OMG! 17 ನಿಮಿಷಗಳಲ್ಲಿ ನಡೆದ ಪವಾಡ! ಮೃತಪಟ್ಟ ಶಿಶುಗೆ ಮರುಜೀವ ತುಂಬಿದ ವೈದ್ಯರು

Medical Miracle: ಪವಾಡಗಳಂತಹ ವಿಷಯಗಳ ಮೇಲೆ ವಿಶ್ವಾಸವೆ ಇಲ್ಲದವರಿಗೆ, ಪವಾಡಗಳನ್ನು ನಂಬಲು ಶುರು ಮಾಡುವಂತೆ ಮಾಡುವ ಘಟನೆಯೊಂದು ಬ್ರಿಟನ್ ನಲ್ಲಿ ಸಂಭವಿಸಿದೆ. ಕೇವಲ 17 ನಿಮಿಷಗಳ ಒಳಗೆ ವೈದ್ಯರು, ಮೃತಪಟ್ಟು ಹುಟ್ಟಿದ ಮಗುವಿಗೆ ಮರುಜೀವ ನೀಡಿದ್ದಾರೆ.  

Written by - Nitin Tabib | Last Updated : Nov 2, 2022, 05:13 PM IST
  • ಉಸಿರು ನಿಂತಿದ್ದರಿಂದ ಮಗುವಿನ ಮೆದುಳಿನ ಮೇಲೆ ಯಾವುದೇ ಪರಿಣಾಮ ಬೀರದಿರುವುದು ಯಾವುದೇ ಅದೃಷ್ಟಕ್ಕೆ ಕಡಿಮೆ ಇಲ್ಲ ಎಂದರೆ ತಪ್ಪಾಗಲಾರದು.
  • 17 ನಿಮಿಷಗಳಲ್ಲಿ, ವೈದ್ಯರು ಇಂತಹ ಪವಾಡ ಮಾಡಿದ್ದಾರೆ ಮತ್ತು ಹುಟ್ಟಿ ಮೃತಪಟ್ಟ ಮಗು ಮತ್ತೆ ಜೀವಂತವಾಗಿ ತಾಯಿ ಮಡಿಲ ಸೇರಿದೆ.
OMG! 17 ನಿಮಿಷಗಳಲ್ಲಿ ನಡೆದ ಪವಾಡ! ಮೃತಪಟ್ಟ ಶಿಶುಗೆ ಮರುಜೀವ ತುಂಬಿದ ವೈದ್ಯರು title=
Dead Child Alive

Made Dead Child Alive: ವೈದ್ಯರಿಗೆ ಏಕೆ ದೇವರ ಸ್ಥಾನಮಾನ ನೀಡಲಾಗಿದೆ ಎಂಬುದಕ್ಕೆ ಈ ಘಟನೆ ಹಿಡಿದ ಕನ್ನಡಿಯಾಗಿದೆ. ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ಯಾವುದೇ ಓರ್ವ ರೋಗಿಗೆ ಇನ್ಮುಂದೆ ಔಷಧಿಯ ಅಗತ್ಯವಿಲ್ಲ ಮತ್ತು ಪ್ರಾರ್ಥನೆಯ ಅಗತ್ಯವಿದೆ ಎಂದು ವೈದ್ಯರು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ, ಈ ಬಾರಿ ನಡೆದ ಪವಾಡ ಯಾವುದೇ ಒಂದು ಚಲನಚಿತ್ರ ಕಥೆಯಾಗಿಲ್ಲ ಮತ್ತು ವಾಸ್ತವದಲ್ಲಿ ಬ್ರಿಟನ್ ನಲ್ಲಿ ಇಂತಹ ಒಂದು ಘಟನೆ ಸಂಭವಿಸಿದೆ. 

17 ನಿಮಿಷಗಳ ಕಾಲ ಉಸಿರು ನಿಂತಿತು
ಬ್ರಿಟಿಷ್ ವೈದ್ಯರು ತಾಯಿಯ ಮಡಿಲು ಖಾಲಿಯಾಗುವುದರಿಂದ ಉಳಿಸಿದ್ದಾರೆ. ಮಹಿಳೆಯ ಅಕಾಲಿಕ ಹೆರಿಗೆ ವೇಳೆ ಈ ಘಟನೆ ನಡೆದಿದೆ. ಈ ಮಗು ಹೆರಿಗೆಯ ನಿಗದಿತ ಸಮಯಕ್ಕಿಂತ 10 ವಾರಗಳ ಮೊದಲು ಜನಿಸಿದೆ. ಮಗು (ನ್ಯೂ ಬಾರ್ನ್ ಬೇಬಿ) ಹುಟ್ಟಿದ ತಕ್ಷಣ ಉಸಿರಾಟವನ್ನು ನಿಲ್ಲಿಸಿದೆ. ಈ ಮಗುವಿಗೆ 17 ನಿಮಿಷಗಳ ಕಾಲ ಉಸಿರಾಡಲು ಸಾಧ್ಯವಾಗಲಿಲ್ಲ ಎಂದು ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು.

