Deadliest Female: ಇವಳೇ ವಿಶ್ವದ ಅತ್ಯಂತ ಕ್ರೂರ ಮಹಿಳೆ! ಸುಂದರವಾಗಿ ಕಾಣಲು 650 ಜನರ ರಕ್ತ ಕುಡಿದಿದ್ದಾಳಂತೆ

World Deadliest Female: ಒಂದೆಡೆ ಒಳ್ಳೆಯ ಜನರಿಂದ ಜಗತ್ತು ಅಲಂಕರಿಸಲ್ಪಟ್ಟಿದೆ. ಇನ್ನೊಂದೆಡೆ ಜಗತ್ತಿನಲ್ಲಿ ಜನಿಸಿದ ಕೆಲವು ಜನರ ಶೋಷಣೆಗಳು ಇಂದಿಗೂ ಕೂಡ ಜನರ ಹುಬ್ಬೇರಿಸುವಂತೆ ಮಾಡುತ್ತವೆ. ಅವರು ಪಸರಿಸಿದ ಭಯವನ್ನು ಕೇಳಿ ಇಂದಿಗೂ ಕೂಡ ಜನರು ಭಯದಿಂದ ನಡುಗುತ್ತಾರೆ. ಅಂತಹುದೇ ಒಂದು ಮಹಿಳೆಯ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.  

Written by - Nitin Tabib | Last Updated : Jul 31, 2022, 07:53 AM IST
  • ಕಾವುಂಟೆಸ್ ಎಲಿಜಬೇತ್ ಬಾಥೋರಿ ವಿಶ್ವದ ಅತ್ಯಂತ ಕ್ರೂರ ಮಹಿಳೆ
  • 650 ಜನರ ಪ್ರಾಣವನ್ನೇ ಹೀರಿದ್ದು
  • ಕೊಲೆಯ ಬಳಿಕ ಅವರ ರಕ್ತವನ್ನು ಕುಡಿಯುತ್ತಿದ್ದಳಂತೆ!
Deadliest Female: ಇವಳೇ ವಿಶ್ವದ ಅತ್ಯಂತ ಕ್ರೂರ ಮಹಿಳೆ! ಸುಂದರವಾಗಿ ಕಾಣಲು 650 ಜನರ ರಕ್ತ ಕುಡಿದಿದ್ದಾಳಂತೆ title=
Worlds Most Deadliest Woman

World Deadliest Female Drank Blood: ಮಹಿಳೆಯರು ತಮ್ಮನ್ನು ತಾವು ಚಿರಯೌವನದಿಂದ ಮತ್ತು ಸುಂದರವಾಗಿರಿಸಿಕೊಳ್ಳಲು ರಕ್ತ ಕುಡಿಯುವುದನ್ನು ನೀವು ಸಿನಿಮಾಗಳಲ್ಲಿ ನೋಡಿರಬಹುದು. ಇದು ನಿಜವಾಗಿ ಸಂಭವಿಸುವುದಿಲ್ಲ ಎಂದು ನೀವು ಯೋಚಿಸುತ್ತಿರಬೇಕು, ಆದರೆ 16 ನೇ ಶತಮಾನದಲ್ಲಿ ಅಂತಹ ಓರ್ವ ಮಹಿಳೆ ಇದ್ದಳು ಎಂದು ಜನರು ನಂಬುತ್ತಾರೆ, ಆ ಮಹಿಳೆಯನ್ನು ವಿಶ್ವದ ಅತ್ಯಂತ ಕ್ರೂರ ಮಹಿಳೆ ಎಂದು ಪರಿಗಣಿಸಲಾಗುತ್ತದೆ. ತನ್ನ ಯೌವನವನ್ನು ಉಳಿಸಿಕೊಳ್ಳಲು ಆಕೆ 600ಕ್ಕೂ ಹೆಚ್ಚು ಜನರನ್ನು ಕೊಂದು ಅವರ ರಕ್ತವನ್ನು ಕುಡಿದಿದ್ದಳು ಎನ್ನಲಾಗುತ್ತದೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, ಅವಳು ಸಾರ್ವಕಾಲಿಕ ಮಾರಣಾಂತಿಕ ಮಹಿಳಾ ಕೊಲೆಗಾರ್ತಿ ಎಂದು ಪರಿಗಣಿಸಲ್ಪಟ್ಟಿದ್ದಾಳೆ.

