Vladimir Putin On Third World War: 'ನಿಮ್ಮಿಂದ ವಿಶ್ವದ ಮೂರನೇ ಮಹಾಯುದ್ಧ ಸಂಭವಿಸಿದರೆ...', ತೀಕ್ಷ್ಣ ಪ್ರತಿಕ್ರಿಯೆ ನೀಡಿದ Vladimir Putin

Vladimir Putin On Third World War: ಕಪ್ಪು ಸಮುದ್ರಕ್ಕೆ (Black Sea Incident) ನುಸುಳಿದ ಬ್ರಿಟನ್ ಶಿಪ್ ಕುರಿತು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾಡಿಮೀರ್ ಪುತಿನ್ ಬ್ರಿಟನ್ ಹಾಗೂ ಅಮೆರಿಕಾಗೆ ಎಚ್ಚರಿಕೆ ನೀಡಿದ್ದಾರೆ. ಪ್ರದೇಶದಲ್ಲಿ ಅಮೆರಿಕಾದ ಬೇಹುಗಾರಿಕಾ ವಿಮಾನವನ್ನು ಕೂಡ ಗುರುತಿಸಲಾಗಿದೆ ಎಂದು ಪುಟಿನ್ ಹೇಳಿದ್ದಾರೆ.

Written by - Nitin Tabib | Last Updated : Jun 30, 2021, 09:28 PM IST
  • ಕಪ್ಪು ಸಮುದ್ರದ ಘಟನೆ ಮೂರನೇ ಮಹಾಯುದ್ಧಕ್ಕೆ ಕಾರಣವಾಗುವುದೇ?
  • ರಷ್ಯನ್ ಸೇನೆಯ ಸಂಕಲ್ಪವನ್ನು ಪರೀಕ್ಷಿಸಬೇಡಿ ಎಂದ ವ್ಲಾಡಿಮೀರ್ ಪುಟಿನ್.
  • ಜಾಗತಿಕ ಯುದ್ಧದಲ್ಲಿ ತಾವು ಗೆಲ್ಲಲು ಸಾಧ್ಯವಿಲ್ಲ ಎಂಬುದು ಪಶ್ಚಿಮದ ಶಕ್ತಿಗಳಿಗೆ ಚೆನ್ನಾಗಿ ತಿಳಿದಿದೆ ಎಂದ ಪುಟಿನ್.
Vladimir Putin On Third World War: 'ನಿಮ್ಮಿಂದ ವಿಶ್ವದ ಮೂರನೇ ಮಹಾಯುದ್ಧ ಸಂಭವಿಸಿದರೆ...', ತೀಕ್ಷ್ಣ ಪ್ರತಿಕ್ರಿಯೆ ನೀಡಿದ Vladimir Putin title=
Vladimir Putin On Third World War (File Photo)

ಮಾಸ್ಕೋ: Vladimir Putin On Third World War - ಕಳೆದ ವಾರ ಕಪ್ಪು ಸಮುದ್ರದಲ್ಲಿನ  (Black Sea Incident) ಘಟನೆಯ ವೇಳೆ ಬ್ರಿಟನ್ ಶಿಪ್ ಜೊತೆಗೆ ಅಮೆರಿಕಾದ ಬೇಹುಗಾರಿಕಾ ವಿಮಾನ ಕಾರ್ಯ ನಿರ್ವಹಿಸುತ್ತಿರುವುದು ಕೂಡ ತಿಳಿದುಬಂದಿದೆ ಎಂದು ರಷ್ಯಾ ರಾಷ್ಟ್ರಾಧ್ಯಕ್ಷ ವ್ಲಾಡಿಮೀರ್ ಪುಟಿನ್ (Russian President Vladimir Putin) ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಮಾಸ್ಕೋ ಈ ಘಟನೆಯ ವೇಳೆ ರಷ್ಯಾದ ಒಂದು ವಾರ್ಸ್ ಶಿಪ್ ಎಚ್ಚರಿಕೆಯ ರೂಪದಲ್ಲಿ ಗುಂಡುಗಳನ್ನು ಹಾರಿಸಿದೆ ಹಾಗೂ ಜೂನ್ 23ರಂದು ಬ್ರಿಟನ್ ನ ಡೆಸ್ಟ್ರಾಯರ್ ಶಿಪ್ ಡಿಫೆಂಡರ್ (HMS Defender) ದಾರಿಯಲ್ಲಿ ರಷ್ಯಾ ವಾರ್ ಪ್ಲೇನ್ ಬಾಂಬ್ ಕೂಡ ಎಸೆದಿದೆ. ಪ್ಯಾರಾದ್ವೀಪ್ ಬಳಿಯಿಂದ ಆ ಹಡಗು ಹೊರಹೋಗಬೇಕು ಎಂಬುದು ಇದರ ಉದ್ದೇಶವಾಗಿತ್ತು ಎಂದಿದೆ.

