Pope Francis ಕುರಿತು ಈ ಮಾಡೆಲ್ ನೀಡಿರುವ ಹೇಳಿಕೆ ಕೋಲಾಹಲಕ್ಕೆ ಕಾರಣವಾಗಿದೆ

ಕ್ರಿಶ್ಚಿಯನ್ ಧರ್ಮಗುರು ಪೋಪ್ ಫ್ರಾನ್ಸಿಸ್ ತಮ್ಮ ಅತ್ಯಂತ ಕಾಮಪ್ರಚೋದಕ ಭಾವಚಿತ್ರವನ್ನು ಇಷ್ಟಪಟ್ಟಿದ್ದಾರೆ ಎಂದು ಮಾಡೆಲ್ ನಟಾಲಿಯಾ ಗರಿಬೋಟೊ ಹೇಳಿದ್ದಾರೆ. ನಟಾಲಿಯಾ ಕೂಡ ಈ ಬಗ್ಗೆ ಕೆಲವು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Last Updated : Nov 18, 2020, 01:39 PM IST
  • ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾಮಪ್ರಚೋದಕ ಭಾವಚಿತ್ರ ಹಂಚಿಕೊಂಡ ನತಾಲಿಯಾ ಗರಿಬೋಟೋ.
  • ವ್ಯಾಟಿಕನ್ ಸಿಟಿಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
  • ಸಾಮಾಜಿಕ ಮಾಧ್ಯಮಗಳ ಮೇಲೆ ನತಾಲಿಯಾಳನ್ನು ಟ್ರೋಲ್ ಗೆ ಗುರಿ ಮಾಡಿದ ಜನರು.
Pope Francis ಕುರಿತು ಈ ಮಾಡೆಲ್ ನೀಡಿರುವ ಹೇಳಿಕೆ ಕೋಲಾಹಲಕ್ಕೆ ಕಾರಣವಾಗಿದೆ title=

ವ್ಯಾಟಿಕನ್ ಸಿಟಿ: ಕ್ರಿಶ್ಚಿಯನ್ನರ ಅತ್ಯುನ್ನತ ಪಾದ್ರಿ ಪೋಪ್ ಫ್ರಾನ್ಸಿಸ್ (Pope Francis) ತಮ್ಮ ಒಂದು ಕಾಮಪ್ರಚೋದಕ ಚಿತ್ರವನ್ನು ಇಷ್ಟಪಟ್ಟಿದ್ದಾರೆ ಎಂದು ಬ್ರೆಜಿಲಿಯನ್ ಮಾಡೆಲ್ ಹೇಳಿದ್ದಾರೆ. ಮಾಡೆಲ್ ನಟಾಲಿಯಾ ಗರಿಬೊಟ್ಟೊ ಅವರ ಚಿತ್ರವನ್ನು ಪೋಪ್ ಫ್ರಾನ್ಸಿಸ್ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಲೈಕ್ ಮಾಡಲಾಗಿದೆ ಎಂದು ಗರಿಬೋಟೋ ಹೇಳಿದ್ದು ಈ ಭಾವಚಿತ್ರದಲ್ಲಿ ಅವಳು ತುಂಬಾ ಹಾಟ್ ಆಗಿ ಕಾಣಿಸುತ್ತಿದ್ದಾಳೆ.

ಇದನ್ನು ಓದಿ- ಪವಿತ್ರ ಭೂಮಿಯಲ್ಲಿ ಎಲ್ಲರ ಹಕ್ಕುಗಳನ್ನು ಗುರುತಿಸುವ ಅಗತ್ಯವಿದೆ - ಪೋಪ್ ಫ್ರಾನ್ಸಿಸ್

