Haiti Prison: ಹೈಟಿಯಲ್ಲಿ ಉದ್ವಿಗ್ನ ಪರಿಸ್ಥಿತಿ..! ಜೈಲು ಗಲಭೆ ಭೇದಿಸಿ ನೂರಾರು ಕೈದಿಗಳು ಪರಾರಿ..

Armed Groups in Haiti: ಹೈಟಿಯಲ್ಲಿ ತೀವ್ರ ಉದ್ವಿಗ್ನ ವಾತಾವರಣವು ಸಂಭವಿಸಿದೆ. ಗಂಭೀರ ಅಪರಾಧ ಎಸಗಿದವರು ಜೈಲಿನಿಂದ ತಪ್ಪಿಸಿಕೊಂಡು ಹೊರಗೆ ಬಂದು ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೂಡಲೇ ಹೆಚ್ಚುವರಿ ಪಡೆಗಳನ್ನು ಕಳುಹಿಸುವಂತೆ ಉನ್ನತಾಧಿಕಾರಿಗಳಿಗೆ ಪೊಲೀಸರು ಮನವಿ ಮಾಡಿದ್ದಾರೆ.

Written by - Zee Kannada News Desk | Last Updated : Mar 3, 2024, 03:34 PM IST
  • ಕೀನ್ಯಾದ ಹೈಟಿಯ ರಾಜಧಾನಿ ಬಂದರು ನಗರವು ಉಗ್ರ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ.
  • ಘೋರ ಅಪರಾಧಗಳಿಗೆ ಶಿಕ್ಷೆಗೊಳಗಾದವರನ್ನು ಬಂದರಿನಲ್ಲಿರುವ ಪ್ರಿನ್ಸ್ ಜೈಲಿನಲ್ಲಿ ಇರಿಸಲಾಗುತ್ತದೆ.
  • ಪೊಲೀಸರ ಮೇಲೆ ಹಲ್ಲೆ ನಡೆಸಿ ವಿಧ್ವಂಸಕ ಕೃತ್ಯ ಎಸಗಿದ್ದಾರೆ. ಕ್ರೂರ ಅಪರಾಧಗಳ ಮಾಡಿರುವ ಅಪರಾಧಿಗಳು ಕೂಡ ಜೈಲಿನಿಂದ ಪರಾರಿಯಾಗಿದ್ದಾರೆ
Haiti Prison: ಹೈಟಿಯಲ್ಲಿ ಉದ್ವಿಗ್ನ ಪರಿಸ್ಥಿತಿ..! ಜೈಲು ಗಲಭೆ ಭೇದಿಸಿ ನೂರಾರು ಕೈದಿಗಳು ಪರಾರಿ.. title=

