Earthquake in California: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಸುನಾಮಿ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಈ ಮಧ್ಯೆ, ಭೂಕಂಪದ ಶಾಕಿಂಗ್ ವಿಡಿಯೋ ಸಹ ವೈರಲ್ ಆಗುತ್ತಿದೆ.
baba vanga prediction: ಬಲ್ಗೇರಿಯಾದ ಬಾಬಾ ವಂಗಾ 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಅದರ ನಂತರ, ಅವರು ತಮ್ಮ ದಿವ್ಯದೃಷ್ಟಿಯಿಂದ ಭವಿಷ್ಯವನ್ನು ನೋಡುವ ಶಕ್ತಿಯನ್ನು ಪಡೆದರು ಎಂಬುದು ಇಂದಿಗೂ ಹಲವರಲ್ಲಿರುವ ನಂಬಿಕೆ. ಹೀಗೆ ಭವಿಷ್ಯದಲ್ಲಿ ನಡೆಯಲಿರುವ ಕೆಲವು ಸಂಗತಿಗಳನ್ನು ಬಾಬಾ ವಂಗ ಈಗಾಗಲೇ ಹಲವು ಭಾರಿ ನುಡಿದಿದ್ದಾರೆ. ಇವು ಹಲವು ಭಾರಿ ನಿಜವೂ ಆಗಿದೆ. ಇದೀಗ ಮುಂದಿನ ವರ್ಷ ಏನಾಗಲಿದೆ ಎಂದು ಬಾಬಾ ವಂಗ ಭವಿಷ್ಯ ನುಡಿದಿದ್ದು, ಇದು ಜನರಲ್ಲಿ ಹೊಸ ಆತಂಕ ಸೃಷ್ಟಿಸಿದೆ.
south Pacific:ನ್ಯೂ ಕ್ಯಾಲೆಡೋನಿಯಾದ ಲಾಯಲ್ಟಿ ದ್ವೀಪಗಳ ಆಗ್ನೇಯ ಭಾಗದಲ್ಲಿ ಶುಕ್ರವಾರ 7.7 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಫೆಸಿಫಿಕ್ ರಾಷ್ಟ್ರಗಳಾದ ವನವಾಟು, ಫಿಜಿ ಹಾಗೂ ನ್ಯೂ ಕ್ಯಾಲೆಡೋನಿಯಾಗಳಲ್ಲಿ ಸುನಾಮಿ ಸಂಭವಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
Earthquake: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಪೂರ್ವ ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಹಳ್ಳಿಯ ಕಟ್ಟಡಗಳು ಹಾನಿಗೊಳಗಾಗಿವೆ. ಇದಲ್ಲದೆ, ಉತ್ತರ ಆಸ್ಟ್ರೇಲಿಯಾದಲ್ಲಿಯೂ ಭೂಮಿ ನಡುಗಿದ ಅನುಭವವಾಗಿದೆ ಎಂದು ವರದಿಯಾಗಿದೆ.
Earthquake in Solomon Islands: ಮಂಗಳವಾರ (ನವೆಂಬರ್ 22) ಪೆಸಿಫಿಕ್ ಮಹಾಸಾಗರದ ಸೊಲೊಮನ್ ದ್ವೀಪಗಳಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಎಎನ್ಐ ಪ್ರಕಾರ, ಭೂಕಂಪನದಿಂದ ಭೂಕುಸಿತವೂ ಉಂಟಾಗಿದೆ. ಪಾಪುವಾ ನ್ಯೂ ಗಿನಿ ಭಾಗಗಳಲ್ಲಿ ವಿದ್ಯುತ್ ಕಡಿತವು ವರದಿಯಾಗಿದೆ. ಭೂಕಂಪನದ ಅನುಭವವು ಕೇಂದ್ರಬಿಂದುವಿನ ಸಮೀಪವಿರುವ ಕೌಂಟಿಗಳ ನಗರಗಳಿಂದ ಪೋರ್ಟ್ ಮೊರೆಸ್ಬಿಯ ರಾಜಧಾನಿಯವರೆಗೆ ವ್ಯಾಪಕವಾಗಿ ಹಬ್ಬಿದೆ ಎಂದು ತಿಳಿದುಬಂದಿದೆ.
ಖಾಸಗಿ ವಲಯದ ಬ್ಯಾಂಕಿಂಗ್ ಷೇರುಗಳಲ್ಲಿನ ತೀವ್ರ ಮಾರಾಟದ ಒತ್ತಡದ ಮಧ್ಯೆ ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಸೂಚ್ಯಂಕಗಳು ಮಧ್ಯಾಹ್ನ ವಹಿವಾಟಿನಲ್ಲಿ ಕುಸಿದವು, ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳು ಜಾಗತಿಕ ಹೂಡಿಕೆದಾರರನ್ನು ಬೆಚ್ಚಿ ಬೀಳಿಸುತ್ತಿವೆ. ಈ ಹಿನ್ನಲೆಯಲ್ಲಿ ಸೆನ್ಸೆಕ್ಸ್ ಸೂಚ್ಯಂಕವು 1,966.04 ಪಾಯಿಂಟ್ಗಳಷ್ಟು ಕುಸಿದು 28,613.05 ಕ್ಕೆ ತಲುಪಿದೆ, ಮತ್ತು ವಿಶಾಲವಾದ ನಿಫ್ಟಿ ಮಾನದಂಡವು 560 ಪಾಯಿಂಟ್ಗಳನ್ನು ಇಳಿಸಿ ಮೂರು ವರ್ಷಗಳ ಕನಿಷ್ಠ 8,407.05 ಕ್ಕೆ ತಲುಪಿದೆ.
"ಭೂಕಂಪವು ದೊಡ್ಡ ಅಲೆಗಳನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿರದ ಕಾರಣ ನಾವು ಸುನಾಮಿ ಎಚ್ಚರಿಕೆ ನೀಡಿಲ್ಲ" ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದರು.
ಇಂಡೋನೇಷ್ಯಾದ ದ್ವೀಪದ ಸುಲಾವೆಸಿಯನ್ನು 7.5 ಭಾರಿ ಭೂಕಂಪದ ನಂತರ ಸುನಾಮಿಯಿಂದ ಅಪ್ಪಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಪಿ ಜಿಯೋಫಿಸಿಕ್ಸ್ ಏಜೆನ್ಸಿ ಉಲ್ಲೇಖಿಸಿ ವರದಿ ಮಾಡಿದೆ.ಈ ಸುನಾಮಿಗೆ ಸುಮಾರು 400 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.