ ಪ್ರವೇಶ (compassionate use) ನಿಬಂಧನೆಯ ಮೂಲಕ ಶಸ್ತ್ರಚಿಕಿತ್ಸೆಗೆ ತುರ್ತು ಅನುಮತಿ ನೀಡಿದೆ ಎಂಬುದು ಗಮನಾರ್ಹವಾಗಿದೆ.

ತಳೀಯವಾಗಿ-ಮಾರ್ಪಡಿಸಿದ ಹಂದಿಯ ಹೃದಯವು ಗಂಭೀರವಾದ ಅಥವಾ ಮಾರಣಾಂತಿಕ ವೈದ್ಯಕೀಯ ಸ್ಥಿತಿಯನ್ನು ಎದುರಿಸುತ್ತಿರುವ ರೋಗಿಗೆ ಲಭ್ಯವಿರುವ ಏಕೈಕ ಆಯ್ಕೆಯಾಗಿದ್ದಾಗ ಇದನ್ನು ಬಳಸಲಾಗುತ್ತದೆ. ಬೆನೆಟ್‌ ಗೆ ಹೃದಯ ದಾನ ಮಾಡಿದ ಹಂದಿ ಜೆನೆಟಿಕ್ ಎಡಿಟಿಂಗ್ ಪ್ರೊಸೀಜರ್ ಗೆ ಒಳಗಾಗಿತ್ತು.

ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News