ನ್ಯಾಶ್ ವಿಲ್ಲೆ: Owner Left Property For Dog - ಖ್ಯಾತ ಬಾಲಿವುಡ್ ನಟ ಅಕ್ಷಯ ಕುಮಾರ್ (Akshay Kumar) ಅಭಿನಯದ ಸೂಪರ್ ಹಿಟ್ ಕಾಮಿಡಿ ಚಿತ್ರ 'Entertainment' ನಿಮಗೆ ನೆನಪಿರಬಹುದು. ಈ ಚಿತ್ರದಲ್ಲಿ 'Entertainment' ಹೆಸರಿನ ನಾಯಿಯ ಹೆಸರಲ್ಲಿ ಅದರ ಮಾಲೀಕ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಬರೆದಿರುವುದನ್ನು ನೀವು ರೀಲ್ ಲೈಫ್ (Reel Life)ನಲ್ಲಿ ನೀವು ನೋಡಿರಬಹುದು. ಆದರೆ, ರಿಯಲ್ ಲೈಫ್ (Real Life)ನಲ್ಲೂ ಈ ರೀತಿ ಸಂಭವಿಸುತ್ತದೆ ಎಂಬುದನ್ನು ನೀವು ಎಂದಾದರೂ ಕೇಳಿದ್ದೀರಾ. ಹೌದು, ಇಂತಹ ಒಂದು ಘಟನೆ ನ್ಯಾಶ್ ವಿಲ್ಲೆಯಲ್ಲಿ ಸಂಭವಿಸಿದೆ. ನಾಯಿ ತುಂಬಾ ಪ್ರಾಮಾಣಿಕ ಪ್ರಾಣಿ ಎನ್ನಲಾಗುತ್ತದೆ. ಹೀಗಾಗಿ ಕೆಲವರು ತಮ್ಮ ಸಾಕು ನಾಯಿಯನ್ನು ಕುಟುಂಬ ಸದಸ್ಯನಂತೆ ನೋಡಿಕೊಳ್ಳುತ್ತಾರೆ. ನಾಯಿ ಹಾಗೂ ಮನುಷ್ಯರ ದೋಸ್ತಿಯ ಹಲವು ಕಥೆಗಳನ್ನು ನೀವು ಕೇಳಿರಬಹುದು. ಆದರೆ, ಅಮೇರಿಕಾದ ನ್ಯಾಶ್ ವಿಲ್ಲೆಯಿಂದ ಮಾಲೀಕರೊಬ್ಬರು ತಮ್ಮ ನಾಯಿಯನ್ನು ಅತಿಯಾಗಿ ಪ್ರೀತಿಸುವ ಪ್ರಕರಣ ಬೆಳಕಿಗೆ ಬಂದಿದೆ.
ನಾಯಿಯನ್ನು ಕೋಟ್ಯಾಧಿಪತಿಯನ್ನಾಗಿಸಿದ ಮಾಲೀಕರು
United States (US)ದ ನ್ಯಾಶ್ ವಿಲ್ಲೆ ನಗರದ ವ್ಯಕ್ತಿಯೊಬ್ಬರು ತಮ್ಮ ಸಾಕು ಪ್ರಾಣಿಯ ಹೆಸರಿಗೆ 50 ಲಕ್ಷ ಡಾಲರ್ ಅಂದರೆ ಸುಮಾರು 36 ಕೋಟಿ ರೂಗಳ ಆಸ್ತಿ (Owner Left Property For Dog) ಬರೆದುಹೋಗಿದ್ದಾರೆ. ನಾಯಿಯ ಪ್ರತಿ ಮಾಲೀಕರ ಪ್ರೀತಿಯನ್ನು ಕಂಡ ಎಲ್ಲರು ನಿಬ್ಬೇರಗಾಗಿದ್ದಾರೆ.