ಬಹಿರಂಗ ಎಚ್ಚರಿಕೆ ನೀಡಿದ ವ್ಲಾಡಿಮಿರ್ ಪುಟಿನ್
ಆದರೆ, ಈ ಘಟನೆ ನಡೆದಿರುವ ಕುರಿತು ಬ್ರಿಟನ್ ನಿರಾಕರಿಸಿದ್ದು, ತನ್ನ ಶಿಪ್ ಮೇಲೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದಿದೆ. ತನ್ನ ಶಿಪ್ ಉಕ್ರೇನ್ ಸಮುದ್ರದ ಗಡಿಯಲ್ಲಿತ್ತು ಎಂದಿದೆ. ಈ ಘಟನೆಯಿಂದ ಮೂರನೇ ಮಹಾಯುದ್ಧ (Third World War) ಸಂಭವಿಸಲಿದೆಯೇ? ಎಂಬ ಪ್ರಶ್ನೆಗೆ ತೀಕ್ಷ್ಣ ಉತ್ತರ ನೀಡಿರುವ ಪುಟಿನ್, ಒಂದು ವೇಳೆ ತಮ್ಮ ಯುದ್ಧ ಹಡಗು ಬ್ರಿಟನ್ ಹಡಗನ್ನು ಹೊಡೆದುರುಳಿಸಿದ್ದರು ಕೂಡ ಅದರ ಸಾಧ್ಯತೆ ಇಲ್ಲ. ಏಕೆಂದರೆ, ಜಾಗತಿಕ ಯುದ್ಧದಲ್ಲಿ ತಾವು ಗೆಲ್ಲಲು ಸಾಧ್ಯವಿಲ್ಲ ಎಂಬುದು ಪಶ್ಚಿಮದ ಶಕ್ತಿಗಳಿಗೆ ಚೆನ್ನಾಗಿ ತಿಳಿದಿದೆ. ಬ್ರಿಟಿಷರ್ ಡೆಸ್ಟ್ರಾಯರ್ ಶಿಪ್ ಗೆ ರಷ್ಯಾದ ಸೇನೆ ಯಾವ ರೀತಿ ಉತ್ತರ ನೀಡುತ್ತದೆ ಎಂಬುದರ ಮೇಲೆ ಬಹುಶಃ ಅಮೆರಿಕಾದ ಬೇಹುಗಾರಿಕಾ ವಿಮಾನ ಕಣ್ಣಿಟ್ಟಿರಬಹುದು ಎಂದು ಪುಟಿನ್ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-Imran Khan On Modi Government: 'ಮೋದಿ ಜಾಗದಲ್ಲಿ ಬೇರೆ ಯಾರಿದ್ದರೂ ಕೂಡ ಭಾರತದ ಜೊತೆಗೆ ಸಂಬಂಧ ಸರಿಯಾಗಿರುತ್ತಿತ್ತು'

