ಮಾನವ ಹಕ್ಕು ಕಾರ್ಯಕರ್ತೆಗೆ ಮರಣದಂಡನೆ ವಿಧಿಸಲು ಮುಂದಾದ ಸೌದಿ ಅರೇಬಿಯಾ

  

Last Updated : Aug 24, 2018, 08:29 PM IST
ಮಾನವ ಹಕ್ಕು ಕಾರ್ಯಕರ್ತೆಗೆ ಮರಣದಂಡನೆ ವಿಧಿಸಲು ಮುಂದಾದ ಸೌದಿ ಅರೇಬಿಯಾ    title=
ಸಾಂದರ್ಭಿಕ ಚಿತ್ರ

ರಿಯಾದ್: ಸೌದಿ ಅರೇಬಿಯಾದಲ್ಲಿ ಮಹಿಳೆಯನ್ನು ಒಳಗೊಂಡು ನಾಲ್ಕು ಮಾನವ ಹಕ್ಕು ಕಾರ್ಯಕರ್ತರಿಗೆ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡಿದ್ದರಿಂದಾಗಿ ಮರಣ ದಂಡನೆ ವಿಧಿಸಿಸಲು ಸೌದಿ ಸರ್ಕಾರ ಮುಂದಾಗಿದೆ.

ಸುದ್ದಿ ಮೂಲಗಳ ಪ್ರಕಾರ ಇಸ್ರಾ ಅಲ್ ಘೂಮಗಾಮ್ ಮತ್ತು ಅವರ ಪತಿ 2015 ರಲ್ಲಿ ಪೂರ್ವ ಪ್ರಾಂತ್ಯದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರಣದಿಂದಾಗಿ ಮಹಿಳಾ ಕಾರ್ಯಕರ್ತೆ ಈಗ ಮರಣ ದಂಡನೆ ಶಿಕ್ಷೆ ಒಳಪಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಾಕಷ್ಟು ಕಠಿಣ ನಿಯಮಗಳಿಗೆ ಹೆಸರು ಪಡೆದಿರುವ ಸೌದಿ ಇತ್ತೀಚಿನ ದಿನಗಳಲ್ಲಿ ಮಾನವ  ಹಕ್ಕು ಮತ್ತು ಮಹಿಳಾ ಹಕ್ಕುಗಳಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ. ಆದರೆ ಇಂದಿಗೂ ಕೂಡ ಸರ್ಕಾರಿ ವಿರೋಧಿ ಹೋರಾಟಗಳ ವಿಚಾರವಾಗಿ ಮಾತ್ರ ಅಲ್ಲಿನ ಸರ್ಕಾರ ಇಂದಿಗೂ ಕೂಡ ತನ್ನ ಪಟ್ಟನ್ನು ಸಡಿಲಗೊಳಿಸಿಲ್ಲ ಎನ್ನುವುದಕ್ಕೆ ಈಗ ಇಸ್ರಾ ಅಲ್ ಘೂಂಘಾಂ ಅವರ ಘಟನೆಯೇ ಸಾಕ್ಷಿ. ಈಗ ಈ ಮಹಿಳಾ ಹಕ್ಕು ಕಾರ್ಯಕರ್ತೆಯ ರಕ್ಷಣೆಗೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಧಾವಿಸಿದ್ದು ಸರ್ಕಾರವು ಮರಣದಂಡನೆ ವಿಚಾರವನ್ನು ಮರುಪರಿಶೀಲಿಸಬೇಕಂದು ಸೌದಿ ಸರ್ಕಾರಕ್ಕೆ ಕೇಳಿಕೊಂಡಿದೆ.

Trending News