Former Pakistan PM Imran Khan : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪತ್ನಿಗೆ 14 ವರ್ಷಗಳ ಜೈಲು ಶಿಕ್ಷೆ

Pakistan's former PM Imran Khan jail sentence : ಈ ಎರಡೂ ಪ್ರಕರಣಗಳಲ್ಲಿ  ಇಮ್ರಾನ್ ಖಾನ್ ಗೆ ಶಿಕ್ಷೆಯಾಗಿದ್ದು, ಫೆಬ್ರವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ  ಮತ್ತು ಇಮ್ರಾನ್ ಖಾನ್ ಅವರ ಚುನಾವಣಾ ಮಹತ್ವಾಕಾಂಕ್ಷೆಗಳಿಗೆ ಪ್ರಮುಖ ಅಡಚಣೆಯಾಗಿ ಹೊರಹೊಮ್ಮಿದೆ.

Written by - Ranjitha R K | Last Updated : Jan 31, 2024, 01:18 PM IST
  • ಇಮ್ರಾನ್ ಖಾನ್ ಒಂದರ ಹಿಂದೆ ಒಂದರಂತೆ ಶಾಕ್
  • ಇಮ್ರಾನ್ ಖಾನ್ ಗೆ ಮೂರನೇ ಶಿಕ್ಷೆ
  • ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ 14 ವರ್ಷಗಳ ಜೈಲು ಶಿಕ್ಷೆ
 Former Pakistan PM Imran Khan : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪತ್ನಿಗೆ 14 ವರ್ಷಗಳ ಜೈಲು ಶಿಕ್ಷೆ  title=

Legal proceedings against Imran Khan and Bushra Bibi : ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ಇಮ್ರಾನ್ ಖಾನ್  ಒಂದರ ಹಿಂದೆ ಒಂದರಂತೆ ಶಾಕ್ ಎದುರಾಗಿದೆ. ನಿನ್ನೆಯಷ್ಟೇ (ಜನವರಿ 30) ಅವರು ಸೈಫರ್ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು.  ಇಂದು  (ಜನವರಿ 31) ತೋಷಖಾನಾ (ರಾಜ್ಯ ಉಡುಗೊರೆ) ಪ್ರಕರಣದಲ್ಲಿ  ಇಮ್ರಾನ್ ಖಾನ್  ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ಎರಡೂ ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಗೆ ಶಿಕ್ಷೆಯಾಗಿದ್ದು, ಫೆಬ್ರವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ  ಮತ್ತು ಇಮ್ರಾನ್ ಖಾನ್ ಅವರ ಚುನಾವಣಾ ಮಹತ್ವಾಕಾಂಕ್ಷೆಗಳಿಗೆ ಪ್ರಮುಖ ಅಡಚಣೆಯಾಗಿ ಹೊರಹೊಮ್ಮಿದೆ.

ಇದನ್ನೂ ಓದಿ : ಪ್ರಪಂಚದಲ್ಲಿ ಈ ಮೂವರು ಮಾತ್ರ ಪಾಸ್‌ಪೋರ್ಟ್ ಇಲ್ಲದೆ ಪ್ರಯಾಣಿಸುತ್ತಾರೆ.. ! ನಿಮಗಿದು ಗೊತ್ತಾ..?

ಸೌದಿ ಕ್ರೌನ್ ಪ್ರಿನ್ಸ್‌ನಿಂದ ಪಡೆದ ಆಭರಣ ಸೆಟ್ ಅನ್ನು ಉಳಿಸಿಕೊಂಡಿದ್ದಕ್ಕಾಗಿ  ನ್ಯಾಯಾಲಯದಲ್ಲಿ ಇಬ್ಬರ ವಿರುದ್ಧ ಕಳೆದ ತಿಂಗಳು NAB  ಹೊಸ ಪ್ರಕರಣವನ್ನು ದಾಖಲಿಸಿದೆ ಎಂದು ದಿ ಡಾನ್ ವರದಿ ಮಾಡಿದೆ. 

ಪ್ರಧಾನಿಯಾಗಿದ್ದ ಅವಧಿಯಲ್ಲಿ ಇಮ್ರಾನ್ ಮತ್ತು ಅವರ ಪತ್ನಿ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರಿಂದ ಒಟ್ಟು 108 ಉಡುಗೊರೆಗಳನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ. ಇಸ್ಲಾಮಾಬಾದ್ ಕೋರ್ಟ್ ಈ ತಿಂಗಳ ಆರಂಭದಲ್ಲಿ ಈ ಪ್ರಕರಣದಲ್ಲಿ ಇಬ್ಬರನ್ನೂ ದೋಷಿ ಎಂದು ತೀರ್ಪು ನೀಡಿತ್ತು.

ಇದನ್ನೂ ಓದಿ : H-1B Visa: ಹೊಸ ಮಾನದಂಡ ಪ್ರಕಟಿಸಿದ ಯುಎಸ್

ಇಮ್ರಾನ್ ಖಾನ್ ಗೆ ಮೂರನೇ ಶಿಕ್ಷೆ:
ಇಂದಿನ ಶಿಕ್ಷೆ ಇಮ್ರಾನ್ ಖಾನ್ ಗೆ ಇದುವರೆಗಿನ ಮೂರನೇ ಶಿಕ್ಷೆಯಾಗಿದೆ. ನಿನ್ನೆಯಷ್ಟೇ   ಸೈಫರ್ ಪ್ರಕರಣದಲ್ಲಿ ರಾಷ್ಟ್ರೀಯ ರಹಸ್ಯಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 

ಇದಕ್ಕೂ ಮೊದಲು, ಆಗಸ್ಟ್ 5 ರಂದು ತೋಷಖಾನಾ ಪ್ರಕರಣದಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದ್ದು, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.   ಆದರೆ ಈ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ (IHC) ಈ ಶಿಕ್ಷೆಯನ್ನು ತಡೆ ಹಿಡಿದಿತ್ತು. ನಂತರ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ  ವಿಭಾಗೀಯ ಪೀಠಕ್ಕೆ  ಇಮ್ರಾನ್ ಮಾಡಿದ ಮನವಿಯನ್ನು ಕೋರ್ಟ್ ತಳ್ಳಿ ಹಾಕಿದೆ. 

ಇದನ್ನೂ ಓದಿ :  ಮಾಲ್ಡೀವ್ಸ್ ನೂತನ ಅಧ್ಯಕ್ಷ ಅಧಿಕಾರ ಕಳೆದುಕೊಳ್ಳುವ ದಿನ ಸನ್ನಿಹಿತವೇ?

ಇಂದಿನ ತೀರ್ಪು ಏನು ಹೇಳುತ್ತದೆ ? 
ಇಂದು ಪ್ರಕಟಿಸಿದ ನಿರ್ಧಾರದ ಪ್ರಕಾರ, ಇಮ್ರಾನ್ ಮತ್ತು ಬುಶ್ರಾ  ಮುಂದಿನ  10 ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಹುದ್ದೆಯನ್ನು ಹೊಂದುವಂತಿಲ್ಲ. ಇಬ್ಬರಿಗೂ ತಲಾ 787 ಮಿಲಿಯನ್ ದಂಡ ವಿಧಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News