Nawaz Sharif Video : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಚಾಲಕ ಮಹಿಳೆಯ ಮೇಲೆ ಉಗುಳಿರುವ ವಿಡಿಯೋ ವೈರಲ್ ಆಗುತ್ತಿದೆ. ಅಚ್ಚರಿ ಎಂದರೆ ಆ ವೇಳೆ ಕಾರಿನಲ್ಲಿ ನವಾಜ್ ಷರೀಫ್ ಕೂಡ ಇದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಪ್ರಕಾರ, ಮಹಿಳೆಯೊಬ್ಬರು ಅವರ ಕಾರನ್ನು ನಿಲ್ಲಿಸಿ ಅಹಿತಕರ ಕಾಮೆಂಟ್ ಮಾಡಿದ್ದಾರೆ. ನಂತರ ಚಾಲಕ ಮಹಿಳೆಯ ಮೇಲೆ ಉಗುಳಿದ್ದಾನೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಚರ್ಚಾ ವೇದಿಕೆ Siasat.pk ನಲ್ಲಿಯೂ ಹಂಚಿಕೊಳ್ಳಲಾಗಿದೆ. ವಿಡಿಯೋ ಪ್ರಕಾರ, ಮಹಿಳೆ ಕಾರಿನ ಕಡೆಗೆ ಕೈ ಬೀಸಿ ನಿಲ್ಲಿಸುವಂತೆ ಕೇಳಿಕೊಂಡರು. ಅದರಲ್ಲಿ ನವಾಜ್ ಷರೀಫ್ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಕಾರು ನಿಂತಿತು ಮತ್ತು ಚಾಲಕ ಕಿಟಕಿಯಿಂದ ತನ್ನ ತಲೆಯನ್ನು ಆಚೆ ಹಾಕಿದ. ಘಟನೆಯನ್ನು ತನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಮಹಿಳೆ, ನೀವು ತುಂಬಾ ಭ್ರಷ್ಟ ಪಾಕಿಸ್ತಾನಿ ನಾಯಕ ಎಂದು ನಾನು ಕೇಳಿದ್ದೇನೆ ಎಂದಿದ್ದಾರೆ ಎನ್ನಲಾಗಿದೆ. ಇದಾದ ನಂತರ ಚಾಲಕ ಮಹಿಳೆಯ ಮುಖದ ಮೇಲೆ ಉಗುಳಿ ಕಿಟಕಿಯನ್ನು ಮೇಲೇರಿಸಿ ಕಾರು ಚಲಾಯಿಸಿದ್ದಾನೆ.
ಇದನ್ನೂ ಓದಿ: ಹಾರಾಟ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾದ ಅಮೆರಿಕಾದ ಅತ್ಯಂತ ಅಪಾಯಕಾರಿ ಯುದ್ಧ ವಿಮಾನ!
ಈ ಘಟನೆ ಶನಿವಾರ (ಸೆಪ್ಟೆಂಬರ್ 16) ಲಂಡನ್ನ ಹೈಡ್ ಪಾರ್ಕ್ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ನವಾಜ್ ಷರೀಫ್ 2019 ರಲ್ಲಿ ಪಾಕಿಸ್ತಾನವನ್ನು ತೊರೆದ ನಂತರ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಅಲ್-ಅಜೀಜಿಯಾ ಮಿಲ್ಸ್ ಮತ್ತು ಅವೆನ್ಫೀಲ್ಡ್ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ನಂತರ ನಾಯಕ 2018 ರಲ್ಲಿ ಪಾಕಿಸ್ತಾನದಿಂದ ಪಲಾಯನ ಮಾಡಿದ್ದರು. ನಾಯಕ ಯುನೈಟೆಡ್ ಕಿಂಗ್ಡಂನಲ್ಲಿ ದೇಶಭ್ರಷ್ಟನಾಗಿ ವಾಸಿಸುತ್ತಿದ್ದಾರೆ.
Nawaz Sharif's driver spits on the face of a journalist who asked a question!
None of the liberals, intellectuals or feminists will speak against it.Sick of this selective morality!!
Disgusting 🤢 pic.twitter.com/fsKdgVu5vm
— Dr Fatima K - PTI (@p4pakipower1) September 16, 2023
ವಿಡಿಯೋ ವೈರಲ್ ಆದ ನಂತರ, ಇಂಟರ್ನೆಟ್ ಬಳಕೆದಾರರು ನವಾಜ್ ಷರೀಫ್ ಅವರನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಅಕ್ಟೋಬರ್ನಲ್ಲಿ ನವಾಜ್ ಷರೀಫ್ ಪಾಕಿಸ್ತಾನಕ್ಕೆ ಮರಳಬಹುದು ಎಂದು ಹೇಳಲಾಗುತ್ತಿದೆ. ಅವರು ಅಕ್ಟೋಬರ್ 21 ರಂದು ಪಾಕಿಸ್ತಾನಕ್ಕೆ ಬರಲಿದ್ದಾರೆ ಎಂದು ಅವರ ಸಹೋದರ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದಾರೆ.
ಇದನ್ನೂ ಓದಿ: ಸರ್ವಾಧಿಕಾರಿ ಪುಟಿನ್ ಮತ್ತವರ ಜೀವಭಯ: ಮಾಜಿ ರಕ್ಷಣಾ ಅಧಿಕಾರಿಗಳು ಬಯಲಿಗೆಳೆದ ರಹಸ್ಯಗಳು
ವಿಡಿಯೋ ವೈರಲ್ ಆದ ನಂತರ ಲಂಡನ್ನಲ್ಲಿ ನವಾಜ್ ಷರೀಫ್ ವಿರುದ್ಧ ಕಠಿಣ ಕ್ರಮಕ್ಕೆ ಜನರು ಒತ್ತಾಯಿಸುತ್ತಿದ್ದಾರೆ. ಲಂಡನ್ನಲ್ಲಿ ನವಾಜ್ ಷರೀಫ್ ಹಿಂಸಾಚಾರವನ್ನು ಉತ್ತೇಜಿಸುತ್ತಿದ್ದಾರೆ ಎಂದು ನೆಟ್ಟಿಜನ್ ದೂರಿದ್ದಾರೆ. ಷರೀಫ್ ಮತ್ತು ಅವರ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಅಧಿಕಾರಿಗಳನ್ನು ನೆಟ್ಟಗರು ಒತ್ತಾಯಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.