Flying Car: ಕೇವಲ 2 ನಿಮಿಷಗಳಲ್ಲಿ ವಿಮಾನವಾಗಿ ಬದಲಾಗುತ್ತೆ ಈ ಕಾರು

Flying car completes historic first inter-city flight: ಪ್ರಸಿದ್ಧ ಕಂಪನಿ ಸ್ಲೋವಾಕಿಯಾ (Slovakia)ದ  ಕ್ಲೈನ್ ​​ವಿಷನ್ (KleinVision) ಹಾರುವ ಕಾರು ಎರಡು ವಿಮಾನ ನಿಲ್ದಾಣಗಳ ನಡುವೆ ತನ್ನ ಯಶಸ್ವೀ ಪರೀಕ್ಷಾ ಹಾರಾಟವನ್ನು ನಡೆಸಿದೆ.

Written by - Yashaswini V | Last Updated : Jul 1, 2021, 07:55 AM IST
  • ಫ್ಲೈಯಿಂಗ್ ಕಾರ್ ಪರೀಕ್ಷೆ ಯಶಸ್ವಿ
  • ಈ ಏರ್‌ಕಾರ್ ಇದುವರೆಗೆ 140 ಕ್ಕೂ ಹೆಚ್ಚು ಪರೀಕ್ಷಾ ಹಾರಾಟಗಳನ್ನು ಪೂರ್ಣಗೊಳಿಸಿದೆ
  • ಕೇವಲ ಒಂದೇ ಒಂದು ಗುಂಡಿಯನ್ನು ಒತ್ತುವ ಮೂಲಕ ಈ ಕಾರನ್ನು ವಿಮಾನವಾಗಿ ಪರಿವರ್ತಿಸಬಹುದು
Flying Car: ಕೇವಲ 2 ನಿಮಿಷಗಳಲ್ಲಿ ವಿಮಾನವಾಗಿ ಬದಲಾಗುತ್ತೆ ಈ ಕಾರು title=
ಕೇವಲ ಒಂದೇ ಒಂದು ಗುಂಡಿಯನ್ನು ಒತ್ತುವ ಮೂಲಕ ಈ ಕಾರನ್ನು ವಿಮಾನವಾಗಿ ಪರಿವರ್ತಿಸಬಹುದು Image courtesy (Klein-Vision)

ನವದೆಹಲಿ: ಬೋಯಿಂಗ್ (Boeing) ಸೇರಿದಂತೆ ವಿಶ್ವದ ಅನೇಕ ಕಂಪನಿಗಳು ಹಾರುವ ಕಾರನ್ನು (Flying Car) ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿವೆ. ಈ ಸಂಬಂಧ, ಪ್ರಸಿದ್ಧ ಸ್ಲೋವಾಕಿಯಾದ (Slovakia) ಕಂಪನಿಯಾದ ಕ್ಲೈನ್ ​​ವಿಷನ್‌ನ (KleinVision) ಹಾರುವ ಕಾರು ವಿಮಾನ ನಿಲ್ದಾಣಗಳ ನಡುವೆ ತನ್ನ ಪರೀಕ್ಷಾ ಹಾರಾಟವನ್ನು ನಡೆಸಿತು. ಈ ಏರ್‌ಕಾರ್ ಭೂಮಿ ಮತ್ತು ಗಾಳಿ ಎರಡರಲ್ಲೂ ಚಲಿಸುವ ಸಾಮರ್ಥ್ಯ ಹೊಂದಿದೆ. ಅದು ಕೇವಲ ಎರಡೇ ನಿಮಿಷಗಳಲ್ಲಿ ಕಾರಿನಿಂದ ವಿಮಾನವಾಗಿ ಬದಲಾಗುತ್ತದೆ. ಈ ಹೈಬ್ರಿಡ್ ಕಾರು-ವಿಮಾನ, ಏರ್‌ಕಾರ್, ಬಿಎಂಡಬ್ಲ್ಯು ಎಂಜಿನ್ ಹೊಂದಿದ್ದು, ಸಾಮಾನ್ಯ ಪೆಟ್ರೋಲ್-ಪಂಪ್ ಇಂಧನದ ಮೇಲೆ ಚಲಿಸುತ್ತದೆ ಎಂದು ವರದಿಯಾಗಿದೆ.

ಸ್ಲೋವಾಕಿಯಾದಲ್ಲಿ ಯಶಸ್ವಿ ಪರೀಕ್ಷೆ: 
ನಮ್ಮ ಪಾಲುದಾರ ವೆಬ್‌ಸೈಟ್ ಡಿಎನ್‌ಎಯ ಸುದ್ದಿಯ ಪ್ರಕಾರ, ಈ ಫ್ಲೈಯಿಂಗ್ ಕಾರ್‌ನ (Flying Car) ಮೊದಲ ಐತಿಹಾಸಿಕ ಹಾರಾಟವನ್ನು ಕ್ಲೈನ್ ​​ವಿಷನ್‌ನ ಸ್ಥಾಪಕ ಮತ್ತು ಸಿಇಒ ಸ್ಟೀಫನ್ ಕ್ಲೈನ್ ​​(Stefan Klein) ನಿರ್ವಹಿಸಿದ್ದಾರೆ. ಈ ಮೂಲಮಾದರಿಯ ಹೈಬ್ರಿಡ್ ಕಾರು-ವಿಮಾನದ ಮೊದಲ ಅಂತರ-ನಗರ ಹಾರಾಟವು ಸ್ಲೋವಾಕಿಯಾದ ನೈಟ್ರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಾರಂಭವಾಯಿತು. ಕ್ಲೈನ್ ​​ರನ್ವೇಯಿಂದ ಹೊರಟು ಬ್ರಾಟಿಸ್ಲಾವಾಕ್ಕೆ ತನ್ನ 35 ನಿಮಿಷಗಳ ಹಾರಾಟವನ್ನು ಪೂರ್ಣಗೊಳಿಸಿದೆ. ನಗರ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಅವರು ತಮ್ಮ ಏರ್‌ಕಾರ್ (AirCar) ಅನ್ನು ಸಾಮಾನ್ಯ ಕಾರಿನಂತೆ ಸುಮಾರು ಮೂರು ನಿಮಿಷಗಳ ಕಾಲ ನಗರದೊಳಗೆ ಓಡಿಸಿದರು ಎಂದು ಹೇಳಲಾಗಿದೆ.

