ಪಾಪುವಾ ನ್ಯೂ ಗಿನಿಯಾದಲ್ಲಿ 7.0 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಸುನಾಮಿಯ ಮುನ್ಸೂಚನೆ ನೀಡಿದೆ.

Updated: Oct 11, 2018 , 10:00 AM IST
ಪಾಪುವಾ ನ್ಯೂ ಗಿನಿಯಾದಲ್ಲಿ 7.0 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

ಸಿಡ್ನಿ: ನ್ಯೂ ಬ್ರಿಟನ್ ಪಪುವಾ ನ್ಯೂ ಗಿನಿಯಾ ದ್ವೀಪದಲ್ಲಿ ಗುರುವಾರ 7.0 ರಷ್ಟು ಭೂಕಂಪನ ಸಂಭವಿಸಿದೆ, ಇದು ಸುನಾಮಿ ಎಚ್ಚರಿಕೆ ನೀಡಿದೆ. ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಕೆಲವು ತೀವ್ರತರವಾದ ಸುನಾಮಿ ಅಲೆಗಳು ಏರಿಕೆಯಾಗಬಹುದೆಂದು ವರದಿ ಮಾಡಿದೆ.

ಪಿಎನ್ಜಿ ಮತ್ತು  ಸೊಲೊಮನ್ ದ್ವೀಪಗಳ ತೀರದಲ್ಲಿ 0.3 ಮೀಟರುಗಳಿಗಿಂತಲೂ ಕಡಿಮೆಯಿರುವ ಸುನಾಮಿಯ ಅಲೆಗಳು ಏರಿಕೆಯಾಗುತ್ತವೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಚೇರಿಯ ವಕ್ತಾರರು ಯಾವುದೇ ರೀತಿಯ ಹಾನಿ ಇಲ್ಲ ಎಂದು ಹೇಳಿದ್ದಾರೆ, ಆದರೆ ಕೆಲವು ಪ್ರಮುಖ ಭೂಕಂಪನದ ನಂತರ ಇಂತಹ ವರದಿಗಳು ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ ಎನ್ನಲಾಗಿದೆ.

ಅಮೇರಿಕಾದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ (USGS), ಭೂಕಂಪದ ಕೇಂದ್ರವು ಬ್ರಿಟನ್ ದ್ವೀಪದಲ್ಲಿ ಕಿಂಬೆ ನಗರದ ಪೂರ್ವಕ್ಕೆ 125 ಕಿಲೋಮೀಟರ್ ದೂರದಲ್ಲಿದೆ. ಭೂಕಂಪದ ಆಳವು 40 ಕಿಲೋಮೀಟರ್ಗಿಂತ ಕೆಳಗಿತ್ತು. ದೊಡ್ಡ ಭೂಕಂಪಕ್ಕೂ ಸ್ವಲ್ಪ ಮೊದಲು ಮತ್ತು ನಂತರ ಎರಡು ಸಣ್ಣ ಆಘಾತಗಳು ಕಂಡುಬಂದವು.

ಫೆಬ್ರವರಿ 26 ರಂದು ಪಾಪುವಾ ನ್ಯೂಗಿನಿಯಾದ ಪರ್ವತ ಪ್ರದೇಶಗಳಲ್ಲಿ ಭಾರಿ ಭೂಕಂಪ ಸಂಭವಿಸಿದಾಗ ಅಲ್ಲಿನ ಪರಿಸ್ಥಿತಿ.(ಸಂಗ್ರಹ ಚಿತ್ರ)

"ಭೂಕಂಪದಿಂದ ಸಾವುನೋವುಗಳು ಮತ್ತು ನಷ್ಟಗಳ ಸಾಧ್ಯತೆ ಕಡಿಮೆ" ಎಂದು USGS ಹೇಳಿದೆ, ಆದರೆ ಸುನಾಮಿ ಮತ್ತು ಭೂಕುಸಿತದ ಅಪಾಯವಿದೆ ಎಂದು ಏಕಕಾಲದಲ್ಲಿ ಎಚ್ಚರಿಸಿದೆ. ಗಮನಾರ್ಹವಾಗಿ, ಪಪುವಾ ನ್ಯೂ ಗಿನಿಯಾ ಭೂಕಂಪದ ವಿಷಯದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಬರುತ್ತದೆ.

ಫೆಬ್ರವರಿಯಲ್ಲಿ ಸಂಭವಿಸಿದ 7.5 ಪ್ರಮಾಣದ ಭೂಕಂಪದಲ್ಲಿ ಕನಿಷ್ಠ 125 ಜನರು ಪ್ರಾಣ ಕಳೆದುಕೊಂಡಿದ್ದರು.