ಏಕದಿನ ಕ್ರಿಕೆಟ್ ಸರಣಿ: ಕೊನೆಗೂ ಜಯದ ಖಾತೆ ತೆರೆದ ದಕ್ಷಿಣ ಆಫ್ರಿಕಾ

     

Last Updated : Feb 11, 2018, 12:32 PM IST
ಏಕದಿನ ಕ್ರಿಕೆಟ್ ಸರಣಿ: ಕೊನೆಗೂ ಜಯದ ಖಾತೆ ತೆರೆದ ದಕ್ಷಿಣ ಆಫ್ರಿಕಾ title=

ಜೋಹಾನ್ಸ್ ಬರ್ಗ್: ವಾಂಡರರ್ಸ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 5 ವಿಕೆಟಗಳ ಜಯ ಸಾಧಿಸಿತು. ಆ ಮೂಲಕ ಆರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು  3-1 ರ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಶಿಖರ್ ಧವನ್(109)ರವರ ಶತಕ ಹಾಗೂ ವಿರಾಟ್ ಕೊಹ್ಲಿ(75) ಯವರ ಅರ್ಧಶತಕದ  ಸಹಾಯದಿಂದ 50 ಓವರ್ ಗಳಲ್ಲಿ 289 ರನ್ ಗಳಿಸಿತು. ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿಯವರ 158 ರನ್ ಗಳ ಜೊತೆಯಾಟದಿಂದ ಭಾರತ ಉತ್ತಮ ಮೊತ್ತ ಗಳಿಸಿತು. ಧವನ್ ರವರು ತನ್ನ 100ನೆಯ ಏಕದಿನ ಪಂದ್ಯದಲ್ಲಿ 13 ನೇ ಶತಕವನ್ನು ಬಾರಿಸಿದರು. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನ್ನುವ ಖ್ಯಾತಿಗೆ ಪಾತ್ರರಾದರು.

ಮಳೆಯ ಕಾರಣದಿಂದಾಗಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾ ತಂಡಕ್ಕೆ 28 ಓವರ್ಗಳಲ್ಲಿ 202 ರನ್ ಪರಿಷ್ಕೃತ ಗುರಿಯನ್ನು ನೀಡಲಾಯಿತು. ಈ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 25.3 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 207 ರನ್ ಗಳ ಗುರಿಯನ್ನು ಸುಲಭವಾಗಿ ತಲುಪಿತು. ಡೇವಿಡ್ ಮಿಲ್ಲರ್(39) ಮತ್ತು ಹೆನ್ರಿಚ್(43) ಕ್ಲೇಸೆನ್  ರನ್ ಗಳ ನೆರವಿನಿಂದ ನಾಲ್ಕನೆ ಏಕದಿನ ಪಂದ್ಯವನ್ನು ಗೆಲ್ಲುವುದರ ಮೂಲಕ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ.

 

Trending News