ಇದನ್ನೂ ಓದಿ- India's Most Luxurious Trains: ಭಾರತದ ಈ ರೈಲುಗಳ ಮುಂದೆ 5 ಸ್ಟಾರ್ ಹೋಟೆಲ್‌ಗಳೂ ಬೆರಗಾಗುತ್ತವೆ

20 ವರ್ಷಗಳ ಕಠಿಣ ಪರಿಶ್ರಮ ಫಲಿಸಿತು:
ಈ ಏರ್‌ಕಾರ್‌ನ ಮೂಲಮಾದರಿಯು ಕ್ಲೈನ್‌ನ 20 ವರ್ಷಗಳ ಕಠಿಣ ಪರಿಶ್ರಮದ ನಂತರ ಅಸ್ತಿತ್ವಕ್ಕೆ ಬಂದಿತು. ಈ ಏರ್‌ಕಾರ್ (AirCar) ಇದುವರೆಗೆ 140 ಕ್ಕೂ ಹೆಚ್ಚು ಪರೀಕ್ಷಾ ಹಾರಾಟಗಳನ್ನು ಪೂರ್ಣಗೊಳಿಸಿದೆ. ಅದೇ ಸಮಯದಲ್ಲಿ, ಈ ವಾರ ಇದುವರೆಗಿನ ಅಂತರ-ನಗರ ಹಾರಾಟದ 'ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನ'. ಕೇವಲ ಗುಂಡಿಯನ್ನು ಒತ್ತುವ ಮೂಲಕ ಈ ಕಾರನ್ನು ವಿಮಾನವಾಗಿ ಪರಿವರ್ತಿಸಬಹುದು. ವಾಯುಬಲವಿಜ್ಞಾನವನ್ನು  (Aerodynamics) ಮಾರ್ಪಡಿಸುವಾಗ ಕಾರು ರೆಕ್ಕೆಗಳು ಮತ್ತು ಬಾಲವನ್ನು ಹೊರತೆಗೆಯುತ್ತದೆ. ಈ ಪ್ರಕ್ರಿಯೆಯು ಕೇವಲ 135 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.

ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಏರ್‌ಕಾರ್ 190 ಕಿ.ಮೀ ವೇಗದಲ್ಲಿ ವೇಗವನ್ನು ಹೆಚ್ಚಿಸುತ್ತದೆ. ಇದು ಸ್ಥಿರ-ಪ್ರೊಪೆಲ್ಲರ್ ವ್ಯವಸ್ಥೆಯೊಂದಿಗೆ 8,200 ಹಾರುವ ಸಾಮರ್ಥ್ಯವನ್ನು ಹೊಂದಿದೆ. ಒಂದೇ ಇಂಧನ ಟ್ಯಾಂಕ್ ಟಾಪ್-ಅಪ್‌ನಲ್ಲಿ ಅದರ ವೇಗವನ್ನು 300 ಕಿ.ಮೀ ಮತ್ತು ಒಂದೇ ಇಂಧನ ಟ್ಯಾಂಕ್ ಟಾಪ್-ಅಪ್‌ನಲ್ಲಿ 1,000 ಕಿ.ಮೀ ವೇಗದಲ್ಲಿ ಹೆಚ್ಚಿಸುವುದು ಕ್ಲೈನ್ ​​ಅವರ ಮುಂದಿನ ಗುರಿಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ- ಭಾರತದ ಮಾರುಕಟ್ಟೆಗೆ ಬಿಡುಗೆಯಾಗಿದೆ Skoda Kushaq, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ

ತಮ್ಮ ಅನುಭವವನ್ನು ಹಂಚಿಕೊಂಡ ತಯಾರಕರು:
ಅದರ ತಯಾರಕ ಕ್ಲೈನ್ ​​ಸೋಮವಾರ ಬೆಳಿಗ್ಗೆ ಪರೀಕ್ಷಾ ಹಾರಾಟದ ಅನುಭವವನ್ನು ಸಾಮಾನ್ಯ ಮತ್ತು ಆಹ್ಲಾದಕರ ಎಂದು ಬಣ್ಣಿಸಿದ್ದು, ಇದು 200 ಕೆ.ಜಿ ತೂಕದ ಒಟ್ಟು ಮಿತಿಯನ್ನು ಹೊಂದಿರುವ ಎರಡು ಜನರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News