ವಾಷಿಂಗ್ಟನ್:ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಯಭಾರಿಯಾಗಿರುವ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಈಗ ಆ ಹುದ್ದೆಗೆ ರಾಜಿನಾಮೆ ನೀಡಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
Big announcement with my friend Ambassador Nikki Haley in the Oval Office at 10:30am.
— Donald J. Trump (@realDonaldTrump) October 9, 2018
ಮಂಗಳವಾರದಂದು ನಿಕ್ಕಿ ಹ್ಯಾಲೆ ನೇರವಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ ಇದನ್ನು ಟ್ರಂಪ್ ಕೂಡ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.ಈ ಕುರಿತಾಗಿ ಟ್ವೀಟ್ ಮಾಡಿರುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ " ಓವೆಲ್ ಆಫಿಸ್ ನಲ್ಲಿ 10.30 ಗೆ ನನ್ನ ಫ್ರೆಂಡ್ ಮತ್ತು ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಅವರೊಂದಿಗೆ ಒಂದು ದೊಡ್ಡ ಘೋಷಣೆ ಮಾಡಲಾಗುತ್ತದೆ" ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ದಕ್ಷಿಣ ಕ್ಯಾರೊಲಿನಾದ ಗವರ್ನರ್ ಆಗಿದ್ದ ನಿಕ್ಕಿ ಹ್ಯಾಲೆ 2017 ರ ಜನವರಿಯಲ್ಲಿ ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಯಭಾರಿಯಾಗಿ ಟ್ರಂಪ್ ಆಡಳಿತದಿಂದ ನೇಮಕವಾಗಿದ್ದರು.ಮಂಗಳವಾರ ಬೆಳಗ್ಗೆ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಸರ್ರಾ ಸ್ಯಾಂಡರ್ಸ್ ಅವರು ನಿಕ್ಕಿ ಹ್ಯಾಲೆ ಮತ್ತು ಅಧ್ಯಕ್ಷ ಟ್ರಂಪ್ ಇಬ್ಬರು ಓವಲ್ ಆಫಿಸ್ ನಲ್ಲಿ ಬೆಳಗ್ಗೆ 10.30 ಭೇಟಿ ಆಗಲಿದ್ದಾರೆ ಎಂದು ತಿಳಿಸಿದ್ದಾರೆ.