ಬೆರಳಿಗೆ ಕಚ್ಚಿದ ಸಾಕು ಬೆಕ್ಕು, 15 ಬಾರಿ ಆಪರೇಷನ್ ಮಾಡಿದ್ರೂ ಉಳಿಯಲಿಲ್ಲ ಪ್ರಾಣ

Man Dies After Cat Bite: ಇದೀಗ ವ್ಯಕ್ತಿಯೊಬ್ಬನನ್ನು ತನ್ನ ಮುದ್ದಿನ ಬೆಕ್ಕು ಕೊಂದು ಹಾಕಿರುವ ಪ್ರಕರಣ ಮುನ್ನೆಲೆಗೆ ಬಂದಿದೆ. ಬೆಕ್ಕು ಕಚ್ಚಿದ ನಂತರ ವ್ಯಕ್ತಿಯಲ್ಲಿ ಆದ ಬದಲಾವಣೆಯಿಂದ ವೈದ್ಯರೇ ಆಶ್ಚರ್ಯಚಕಿತರಾದರು. ಈ ವ್ಯಕ್ತಿಗೆ ಒಟ್ಟು 15 ಆಪರೇಷನ್ ಮಾಡಿದರೂ ಜೀವ ಉಳಿಸಲಾಗಲಿಲ್ಲ.  

Written by - Chetana Devarmani | Last Updated : Dec 16, 2022, 05:45 PM IST
  • ಬೆರಳಿಗೆ ಕಚ್ಚಿದ ಸಾಕು ಬೆಕ್ಕು
  • ಮಾಲೀಕನಿಗೆ 15 ಬಾರಿ ಆಪರೇಷನ್
  • ಆದರೂ ಉಳಿಯಲಿಲ್ಲ ಪ್ರಾಣ
ಬೆರಳಿಗೆ ಕಚ್ಚಿದ ಸಾಕು ಬೆಕ್ಕು, 15 ಬಾರಿ ಆಪರೇಷನ್ ಮಾಡಿದ್ರೂ ಉಳಿಯಲಿಲ್ಲ ಪ್ರಾಣ  title=
ಬೆಕ್ಕು

Man Dies After Cat Bite: ಕೆಲ ದಿನಗಳ ಹಿಂದಷ್ಟೇ ಸಾಕಿದ ನಾಯಿ ವ್ಯಕ್ತಿಯೊಬ್ಬನನ್ನು ಸಾವಿನ ಬಾಗಿಲಿಗೆ ಕರೆತಂದ ವಿಚಾರ ಸುದ್ದಿಯಾಗಿತ್ತು. ಇದೀಗ ವ್ಯಕ್ತಿಯೊಬ್ಬನನ್ನು ತನ್ನ ಮುದ್ದಿನ ಬೆಕ್ಕು ಕೊಂದು ಹಾಕಿರುವ ಪ್ರಕರಣ ಮುನ್ನೆಲೆಗೆ ಬಂದಿದೆ. ಅನೇಕ ಆಪರೇಷನ್‌ಗಳ ಬಳಿಕವೂ ವ್ಯಕ್ತಿಯು ಬದುಕುಳಿಯಲಿಲ್ಲ. ಈ ಘಟನೆಯು ಡೆನ್ಮಾರ್ಕ್‌ನಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ವ್ಯಕ್ತಿಯ ಹೆಸರು ಹೆನ್ರಿಚ್ ಮತ್ತು ಸುಮಾರು ನಾಲ್ಕು ವರ್ಷಗಳ ಹಿಂದೆ ಸಾಕು ಬೆಕ್ಕಿನ ಒಂದು ಬೆರಳನ್ನು ಕಚ್ಚಿದೆ. ಮೊದಮೊದಲು ನೋವು ಕಾಣಿಸಿಕೊಂಡು ನಂತರ ಹೆಚ್ಚು ತೊಂದರೆಯಾದಾಗ ಆಸ್ಪತ್ರೆಗೆ ಸೇರಿಸಬೇಕಾಯಿತು. ನಿಧಾನವಾಗಿ ಆ ಬೆರಳಿಗೆ ಇನ್ನಷ್ಟು ಸಮಸ್ಯೆಗಳು ಬರತೊಡಗಿದವು.

ಇದನ್ನೂ ಓದಿ : Viral News: ಎರಡು ವರ್ಷದ ಮಗುವನ್ನು ಜೀವಂತ ನುಂಗಿ ಹಾಕಿದ ಹಿಪ್ಪೋ... ಆದರೂ....?

ಅಂತಿಮವಾಗಿ ಆ ಬೆರಳನ್ನು ಕತ್ತರಿಸಬೇಕಾಯಿತು. ಆದರೆ ಇಷ್ಟೆಲ್ಲಾ ಮಾಡಿದರೂ ಅವನ ವಿಷ ಕಡಿಮೆಯಾಗಲಿಲ್ಲ ಮತ್ತು ಅವನ ವಿಷವು ದೇಹದಾದ್ಯಂತ ಹರಡಿತು. ಇದಾದ ನಂತರ ಅವರ ಇಡೀ ಕೈ ಊದಿಕೊಂಡಿತು, ಅವರು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದರು. ಈ ಸಮಯದಲ್ಲಿ 15 ಆಪರೇಷನ್‌ಗಳನ್ನು ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಮಾಹಿತಿಯ ಪ್ರಕಾರ, ಈ ಘಟನೆಯಿಂದಾಗಿ, ಅವರ ರೋಗನಿರೋಧಕ ಶಕ್ತಿ ಕುಗ್ಗಿತು.

ಇದರಿಂದಾಗಿ ಅನೇಕ ರೋಗಗಳು ಅವರಿಗೆ ಬಂದವು. ನಂತರ ಚಿಕಿತ್ಸೆ ಫಲಕಾರಿಯಾಗದೆ ಹೆನ್ರಿಚ್ ನಿಧನರಾದರು. ಕೊನೆಯಲ್ಲಿ, ವೈದ್ಯರು ಬೆಕ್ಕಿನ ಕಡಿತದಿಂದ ಮಾಂಸ ತಿನ್ನುವ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದರು ಮತ್ತು ಅದು ಕ್ರಮೇಣ ನಿಯಂತ್ರಿಸಲಾಗಲಿಲ್ಲ ಎಂದರು.

ಇದನ್ನೂ ಓದಿ : 300 ಅಡಿ ಎತ್ತರದಿಂದ ಹಾರಿಬಿದ್ದ ಕಾರು.. ಗಂಡ ಹೆಂಡತಿ ಪ್ರಾಣ ಉಳಿಸಿದ iPhone 14

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News