close

News WrapGet Handpicked Stories from our editors directly to your mailbox

ಉಷ್ಣ ವಿದ್ಯುತ್ ಸ್ಥಾವರದಲ್ಲಿ ಭಾರೀ ಅಗ್ನಿ ಅವಘಡ; 8 ಮಂದಿಗೆ ಗಾಯ

ಉಷ್ಣ ಸ್ಥಾವರದ ಒಂದು ಘಟಕ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ. 

Updated: Jul 11, 2019 , 05:16 PM IST
ಉಷ್ಣ ವಿದ್ಯುತ್ ಸ್ಥಾವರದಲ್ಲಿ ಭಾರೀ ಅಗ್ನಿ ಅವಘಡ; 8 ಮಂದಿಗೆ ಗಾಯ

ಮಾಸ್ಕೋ: ರಷ್ಯಾದ ಮಾಸ್ಕೋ ಸಮೀಪದ ಮೈಟಿಶ್ಚಿಯಲ್ಲಿನ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದ್ದು, 8 ಮಂದಿ ಗಾಯಗೊಂಡಿದ್ದಾರೆ.

ಗ್ಯಾಸ್ ಕಂಟೇನರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಅವಘಡ ನಡೆದಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ. 

ಉಷ್ಣ ಸ್ಥಾವರದ ಒಂದು ಘಟಕ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ. 

ಮಾಸ್ಕೋದ ಮೈಟಿಶ್ಚಿಯ ಜಿಲ್ಲೆಯ ಚೆಲೋಬಿಟಿಯೊ ಗ್ರಾಮದಲ್ಲಿರುವ ಥರ್ಮಲ್ ಪ್ಲಾಂಟ್ ನಂ 27 (ಸೆವೆರ್ನಾಯಾ)ರಲ್ಲಿ ಬೆಂಕಿ ಅವಘಡ ಸಂಭತುರ್ತು ನಿರ್ವಹಣಾ ಕಾರ್ಯಗಳಿಗೆ ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.