1560 ರಲ್ಲಿ ಜನನ
ಡೈಲಿ ಸ್ಟಾರ್ ವರದಿಯ ಪ್ರಕಾರ, ಈ ಹಂಗೇರಿಯನ್ ಮಹಿಳೆಯ ಹೆಸರು ಕೌಂಟೆಸ್ ಎಲಿಜಬೆತ್ ಬಾಥೋರಿ. ಎಲಿಜಬೇತ್ 1560 ರಲ್ಲಿ ಶ್ರೀಮಂತ ಜಮೀನುದಾರರ ಕುಟುಂಬವೊಂದರಲ್ಲಿ ಜನಿಸಿದ್ದಳು. ಈಗಿನ ಲೊವಾಸಿಯಾದಲ್ಲಿನ ಕ್ಯಾಚಟಿಸ್ ಕ್ಯಾಸಲ್‌ನಲ್ಲಿ ಅವಳು ಐಶಾರಾಮಿ ಜೀವನವನ್ನು ನಡೆಸುತ್ತಿದ್ದಳು. ಕೌಂಟೆಸ್ ತನಗೆ 'ಕೌಂಟೆಸ್ ಡ್ರಾಕುಲಾ' ಎಂಬ ಅಡ್ಡಹೆಸರನ್ನು ಹೊಂದಿದ್ದಳು. ಅರಿವಿಲ್ಲದೆ ತನ್ನ ಕುಟುಂಬದ ರೈತ ಹುಡುಗಿಯರನ್ನು ಓಡಿಸಿಕೊಂಡು ಹಾಗ್ ನಂತರ ಅವರನ್ನು ಸೆರೆಮನೆಗೆ ಕೂಡಿಹಾಕಿ ಕೊಲೆಗೈಯ್ಯುತ್ತಿದ್ದಳು. ಬಾಥೋರಿ ಕೇವಲ ಅಲ್ಲಿಗೆ ತನ್ನ ಕೃತ್ಯವನ್ನು ನಿಲ್ಲಿಸುತ್ತಿರಲಿಲ್ಲ. ನಂತರ ಆಕೆ ತನ್ನ ಬಲಿಪಶುಗಳನ್ನು ಹಿಂಸಿಸಲು ಕ್ರೂರ ವಿಧಾನಗಳನ್ನು ಅನುಸರಿಸುತ್ತಿದ್ದಳು. ಹೆಣ್ಣುಮಕ್ಕಳ ಉಗುರಿನ ಕೆಳಗೆ ಪಿನ್ ಗಳನ್ನು ಇಟ್ಟು, ಎದೆ, ಬೆರಳು, ಗುಪ್ತಾಂಗಗಳನ್ನು ಕತ್ತರಿಸಿ ಚಳಿಯಲ್ಲಿ ಹೆಪ್ಪುಗಟ್ಟಲು ಬಿಡುತ್ತಿದ್ದಳು ಎನ್ನಲಾಗುತ್ತದೆ

ರಕ್ತದಿಂದಲೇ ಬಾಥೋರಿ ಸ್ನಾನ ಮಾಡುತ್ತಿದ್ದಳು
ಆದರೆ, ಆಕೆ ಕೇವಲ ರೈತರು ಮತ್ತು ಬಡವರ ಹೆಣ್ಣುಮಕ್ಕಳನ್ನು ಮಾತ್ರ ತನ್ನ ಕೃತ್ಯಕ್ಕೆ ಬಳಸುತ್ತಿರಲಿಲ್ಲ. ಶ್ರೀಮಂತರ ಹೆಣ್ಣು ಮಕ್ಕಳನ್ನೂ ಸಹ ಹತ್ಯೆಗೈಯ್ಯುತ್ತಿದ್ದಳು. ಬಾಥೋರಿ ತನ್ನ ಬಲಿಪಶುಗಳನ್ನು ಕೊಂದ ನಂತರ ಅವರ ರಕ್ತದಿಂದ ಸ್ನಾನ ಮಾಡಿ ತನ್ನ ಯೌವನವನ್ನು ಕಾಪಾಡಿಕೊಳ್ಳಲು ಅವರ ರಕ್ತವನ್ನು ಕುಡಿಯುತ್ತಿದ್ದಳು ಎಂದು ಹೇಳಲಾಗುತ್ತದೆ. ಚಿರಯೌವನ ರಕ್ಷಣೆಗೆ ಇದು ಸಹಾಯ ಮಾಡುತ್ತದೆ ಎಂಬುದು ಬಾಥೋರಿ ಅಭಿಪ್ರಾಯವಾಗಿತ್ತು.

