ಮಕ್ಕಳ ಅಶ್ಲೀಲ ಫೋಟೋ ಮತ್ತು ವೀಡಿಯೋ ಸಂಗ್ರಹಿಸಿಟ್ಟಿದ್ದ ಭಾರತೀಯ ಮೂಲದ ವ್ಯಕ್ತಿ ಅಮೇರಿಕಾದಲ್ಲಿ ಬಂಧನ

   

Updated: Aug 5, 2018 , 02:46 PM IST
ಮಕ್ಕಳ ಅಶ್ಲೀಲ ಫೋಟೋ ಮತ್ತು ವೀಡಿಯೋ ಸಂಗ್ರಹಿಸಿಟ್ಟಿದ್ದ ಭಾರತೀಯ ಮೂಲದ ವ್ಯಕ್ತಿ ಅಮೇರಿಕಾದಲ್ಲಿ ಬಂಧನ

ನ್ಯೂಯಾರ್ಕ್: ಭಾರತೀಯ ಮೂಲದ ವ್ಯಕ್ತಿಯೊಬ್ಬನು ಮಕ್ಕಳ ಅಶ್ಲೀಲ ಚಿತ್ರಗಳನ್ನು ಸಂಗ್ರಹಿಸಿ ಮಕ್ಕಳ ನೀಲಿ ಚಿತ್ರಗಳಿಗೆ ಪ್ರಚೋಧನೆ ನೀಡುತ್ತಿದ್ದ ಎನ್ನುವ ಆಧಾರದ ಮೇಲೆ ಅವನಿಗೆ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

ಬಂಧಿತನಾಗಿರುವ ವ್ಯಕ್ತಿಯು 28 ವರ್ಷದ ಅಭಿಜೀತ್ ದಾಸ್ ಎಂದು ಹೇಳಲಾಗಿದ್ದು ಪಿಟ್ಸ್ ಬರ್ಗ್ ನಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.ಸುಮಾರು 1,000 ಮಕ್ಕಳ  ಛಾಯಾಚಿತ್ರಗಳು ಮತ್ತು 380 ವೀಡಿಯೋಗಳನ್ನು ಒಳಗೊಂಡಿರುವ ಕಂಪ್ಯೂಟರ್ ಗ್ರಾಫಿಕ್ ಫೈಲ್ಗಳನ್ನು ಹೊಂದಿದ್ದಕ್ಕಾಗಿ ಅವನಿಗೆ ಫೆಡರಲ್ ನ್ಯಾಯಾಲಯ ಶಿಕ್ಷೆ ವಿಧಿಸಲಾಗಿದೆ.

ಯು.ಎಸ್ ಕಾನೂನಿನ ಪ್ರಕಾರ, ಮಕ್ಕಳ ಅಶ್ಲೀಲತೆಯು ಚಿಕ್ಕವರನ್ನು (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಒಳಗೊಂಡಿರುವ  ಮಕ್ಕಳನ್ನು ದೃಶ್ಯ ಚಿತ್ರಣ, ಛಾಯಾಚಿತ್ರ, ವೀಡಿಯೊ, ಡಿಜಿಟಲ್ ಅಥವಾ ಕಂಪ್ಯೂಟರ್ ರಚಿಸಿದ ಚಿತ್ರಗಳಲ್ಲಿ ಬಳಸಿಕೊಂಡಿದ್ದೆ ಅದನ್ನು ಅಪರಾಧ ಎಂದು ಅಲ್ಲಿನ ಕಾನೂನು ಹೇಳುತ್ತದೆ.

ಆದ್ದರಿಂದ ಮಕ್ಕಳ ಅಶ್ಲೀಲತೆಯನ್ನು ಹೊಂದಿರುವ ಯಾವುದೇ ಮಾದರಿಯ ಪ್ರದರ್ಶನ ಕಾನೂನು ಬಾಹಿರವಾಗಿರುತ್ತದೆ. ಆದ್ದರಿಂದ ಈ ಕಾನೂನು ಉಲ್ಲಂಘಿಸಿದ ಆಧಾರದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು  ಜೈಲು ಶಿಕ್ಷೆಗೆ ಒಳಪಡಿಸಲಾಗಿದೆ.