50 ಲಕ್ಷ ಡಾಲರ್ ಅಂದರೆ ಸುಮಾರು 36 ಕೋಟಿ ರೂ. ಆಸ್ತಿಯ ಮಾಲೀಕರು ತಮ್ಮ ಆಸ್ತಿಯನ್ನು ತಮ್ಮ ಮುದ್ದುನಾಯಿಯ ಹೆಸರಿಗೆ ಬರೆದಿದ್ದಾರೆ. ಈ ನಾಯಿ ಬಾರ್ಡರ್ ಕೋಲಿ ಪ್ರಜಾತಿಗೆ ಸೇರಿದೆ. ಲುಲೂ ಹೆಸರಿನ ಈ ನಾಯಿಯನ್ನು ಅದರ ಮಾಲೀಕರು ತುಂಬಾ ಪ್ರೀತಿಸುತ್ತಿದ್ದರು. ತಮ್ಮ ನಂತರ ತಮ್ಮ ಮುದ್ದು ನಾಯಿಯ (Pet Dog) ಕಾಳಜಿವಹಿಸುವುದಕ್ಕೊಸ್ಕರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ನಾಯಿಯ ಕಾಳಜಿವಹಿಸಲು ಮಹಿಳೆಯೋರ್ವರನ್ನು ನೇಮಿಸಲಾಗಿದೆ.
ನಾಯಿಯ ಮಾಲೀಕರು ನಿಧನರಾಗಿದ್ದಾರೆ
WTVF ಟಿವಿಯಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಮಾರ್ಟಾ ಬರ್ಟನ್ ಈ ಸಾಕು ನಾಯಿ ಲುಲೂ ಕಾಳಜಿವಹಿಸುತ್ತಾರೆ. ಈ ಕುರಿತು ಹೇಳುವ ಅವರು, ಲುಲೂ ಮಾಲೀಕರಾಗಿದ್ದ ಬಿಲ್ ಡೋರಿಸ್ ಓರ್ವ ಯಶಸ್ವಿ ಉದ್ಯಮಿಯಾಗಿದ್ದರು ಹಾಗೂ ಕಳೆದ ವರ್ಷ ಅಂದರೆ 2020ರಲ್ಲಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ ಎನ್ನುತ್ತಾರೆ .
ಇದನ್ನು ಓದಿ- Cheapest Homes On Sale - ಕೇವಲ 100 ರೂ.ಗಳಿಗೆ ಇಟಲಿಯಲ್ಲಿ ಮನೆ ಖರೀದಿಸುವ ಸುವರ್ಣಾವಕಾಶ
ತಮ್ಮ ಮೃತ್ಯು ಪತ್ರದಲ್ಲಿ ಬಿಲ್ ಡೋರಿಸ್ ತಮ್ಮ ಮುದ್ದು ನಾಯಿ ಲುಲೂ ನೋಡಿಕೊಳ್ಳಲು ಹಣ ಕಾಯ್ದಿರಿಸಿ ಅದರಿಂದ ಪ್ರತಿ ತಿಂಗಳು ಸ್ವಲ್ಪ ಹಣವನ್ನು ನೀಡಬೇಕು ಎಂಬ ಇಚ್ಛೆವ್ಯಕ್ತಪಡಿಸಿದ್ದರು ಎಂದು ಮಾರ್ಟಾ ಬರ್ಟನ್ ಹೇಳಿದ್ದಾರೆ.
ಇದನ್ನು ಓದಿ- World Radio Day 2021: 3130 ಬೆಂಕಿಕಡ್ಡಿಗಳಿಂದ 1980ರ ದಶಕದ ರೇಡಿಯೋ ತಯಾರಿಸಿದ ಕಲಾವಿದ
ಬಿಲ್ ಡೋರಿಸ್ ತಮ್ಮ ಸಾಕು ನಾಯಿ ಲುಲೂ ಅನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಲುಲೂ ನೋಡಿಕೊಳ್ಳಲು ಇಷ್ಟೊಂದು ಹಣ ಖರ್ಚಾಗಲಿದೆಯೇ ಅಥವಾ ಇಲ್ಲವೇ ಎಂಬುದರ ಅಂದಾಜು ಅವರಿಗೆ ಇರಲಿಲ್ಲ ಎಂದು ಬರ್ಟನ್ ಹೇಳುತ್ತಾರೆ.
ಇದನ್ನು ಓದಿ- Tiger Laughing Video: ತರಬೇತುದಾರನ ಕಚಗುಳಿಗೆ ನಕ್ಕ ಹುಲಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.