Video: ಪ್ರಧಾನಿಯೊಬ್ಬರು ಹೀಗೂ ಇರಲು ಸಾಧ್ಯವೇ!

ನೆದರ್ಲ್ಯಾಂಡ್ ಪ್ರಧಾನಮಂತ್ರಿ ಮಾರ್ಕ್ ರೂಟ್ ಬಹಳ ಸರಳ ಸ್ವಭಾವದ ವ್ಯಕ್ತಿ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.

Last Updated : Jun 6, 2018, 03:07 PM IST
Video: ಪ್ರಧಾನಿಯೊಬ್ಬರು ಹೀಗೂ ಇರಲು ಸಾಧ್ಯವೇ! title=

ನವದೆಹಲಿ: ನಾವೀಗ ಹೇಳಲು ಹೊರಟಿರುವುದು ಯುರೋಪಿಯನ್ ದೇಶದ ನೆದರ್ಲ್ಯಾಂಡ್ (ಹಾಲೆಂಡ್) ನ ಪ್ರಧಾನ ಮಂತ್ರಿ ಮಾರ್ಕ್ ರೂಟ್ ಅವರ ಒಂದು ದೃಶ್ಯವು ವೈರಲ್ ಆಗುತ್ತಿರುವ ಬಗ್ಗೆ. ಆ ವಿಡಿಯೋವನ್ನು ನೋಡಿದರೆ ಒಬ್ಬ ಪ್ರಧಾನಿ ಹೀಗೂ ಇರಲು ಅಥವಾ ಹೀಗೂ ಮಾಡಲು ಸಾಧ್ಯವೇ ಎಂಬ ಅಚ್ಚರಿ ಎಲ್ಲರಲ್ಲೂ ಮೂಡುತ್ತದೆ.

ಪ್ರಧಾನ ಮಂತ್ರಿ ಮಾರ್ಕ್ ರೂಟ್ ಬಹಳ ಸರಳ ಸ್ವಭಾವದ ವ್ಯಕ್ತಿ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ. ವಾಸ್ತವವಾಗಿ, ಪ್ರಧಾನ ಮಂತ್ರಿ ಮಾರ್ಕ್ ರೂಟ್ ಕ್ಯಾಬಿನೆಟ್ ಸಭೆಗಾಗಿ ಕಟ್ಟಡದ ಒಳಗೆ ಪ್ರವೇಶಿಸುತ್ತಿದ್ದಾರೆ. ಆ ಸಮಯದಲ್ಲಿ ಅವರ ಕೈ ನಲ್ಲಿದ್ದ ಕಾಫಿ ಕಪ್ ಕೈ ತಪ್ಪಿ ಕೆಳಗೆ ಬೀಳುತ್ತದೆ. ಕಾಫಿ ಕೆಳಗೆ ಚೆಲ್ಲುತ್ತದೆ. ತಕ್ಷಣ ಅದನ್ನು ಸ್ವಚ್ಛಗೊಳಿಸಲು ಕೆಲಸದವರು ಮುಂದೆ ಬರುತ್ತಾರೆ. 

ಪ್ರಧಾನಿ ಮಾರ್ಕ್ ರೂಟ್ ಕೆಲಸದವರ ಕೈಲಿದ್ದ ವೈಪರ್ ಅನ್ನು ತೆಗೆದುಕೊಂಡು ಆ ಜಾಗವನ್ನು ತಾನೇ ಸ್ವಚ್ಛಗೊಳಿಸುತ್ತಾರೆ. ಆನಂತರದಲ್ಲಿ ಉಳಿದ ಕೆಲಸಗಾರರೂ ಆ ಸ್ಥಳಕ್ಕೆ ಆಗಮಿಸುತ್ತಾರೆ. ಪ್ರಧಾನಿ ಅವರ ಈ ಕೆಲಸವನ್ನು ನೋಡಿ ಅದನ್ನು ಶ್ಲಾಘಿಸುತ್ತಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆದ ನಂತರ ವೈರಲ್ ಪಡೆಯುತ್ತಿದೆ. ಜನರು ಪ್ರಧಾನಿ ಮಾರ್ಕ್ ಅವರ ಈ ನಡೆಯನ್ನು ತುಂಬಾ ಹೊಗಳಿದ್ದಾರೆ.

Trending News