ಕರಾಚಿ ವಿಮಾನ ಅಪಘಾತದಲ್ಲಿ ಬದುಕುಳಿದ ವ್ಯಕ್ತಿ ಹೇಳಿದ್ದೇನು?

ಕರಾಚಿಯ ವಸತಿ ಪ್ರದೇಶದಲ್ಲಿ ಶುಕ್ರವಾರ ಇಳಿದ ಪಾಕಿಸ್ತಾನಿ ವಿಮಾನ ಅಪಘಾತದಲ್ಲಿ ಕನಿಷ್ಠ ಒಬ್ಬ ಪ್ರಯಾಣಿಕರಾದರೂ ಬದುಕುಳಿದಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Updated: May 22, 2020 , 11:23 PM IST
ಕರಾಚಿ ವಿಮಾನ ಅಪಘಾತದಲ್ಲಿ ಬದುಕುಳಿದ ವ್ಯಕ್ತಿ ಹೇಳಿದ್ದೇನು?
Photo Courtsey : Twitter

ನವದೆಹಲಿ: ಕರಾಚಿಯ ವಸತಿ ಪ್ರದೇಶದಲ್ಲಿ ಶುಕ್ರವಾರ ಇಳಿದ ಪಾಕಿಸ್ತಾನಿ ವಿಮಾನ ಅಪಘಾತದಲ್ಲಿ ಕನಿಷ್ಠ ಒಬ್ಬ ಪ್ರಯಾಣಿಕರಾದರೂ ಬದುಕುಳಿದಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದ್ಭುತವಾಗಿ ಬದುಕುಳಿದ ಬ್ಯಾಂಕರ್ ಜಾಫರ್ ಮಹಮೂದ್ ಅವರ ಆರೋಗ್ಯದ ಬಗ್ಗೆ ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಷಾ ವಿಚಾರಿಸಿದರು ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಅಬ್ದುರ್ ರಶೀದ್ ಚನ್ನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಮುರಾದ್ ಇಲ್ಲಿದ್ದಾರೆ" ಎಂದು ಮುಖ್ಯಮಂತ್ರಿ ಹೇಳಿದಾಗ, ಬದುಕುಳಿದವರು "ತುಂಬಾ ಧನ್ಯವಾದಗಳು. ದೇವರು ಕರುಣಾಮಯಿ" ಎಂದು ಉತ್ತರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಏರ್‌ಬಸ್ ಎ 320 ವಿಮಾನದಲ್ಲಿ 91 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿ ಇದ್ದರು ಎಂದು ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.