ಇದನ್ನೂ ಓದಿ-Baba Vanga Predictions: ಜಗತ್ತಿನ ಅಂತ್ಯದ ಬಗ್ಗೆ ಬಾಬಾ ವಂಗಾ ಭಯಾನಕ ಭವಿಷ್ಯ..!

ಕಂಗೆಟ್ಟ ಕುಟುಂಬಸ್ಥರು 
ಒಂದೆಡೆ ಮಗುವಿನ ಉಸಿರನ್ನು ಮರಳಿ ತರಲು ವೈದ್ಯರು ನಿರಂತರವಾಗಿ ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಕುಟುಂಬಸ್ಥರ  ಧೈರ್ಯ ಕುಗ್ಗಿ, ಅಳಲು ತೋಡಿಕೊಳ್ಳುವ ಮೂಲಕ ಎಲ್ಲರೂ ಹೀನಾಯ ಸ್ಥಿತಿಗೆ ತಲುಪಿದ್ದರು. ಅಕಾಲಿಕ ಜನಿಸಿದ ಶಿಶುವನ್ನು ಲ್ಯಾಬ್‌ಗೆ ಕರೆದೊಯ್ಯುವ ಮೂಲಕ ಚಿಕಿತ್ಸೆ ಆರಂಭಿಸಲಾಯಿತು. ಇದ್ದಕ್ಕಿದ್ದಂತೆ ಒಂದು ಪವಾಡ ಸಂಭವಿಸಿದೆ ಮತ್ತು ಮಗುವಿನ ಉಸಿರು ಮರುಕಳಿಸಿದೆ. ಮಗು ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿದೆ ಮತ್ತು ನಂತರ ಆ ಮಗುವನ್ನು ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಇದನ್ನೂ ಓದಿ-Twitter ನಲ್ಲಿ ಮಹತ್ವದ ಬದಲಾವಣೆ.. ಪಾವತಿಸಬೇಕಾಗುತ್ತೆ ಮಾಸಿಕ ಶುಲ್ಕ! ಮತ್ತೇನೆಲ್ಲ ಇದೆ ಇಲ್ಲಿ ನೋಡಿ

ಅಂತಹ ಪವಾಡ ಸಂಭವಿಸಿದೆ
ವೈದ್ಯರ ಪ್ರಯತ್ನ ಹಾಗೂ ದೇವರ ದಯೆಯಿಂದ ಮಗುವಿನ ಜೀವ ಉಳಿದಿದೆ. ಆದರೆ, ಮಗು ತುಂಬಾ ದುರ್ಬಲವಾಗಿತ್ತು. ಮಗುವನ್ನು ಆರೋಗ್ಯವಾಗಿಡಲು, ಅದಕ್ಕೆ ರಕ್ತವನ್ನು ನೀಡಲಾಯಿತು. ಸಲಹೆ ನೀಡಿದ ವೈದ್ಯರು ಆಕ್ಸಿಜನ್ ಸಪೋರ್ಟ್ ನಲ್ಲಿ ಮಗುವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಉಸಿರು ನಿಂತಿದ್ದರಿಂದ ಮಗುವಿನ ಮೆದುಳಿನ ಮೇಲೆ ಯಾವುದೇ ಪರಿಣಾಮ ಬೀರದಿರುವುದು ಯಾವುದೇ ಅದೃಷ್ಟಕ್ಕೆ ಕಡಿಮೆ ಇಲ್ಲ ಎಂದರೆ ತಪ್ಪಾಗಲಾರದು. 17 ನಿಮಿಷಗಳಲ್ಲಿ, ವೈದ್ಯರು ಇಂತಹ ಪವಾಡ ಮಾಡಿದ್ದಾರೆ ಮತ್ತು  ಹುಟ್ಟಿ ಮೃತಪಟ್ಟ ಮಗು ಮತ್ತೆ ಜೀವಂತವಾಗಿ ತಾಯಿ ಮಡಿಲ ಸೇರಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News