ಆಕ್ಲೆಂಡ್: ವಿಶ್ವದೆಲ್ಲೆಡೆ ಜನರು 2018ಕ್ಕೆ ವಿದಾಯ ಹೇಳಿ ಹೊಸ ವರ್ಷ 2019ನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ನಗರ ಇತರ ದೇಶಗಳಿಗಿಂತ ಮೊದಲೇ 2019ಅನ್ನು ಸ್ವಾಗತಿಸಿ ಸಂಭ್ರಮಿಸಿದೆ. ಅದ್ಯಾವ ದೇಶ ಎಂದು ಆಲೋಚಿಸುತ್ತಿದ್ದಿರಾ? ಅದೇ ನ್ಯೂಜಿಲೆಂಡ್!
ನ್ಯೂಜಿಲೆಂಡ್ ನ ಆಕ್ಲೆಂಡ್'ನಲ್ಲಿ ಸಾವಿರಾರು ಜನರು ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದರು. ನ್ಯೂಜಿಲೆಂಡ್ ಬಳಿಕ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಲಾಗುವುದು. ಸಿಡ್ನಿ ಒಪೇರಾ ಹೌಸ್'ನ ಪಟಾಕಿಗಳು ವಿಶ್ವದೆಲ್ಲೆಡೆ ಪ್ರಸಿದ್ಧವಾಗಿವೆ.
2019 Countdown at the Viaduct, Auckland New Zealand. Happy New Year To The Whole Wide World🎉🎉🎉🤩 pic.twitter.com/xRsBQXyj5A
— Hassan Rizvi (@Hassan_rizvi99) December 31, 2018
#WATCH Auckland in New Zealand welcomes new year 2019 https://t.co/ZhZwqkXrUs
— ANI (@ANI) December 31, 2018
New Zealand's Auckland welcomes the new year with fireworks #NewYear2019 pic.twitter.com/acC47C5Edb
— ANI (@ANI) December 31, 2018
ವಿಶ್ವದ ಇತರ ದೇಶಗಳಂತೆ ಭಾರತದಲ್ಲಿಯೂ ಸಹ ಜನರು ಹೊಸ ವರ್ಷವನ್ನು ಸ್ವಾಗತಿಸಲು ಉತ್ಸುಕರಾಗಿ ಕಾಯುತ್ತಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇತರ ನಗರಗಳಲ್ಲಿ ಈಗಾಗಲೇ 2019ರ ಸ್ವಾಗತಕ್ಕೆ ಭರದ ಸಿದ್ಧತೆ ನಡೆದಿದೆ.