ಇದನ್ನೂ ಓದಿ-ಟಿ20 ಪಂದ್ಯದ ವೇಳೆ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ

1610 ರಲ್ಲಿ ಬಂಧನ
ಬಾಥೋರಿ ತುಂಬಾ ಶ್ರೀಮಂತಲಾಗಿದ್ದಳು. ಹೀಗಾಗಿ ಅವಳ ಇಚ್ಛೆಯಿಲ್ಲದೆ ಯಾರೂ ಅವಳನ್ನು ತಲುಪಲು ಸಾಧ್ಯವಿರಲಿಲ್ಲ ಎನ್ನಲಾಗುತ್ತದೆ. ಇದೆ ಕಾರಣದಿಂದ ಆಕೆ 1590 ಮತ್ತು 1610 ರ ನಡುವೆ ಹಲವಾರು ಕೊಲೆಗಳನ್ನು ಮಾಡಿದ್ದಳು. ಆದರೆ, ಅಂತಿಮವಾಗಿ ಕೌಂಟೆಸ್ ಡ್ರಾಕುಲಾಳನ್ನು ಡಿಸೆಂಬರ್ 1610 ರಲ್ಲಿ ಆಕೆಯ ನಾಲ್ವರು ಅತ್ಯಂತ ವಿಶ್ವಾಸಾರ್ಹ ಸೇವಕರೊಂದಿಗೆ ಬಂಧಿಸಲಾಯಿತು.

ಇದನ್ನೂ ಓದಿ-Viral Video: ಮೃಗಾಲಯಕ್ಕೆ ಬಂದ ಜನರಿಗೆ ತನ್ನ ಮಗು ತೋರಿಸಿದ ಗೊರಿಲ್ಲಾ!

54 ನೇ ವಯಸ್ಸಿನಲ್ಲಿ ನಿಧನ
80 ಹುಡುಗಿಯರನ್ನು ಕೊಂದ ಆರೋಪ ಆಕೆಯ ಮೇಲಿತ್ತು. ಆದರೆ, ಕೌಂಟೆಸ್ ಡೈರಿಯನ್ನು ತಾವು ನೋಡಿರುವುದಾಗಿ ಹೇಳಿಕೊಳ್ಳುವ ಸಾಕ್ಷಿಯೊಬ್ಬರು, ಈ ಸಂಖ್ಯೆ ವಾಸ್ತವದಲ್ಲಿ 650 ಇದೆ ಎಂದು ಹೇಳಿದ್ದರು. ಕೌಂಟೆಸ್‌ಗೆ ನಂತರ ಗೃಹಬಂಧನದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು ಮತ್ತು 1614 ರಲ್ಲಿ 54 ನೇ ವಯಸ್ಸಿನಲ್ಲಿ ಆಕೆ ಮರಣಹೊಂದಿದಳು ಎನ್ನಲಾಗುತ್ತದೆ. ಆದರೆ, ಬಾಥೋರಿಯ ಸಮಾಧಿ ಅವಶೇಷಗಳು ಇದುವರೆಗೆ ಪತ್ತೆಯಾಗಿಲ್ಲ. ಹೀಗಿ ಆಕೆಯ ಅಸ್ತಿತ್ವ ಇಂದಿಗೂ ಕೂಡ ನಿಗೂಢವಾಗಿಯೇ ಉಳಿದಿದೆ. ಆಕೆಯನ್ನು ಅರಮನೆಯ ಮೈದಾನದಲ್ಲಿ ಎಲ್ಲೋ ಸಮಾಧಿ ಮಾಡಲಾಗಿದೆ ಎಂಬುದು ಕೇವಲ ಜನರ ಊಹೆಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News