Haiti Prison Tragedy: ಸಾಮಾನ್ಯವಾಗಿ ಅಪರಾಧಗಳನ್ನು ಮಾಡುವ ಜನರನ್ನು ಜೈಲುಗಳಲ್ಲಿ ಇರಿಸಲಾಗುತ್ತದೆ. ಕೆಲವೊಮ್ಮೆ ಅಪರಾಧಗಳಿಗೆ ಶಿಕ್ಷೆ  ಅನುಭವಿಸುತ್ತಿರುವ ಜೈಲುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಲ್ಲದೇ ಜೈಲಿನಲ್ಲಿ ನಡೆಯುವ  ದೌರ್ಜನ್ಯಗಳು ಅದೆಷ್ಟೋ. ಜೊತೆಗೆ ಅಪರಾಧ ಮಾಡಿವವರನ್ನು ಹೊರ ತರಲು ಕೆಲವು ಉಗ್ರ  ಗ್ಯಾಂಗ್‌ಗಳು ಪ್ರಯತ್ನಿಸುತ್ತಿರುತ್ತವೆ. ವಿಶೇಷವಾಗಿ ದರೋಡೆಕೋರರು, ಕೆಲವು ಗ್ಯಾಂಗ್‌ಗಳು ಅಪರಾಧಿಗಳನ್ನು ಜೈಲಿನಿಂದ ಹೊರಗಿಡಲು ಕೆಲಸ ಮಾಡುತ್ತವೆ.  ಅಂತಹದ್ದೇ ಒಂದು ಘಟನೆ ಕೀನ್ಯಾದಲ್ಲೂ ನಡೆದಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ಕೀನ್ಯಾದ ಹೈಟಿಯ ರಾಜಧಾನಿ ಬಂದರು ನಗರವು ಉಗ್ರ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಘೋರ ಅಪರಾಧಗಳಿಗೆ ಶಿಕ್ಷೆಗೊಳಗಾದವರನ್ನು ಬಂದರಿನಲ್ಲಿರುವ ಪ್ರಿನ್ಸ್ ಜೈಲಿನಲ್ಲಿ ಇರಿಸಲಾಗುತ್ತದೆ. ಈ ಜೈಲಿನಲ್ಲಿ, ಸುಮಾರು  3,900ದಿಂದ  12,000 ಕೈದಿಗಳಿದ್ದಾರೆ. ಈ ಕ್ರಮದಲ್ಲಿ ಶನಿವಾರ ಕೆಲ ಪುಂಡರು ಜೈಲಿನ ಮೇಲೆ ದಾಳಿ ನಡೆಸಿ ಜನರನ್ನು ಕರೆದೊಯ್ಯಲು ಯತ್ನಿಸಿದ್ದರು.

ಇದನ್ನೂ ಓದಿ: Terrorist Death: ಮತ್ತೋರ್ವ ಮೋಸ್ಟ್ ವಾಂಟೆಡ್ ಭಯೋತ್ಪಾದಕನ ನಿಗೂಢ ಸಾವು.!

ಪೊಲೀಸರ ಮೇಲೆ ಹಲ್ಲೆ ನಡೆಸಿ ವಿಧ್ವಂಸಕ ಕೃತ್ಯ ಎಸಗಿದ್ದಾರೆ. ಕ್ರೂರ ಅಪರಾಧಗಳ ಮಾಡಿರುವ ಅಪರಾಧಿಗಳು ಕೂಡ  ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಅವರು ತಕ್ಷಣದ ಹೆಕೂಡಲೇ ಹೆಚ್ಚುವರಿ ಪಡೆಗಳನ್ನು ಕಳುಹಿಸುವಂತೆ ಉನ್ನತಾಧಿಕಾರಿಗಳಿಗೆ ಪೊಲೀಸರು ಮನವಿ ಮಾಡಿದ್ದಾರೆ. ಈ ಕೈದಿಗಳು ಹೊರಗೆ ಬಂದರೆ ಜನರ ಮೇಲೆ ದಾಳಿ ಮಾಡುತ್ತಾರೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Trending: ಈ ಜನರು ಮದುವೆ ದಿನ ಮಾತ್ರ ಸ್ನಾನ ಮಾಡಿದ್ರು ಶುದ್ಧವಾಗಿರ್ತಾರೆ..! ಹೇಗೆ ಗೊತ್ತಾ?

ಕೀನ್ಯಾದೊಂದಿಗೆ ಒಪ್ಪಂದಕ್ಕೆ ಬಂದರೆ, ಆ ಪಡೆಗಳು ಹೈಟಿಗೆ ಸಹಾಯ ಮಾಡುತ್ತವೆ ಎಂಬ ವರದಿ ಇದೆ. ಇದರಿಂದ ಹೈಟಿಯಲ್ಲಿಇದೀಗ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಅಲ್ಲದೇ ಸಾಮನ್ಯ ಜನರು ಮನೆಯಿಂದ ಹೊರಗೆ ಬರಲು ಭಯ ಪಡುವಂತ ವಾತಾವರಣ ಸೃಷ್ಟಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News