ಜಾಗತಿಕ ಒತ್ತಡ ಎದುರು ಮಂಡಿಯೂರಿದ ಚೀನಾ, ಕೊನೆಗೂ ಬಾಯ್ಬಿಟ್ಟ ಶಿ ಜಿನ್ ಪಿಂಗ್

ಜಿನೇವಾದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯುತ್ತಿರುವ ವಿಶ್ವ ಆರೋಗ್ಯ ಅಸೆಂಬ್ಲಿಯ 73 ನೇ ವಾರ್ಷಿಕ ಸಭೆಯಲ್ಲಿ ಜಿನ್‌ಪಿಂಗ್ ಈ ಹೇಳಿಕೆ ನೀಡಿದ್ದಾರೆ.

Last Updated : May 19, 2020, 01:51 PM IST
ಜಾಗತಿಕ ಒತ್ತಡ ಎದುರು ಮಂಡಿಯೂರಿದ ಚೀನಾ, ಕೊನೆಗೂ ಬಾಯ್ಬಿಟ್ಟ ಶಿ ಜಿನ್ ಪಿಂಗ್ title=

ನವದೆಹಲಿ: ಕೊರೊನಾ ವೈರಸ್ ಮತ್ತು ಅದರ ಸೋಂಕಿನ ಕುರಿತು ಇದುವೆರೆಗೆ ವಿಶ್ವದ ಎದುರು ಸುಳ್ಳು ಹೇಳುತ್ತಿದ್ದ ಚೀನಾ ಮುಖವಾದ ಇದೀಗ ಬಹಿರಂಗವಾಗಿದೆ. ಅಷ್ಟೇ ಅಲ್ಲ ಚೀನಾ ಇದೀಗ ಇಡೀ ವಿಶ್ವದ ಎದುರು ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್, ಕೊವಿಡ್ -19 ಜೊತೆ ಹೋರಾಡುವಲ್ಲಿ ಚೀನಾ ತನ್ನ ಅಭೂತಪೂರ್ವ ಶಕ್ತಿಯನ್ನು ವಿನಿಯೋಗಿಸಿ ವೈರಸ್ ವಿರುದ್ಧದ ಹೋರಾಟವನ್ನು ಗೆದ್ದಿದೆ. ಅಷ್ಟೇ ಅಲ್ಲ ನಾವು ನಮ್ಮ ಪ್ರಯತ್ನಗಳಿಂದ ನಮ್ಮ ನಾಗರಿಕರ ಜೀವನ ಹಾಗೂ ಆರೋಗ್ಯವನ್ನು ಸುರಕ್ಷಿತಗೊಳಿಸಿದ್ದೇವೆ ಎಂದು ಹೇಳಿದ್ದಾರೆ.

ನಾವು ನಮ್ಮ ಹೋರಾಟದುದ್ದಕ್ಕೂ ಪಾರದರ್ಶಕತೆ ಹಾಗೂ ಜವಾಬ್ದಾರಿಯಿಂದ ಹೆಜ್ಜೆ ಇಟ್ಟಿದ್ದೇವೆ ಎಂದು ಜಿನ್ ಪಿಂಗ್ ಹೇಳಿದ್ದಾರೆ. ಜೊತೆಗೆ ಸಮಯ ಇರುವಂತೆ ನಾವು ಈ ಕುರಿತು ವಿಶ್ವದ ಇತರೆ ದೇಶಗಳಿಗೂ ಕೂಡ ಮಾಹಿತಿ ನೀಡಿದ್ದೇವೆ ಮತ್ತು ಸೋಂಕು ತಡೆಗಟ್ಟುವಿಕೆ ಹಾಗೂ ಚಿಕಿತ್ಸೆಯ ವಿಧಾನಗಳ ಕುರಿತು ಮಾಹಿತಿ ಹಂಚಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನಾವು ಮಾಡಬಹುದಾದ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಅದು ನಿಶ್ಚಿತವಾಗಿ ವಿಶ್ವದ ಇತರೆ ದೇಶಗಳಿಗೆ ಸಹಾಯ ಮಾಡಲಿದೆ ಎಂದು ಚೀನಾ ಅಧ್ಯಕ್ಷರು ಹೇಳಿದ್ದಾರೆ. ಈ ಕುರಿತಾದ ತನಿಖೆಯಲ್ಲಿ ನಾವು ವಿಶ್ವದ ಯಾವುದೇ ದೇಶಗಳಿಗೆ ಸಹಕರಿಸಲು ಸಿದ್ಧರಾಗಿದ್ದೇವೆ  ಎಂದಿದ್ದಾರೆ. ಕೊರೊನಾ ಸೋಂಕು ಹರಡುವಿಕೆಯಲ್ಲಿ ಚೀನಾ ಪಾತ್ರದ ಕುರಿತು ಈಗಾಗಲೇ ಒಂದು ಸ್ವತಂತ್ರ ತನಿಖೆಯನ್ನು ಪ್ರಸ್ತಾಪಿಸಲಾಗಿರುವುದು ಇಲ್ಲಿ ಗಮನಾರ್ಹ.

ಜಿನೇವಾದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತಿರುವ ವಿಶ್ವ ಆರೋಗ್ಯ ಅಸೆಂಬ್ಲಿಯ 73ನೇ ವಾರ್ಷಿಕ ಸಭೆಯಲ್ಲಿ ಶಿ ಜಿನ್ ಪಿಂಗ್ ಈ ಹೇಳಿಕೆ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ನಿರ್ಣಯಗಳನ್ನು ಕೈಗೊಳ್ಳುವ ಅತಿ ದೊಡ್ಡ ಸಭೆ ಇದಾಗಿದೆ.

ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಈ ವರ್ಷ ಕೇವಲ ಎರಡು ದಿನಗಳ ಅವಧಿಗೆ ಈ ಸಭೆಯನ್ನು ನಡೆಸಲಾಗಿದೆ. ವಿಶ್ವಾದ್ಯಂತ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 48 ಲಕ್ಷ ಗಡಿ ದಾಟಿರುವ ಹಿನ್ನೆಲೆ ಹಿನ್ನೆಲೆ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ.ಇದುವರೆಗೆ ಈ ಸೋಂಕಿನ ಕಾರಣ ವಿಶ್ವಾದ್ಯಂತ ಮೂರು ಲಕ್ಷ 17 ಸಾವಿರ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 

ಈ ಸಭೆಯ ಮೊದಲನೆಯ ದಿನ ಯುರೋಪಿಯನ್ ಯುನಿಯನ್ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಸುಮಾರು 116 ರಾಷ್ಟ್ರಗಳು ವೈರಸ್ ನ ಮೂಲ ಪತ್ತೆ ಹಚ್ಚಲು ಸ್ವತಂತ್ರ ತನಿಖೆ ನಡೆಸುವ ಪ್ರಸ್ತಾವನೆಯನ್ನು ಮಂಡಿಸಿವೆ. ಈ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸೇರಿದಂತೆ ಬಾಂಗ್ಲಾದೇಶ, ಕೆನಡಾ, ರಷ್ಯಾ, ಇಂಡೊನೆಷ್ಯಾ, ದಕ್ಷಿಣ ಆಫ್ರಿಕಾ, ತುರ್ಕಿ, ಬ್ರಿಟನ್ ಹಾಗೂ ಜಪಾನ್ ಗಳಂತಹ ದೇಶಗಳು ಶಾಮೀಲಾಗಿವೆ. ಆದರೆ, ಈ ಪಟ್ಟಿಯಲ್ಲಿ ಅಮೇರಿಕ ಹೆಸರು ಇಲ್ಲದೆ ಇರುವುದು ಆಶ್ಚರ್ಯ ಉಂಟು ಮಾಡಿದೆ.

ಈ ಪ್ರಸ್ತಾವನೆಯಲ್ಲಿ ಚೀನಾ ಅಥವಾ ವುಹಾನ್ ಕುರಿತು ಯಾವುದೇ ಪ್ರಸ್ತಾಪ ಮಾಡಲಾಗಿಲ್ಲ. ಆದರೆ, ಈ ವೈರಸ್ ಎಲ್ಲಿಂದ ಹುಟ್ಟಿಕೊಂಡಿದೆ ಮತ್ತು ಇದು ಪ್ರಾಣಿಯಿಂದ ಮನುಷ್ಯರಿಗೆ ಇದು ಹೇಗೆ ಹರಡಿತು ಎಂಬುದರ ಕುರಿತು ವಿಶ್ವ ಆರೋಗ್ಯ ಸಂಸ್ಥೆ ತನಿಖೆ ನಡೆಸಬೇಕು ಎಂದು ಹೇಳಲಾಗಿದೆ.

ಈ ಏಳು ಪುಟಗಳ ಪ್ರಸ್ತಾವನೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರದ ತನಿಖೆ ಕೂಡ ನಡೆಯಬೇಕು ಎಂದೂ ಸಹ ಕೋರಲಾಗಿದೆ. 194 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಈ ಸಂಘಟನೆಯಲ್ಲಿ 116 ರಾಷ್ಟ್ರಗಳು ಈ ಕುರಿತು ಬೇಡಿಕೆ ಸಲ್ಲಿಸಿರುವ ಕಾರಣ ಮಂಗಳವಾರ ಈ ಪ್ರಸ್ತಾವನೆ ವೋಟಿಂಗ್ ಗೆ ಬರುವ ಎಲ್ಲಾ ಸಾಧ್ಯತೆಗಳನ್ನು ವರ್ತಿಸಲಾಗುತ್ತಿದೆ.

ಕೊರೊನಾ ವೈರಸ್ ಮಹಾಮಾರಿಯ ಆರಂಭದಲ್ಲಿ ಚೀನಾ ದೇಶ ಈ ಮಹಾಮಾರಿಗೆ ಸಂಬಂಧಿಸಿದ ಮಾಹಿತಿಯನ್ನು ಮುಚ್ಚಿಟ್ಟಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಷ್ಟೇ ಅಲ್ಲ ಈ ಮಹಾಮಾರಿಯ ಹರಡುವಿಕೆಗೆ ಚೀನಾ ಪ್ರಮುಖ ಪಾತ್ರವಹಿಸಿದೆ ಎಂದು ಆರೋಪಿಸಲಾಗುತ್ತಿದೆ. ಈ ಕುರಿತು ಚೀನಾ ಮೇಲೆ ನೇರ ಆರೋಪ ಮಾಡಿರುವ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊರೊನಾ ವೈರಸ್ ಚೀನಾದ ಲ್ಯಾಬ್ ವೊಂದರ ಉತ್ಪತ್ತಿಯಾಗಿದ್ದು, ಈ ಕುರಿತು ತಮ್ಮ ಬಳಿ ಸಾಕಷ್ಟು ಸಾಕ್ಷಾಧಾರಗಳಿವೆ ಎಂದೂ ಕೂಡ ಹೇಳಿರುವುದು ಇಲ್ಲಿ ಉಲ್ಲೇಖನೀಯ.

Trending News