ಚೀನಾದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ಶಾಂಡೊಂಗ್!

ಚೀನಾ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ಶಾಂಡೊಂಗ್ ಅನ್ನು ಬಿಡುಗಡೆ ಮಾಡಿದೆ. ಈ ವಿಮಾನವಾಹಕ ನೌಕೆಯನ್ನು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬಿಡುಗಡೆ ಮಾಡಿದರು. ಶಾಂಡೊಂಗ್ 36 ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಹೊಂದಿದೆ.

Last Updated : Dec 19, 2019, 01:11 PM IST
ಚೀನಾದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ಶಾಂಡೊಂಗ್! title=

ನವದೆಹಲಿ: ಚೀನಾ ತನ್ನ ಎರಡನೇ ವಿಮಾನವಾಹಕ ನೌಕೆಯನ್ನು ದಕ್ಷಿಣ ಚೀನಾ ಸಮುದ್ರದಿಂದ ಡಿಸೆಂಬರ್ 17 ರಂದು ಬಿಡುಗಡೆ ಮಾಡಿತು. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಚೀನಾದ ಹೊಸ ವಿಮಾನವಾಹಕ ನೌಕೆ, ಶಾಂಡೊಂಗ್ ಅನ್ನು ಲೋಕಾರ್ಪಣೆ ಮಾಡಿದರು.

ಕೆಳಗಿನ ಫೋಟೋಗಳನ್ನು ನೋಡಿ

ದಕ್ಷಿಣ ಚೀನಾ ಸಮುದ್ರದ ಮೇಲಿನ ತನ್ನ ಹಕ್ಕನ್ನು ಬಲಪಡಿಸಲು ಚೀನಾ ಈ ವಿಮಾನವಾಹಕ ನೌಕೆಯನ್ನು ಪ್ರಾರಂಭಿಸಿದೆ. ಆದಾಗ್ಯೂ, ದಕ್ಷಿಣ ಚೀನಾ ಸಮುದ್ರದ ಮೇಲೆ ಬೀಜಿಂಗ್ ಹೇಳಿಕೆಯನ್ನು ಅಮೆರಿಕ ಮತ್ತು ಇತರ ದೇಶಗಳು ವಿರೋಧಿಸುತ್ತಿವೆ.

ಚೀನಾದ ಮೊದಲ ದೇಶೀಯ ವಾಹಕ:
ವಿಮಾನವಾಹಕ ನೌಕೆಗೆ ಶಾಂಡೊಂಗ್ ಪ್ರಾಂತ್ಯದ ಹೆಸರಿಡಲಾಗಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇದನ್ನು ದಕ್ಷಿಣ ಚೀನಾ ಸಮುದ್ರದಲ್ಲಿರುವ ಸನ್ಯಾದಿಂದ ಬಿಡುಗಡೆ ಮಾಡಿದರು. ಇದು ಚೀನಾದ ಮೊದಲ ಸ್ಥಳೀಯ ವಿಮಾನವಾಹಕ ನೌಕೆಯಾಗಿದೆ.

ಶಾಂಡೊಂಗ್ ವಿಮಾನವಾಹಕ ನೌಕೆ ಚೀನಾಕ್ಕೆ ಬಹಳ ಮುಖ್ಯವಾಗಿದೆ ಎಂದೇ ಹೇಳಲಾಗುತ್ತಿದೆ. ಚೀನಾ ಈಗಾಗಲೇ ಲಿಯಾನಿಂಗ್ ಹೆಸರಿನ ವಿಮಾನವಾಹಕ ನೌಕೆಯನ್ನು ಹೊಂದಿದೆ. ಲಿಯಾನಿಂಗ್ 24 ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಹೊಂದಿದೆ. ಶಾಂಡೊಂಗ್ ಲಿಯಾನಿಂಗ್ ಗಿಂತ ದೊಡ್ಡದಾಗಿದೆ. ಶಾಂಡೊಂಗ್ 36 ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಹೊಂದಿದೆ.

ಚೀನಾ ವೇಗವಾಗಿ ವಿಮಾನ ಹಡಗುಗಳನ್ನು ನಿರ್ಮಿಸುತ್ತಿದ್ದು, ಇದು ಭಾರತಕ್ಕೂ ಬಹಳ ಮುಖ್ಯವಾಗಿದೆ.

ಅಧಿಕೃತ ಮಾಧ್ಯಮಗಳ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ಐದರಿಂದ ಆರು ವಿಮಾನವಾಹಕ ನೌಕೆಗಳನ್ನು ಚೀನಾ ನಿರ್ಮಿಸಲಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ನೌಕಾಪಡೆಯು ಪ್ರಸ್ತುತ 'ಐಎನ್ಎಸ್ ವಿಕ್ರಮಾದಿತ್ಯ' ಎಂಬ ವಿಮಾನವಾಹಕ ನೌಕೆಯನ್ನು ಹೊಂದಿದೆ. ಭಾರತದ ಎರಡನೇ ವಿಮಾನವಾಹಕ ನೌಕೆ 'ಐಎನ್‌ಎಸ್ ವಿಕ್ರಾಂತ್' ಅನ್ನು ಕೊಚ್ಚಿಯಲ್ಲಿ ನಿರ್ಮಿಸಲಾಗುತ್ತಿದ್ದು, 2022 ರ ವೇಳೆಗೆ ನೌಕಾ ಸೇವೆಗೆ ಸೇರುವ ನಿರೀಕ್ಷೆಯಿದೆ.

Trending News