ಅಮೆರಿಕಾದ ಉದ್ದೇಶ ತಿಳಿದಿದೆ
ಮಾಸ್ಕೋಗೆ (Moscow) ಅಮೆರಿಕಾದ (America) ಉದ್ದೇಶ ಮೊದಲೇ ಗೊತ್ತಿದೆ ಎಂದು ಸೂಕ್ಷ್ಮ ಅಂಕಿಅಂಶಗಳನ್ನು ಬಹಿರಂಗಪಡಿಸದೇ ಪುಟಿನ್ ಮಾತನಾಡಿದ್ದಾರೆ. ಇನ್ನೊಂದೆಡೆ ಘಟನೆಯ ಕುರಿತು ಹೇಳಿಕೆ ನೀಡಿರುವ ಬ್ರಿಟನ್ (Britain) ತನ್ನ ಡಿಫೆಂಡರ್ ಹಡುಗು ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿರುವ ಯಾತ್ರೆಯ ಮಾರ್ಗದ ಮೂಲಕವೇ ಸಂಚರಿಸುತ್ತಿತ್ತು ಮತ್ತು ಅದು ಕ್ರಿಮಿಯಾ ಹತ್ತಿರದಲ್ಲಿರುವ ಯುಕ್ರೇನ್ (Ukraine) ಜಲಗಡಿಯಲ್ಲಿತ್ತು ಎಂದಿದೆ. ವಿಶ್ವದ ಬಹುತೇಕ ದೇಶಗಳಂತೆ ಬ್ರಿಟನ್ ಕೂಡ ಕ್ರಿಮಿಯಾವನ್ನು ಯುಕ್ರೇನ್ ನ ಭಾಗವೆಂದು ಪರಿಗಣಿಸುತ್ತದೆ. ಆದರೆ, ರಷ್ಯಾ (Russia) ಮಾತ್ರ ಈ ಪ್ಯಾರಾದ್ವೀಪವನ್ನು ಬೇರ್ಪಡಿಸಿದೆ.

ಇದನ್ನೂ ಓದಿ-Matt Hancock : ಕಿಸ್‌ ಕೊಟ್ಟು ಕೆಲಸ ಕಳೆದುಕೊಂಡ ಆರೋಗ್ಯ ಸಚಿವ!

'ರಷ್ಯಾ ಸೇನೆಯ ಸಂಕಲ್ಪವನ್ನು ಪರೀಕ್ಷಿಸಬೇಡಿ'  
ಡಿಫೆಂಡರ್ ಇಟ್ಟ ಈ ಹೆಜ್ಜೆಯನ್ನು ಒಂದು ರೋಚ್ಚಿಗೆಬ್ಬಿಸುವ ನಡೆ ಎಂದು ಹೇಳಿರುವ ರಷ್ಯಾ, ಮುಂದೆ ಒಂದು ವೇಳೆ ರಷ್ಯಾ ಸೇನೆಯ ಸಂಕಲ್ಪವನ್ನು ಪರೀಕ್ಷಿಸಿದರೆ, ಒಳನುಸುಳುವ ನೌಕೆಯನ್ನು ಹೊಡೆದುರುಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಯುಕ್ರೇನ್ ಜೊತೆಗಿನ ರಷ್ಯಾ ಸಂಬಂಧದ ಕುರಿತು ಪ್ರಶ್ನಿಸಲಾಗಿ, ದೀರ್ಘ ಕಾಲದಿಂದ ಯುಕ್ರೇನ್ ಜನರು ರಷ್ಯಾ ಜೊತೆಗೆ ಹೊಂದಿಕೊಂಡಿದ್ದಾರೆ. ಆದರೆ, ಯುಕ್ರೇನ್ ನೇತೃತ್ವ ರಷ್ಯಾವನ್ನು ಶತ್ರು ಭಾವನೆಯಿಂದ ನೋಡುತ್ತದೆ ಎಂದು ಪುಟಿನ್ ಹೇಳಿದ್ದಾರೆ.

ಇದನ್ನೂ ಓದಿ-Big Blow To Pakistan: ಮತ್ತೊಮ್ಮೆ FATF ಬೂದು ಪಟ್ಟಿಯಲ್ಲಿಯೇ ಉಳಿದ ಪಾಕಿಸ್ತಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News