ವೈರಲ್ ಆಗುತ್ತಿದೆ ಸ್ಕ್ರೀನ್ ಶಾಟ್
ಸಾಮಾಜಿಕ ಮಾಧ್ಯಮಗಳಲ್ಲಿ ನತಾಲಿಯಾ ನೀಡಿರುವ ಹೇಳಿಕೆಯಿಂದ ಕೋಲಾಹಲವೇ ಸೃಷ್ಟಿಯಾಗಿದೆ. ಪೋಪ್ ಅವರ ಇನ್ಸ್ಟಾಗ್ರಾಮ್ ಖಾತೆ @Francisus ಮೂಲಕ ಮಾಡೆಲ್ ಭಾವಚಿತ್ರವನ್ನು ಲೈಕ್ ಮಾಡಿರುವ ಕುರಿತಾದ ಸ್ಕ್ರೀನ್ ಶಾಟ್ ಗಳು ಕೂಡ ಭಾರಿ ವೈರಲ್ ಆಗುತ್ತಿವೆ. ಈ ಭಾವಚಿತ್ರದಲ್ಲಿ ನತಾಲಿಯಾ ಶಾಲಾ ಬಾಲಕಿಯ ಯುನಿಫಾರ್ಮ್ ನಲ್ಲಿ ಕಾಣಿಸಿಕೊಂಡಿದ್ದಾಳೆ. ಪೋಪ್ ಫ್ರಾನ್ಸಿಸ್ ಅಲ್ಲದೆ ಸುಮಾರು 133000 ಜನರೂ ಕೂಡ 27 ವರ್ಷದ ನತಾಲಿಯಾ ಭಾವಚಿತ್ರಕ್ಕೆ ಲೈಕ್ ನೀಡಿದ್ದಾರೆ.

ನಾನು ಸ್ವರ್ಗಕ್ಕೆ ಹೊರಟಿರುವೆ
ಇನ್ನೊಂದೆಡೆ ಪೋಪ್ ಅವರಿಂದ ಸಿಕ್ಕ ಲೈಕ್ ನಿಂದ ನತಾಲಿಯಾ ತುಂಬಾ ಖುಷಿಯಾಗಿದ್ದಾರೆ. ತಮಾಷೆಗಾಗಿ ಹೇಳಿಕೆ ನೀಡಿರುವ ನತಾಲಿಯಾ ತಾವು ತಮ್ಮ ಟ್ವಿಟ್ಟರ್ ಹಿಂಬಾಲಕರೊಂದಿಗೆ ವ್ಯಾಟಿಕನ್ ಹೋಗುವುದಾಗಿ ಹೇಳಿದ್ದಾಳೆ. ತಮ್ಮ ಪ್ರತಿಕ್ರಿಯೆಯನ್ನು ನೀಡಿರುವ ನತಾಲಿಯಾ, 'ನನ್ನ ತಾಯಿ ಈ ಭಾವಚಿತ್ರವನ್ನು ತಿರಸ್ಕರಿಸಿದ್ದಾರೆ ಆದರೆ, ಪೋಪ್ ಅವರಿಗೆ ಇದು ಇಷ್ಟವಾಗಿದೆ. ನಾನು ಸ್ವರ್ಗಕ್ಕೆ ಹೊರಟಿರುವೆ' ಎಂದಿದ್ದಾಳೆ.

ಇದನ್ನು ಓದಿ- Viral Video: ಕಡಲು ತೀರದಲ್ಲಿ Transparent Dressನಲ್ಲಿ ಕಂಡು ಬಂದ Nora Fatehi

ಜನರಿಂದ ವ್ಯಾಪಕ ಗುರಿಯಾದ ನತಾಲಿಯಾ
ನತಾಲಿಯಾ ಭಾವಚಿತ್ರಕ್ಕೆ ಪೋಪ್ ಫ್ರಾನ್ಸಿಸ್ ಖಾತೆಯ ಮೂಲಕ ಬೈ ಮಿಸ್ಟೇಕ್ ಲೈಕ್ ನೀದಲಾಗಿದೆಯೋ ಅಥವಾ ಇಲ್ಲವೋ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ, ಈ ಕುರಿತು ತರಹೇವಾರಿ ಕಾಮೆಂಟ್ ಗಳನ್ನು ಜನರು ಮಾಡುತ್ತಿದ್ದಾರೆ. ಕೆಲವರು ಈ ಹಾಟ್ ಭಾವಚಿತ್ರಕ್ಕಾಗಿ ನತಾಲಿಯಾಳನ್ನು ಟ್ರೋಲ್ ಗೆ ಗುರಿಪಡಿಸಿದರೆ, ಕೆಲವರು ಪೋಪ್ ಫ್ರಾನ್ಸಿಸ್ ಅವರ ಮೇಲೂ ಕೂಡ ಕೋಪ ಹೊರಹಾಕುತಿದ್ದಾರೆ. ನತಾಲಿಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ 20 ಲಕ್ಷಕ್ಕೂ ಅಧಿಕ ಹಿಂಬಾಲಕರಿರುವುದು ಇಲ್ಲಿ ಗಮನಾರ್ಹ.

Trending News