ಯಹೂದಿ ಜನರ ಯಶಸ್ಸಿನ ಹಿಂದಿನ ಗುಟ್ಟುಗಳು

Secrets behind the success of Israel : ಯೇಸುಕ್ರಿಸ್ತರ ಕಾಲದಿಂದಲೂ ಶಿಕ್ಷಣಕ್ಕೆ ಮಹತ್ವ ನೀಡಿದ ಮೊದಲ ಜನಾಂಗವೂ ಯಹೂದಿಗಳದೇ ಆಗಿದೆ. ಶಿಕ್ಷಣಕ್ಕೆ ನೀಡಿದ ಮಹತ್ವ ಅವರಿಗೆ ಆರಂಭಿಕ ಅನುಕೂಲತೆಗಳನ್ನು ಕಲ್ಪಿಸಿತು. ಆ ಮೂಲಕ ಅವರು ಮುಸ್ಲಿಂ ಕ್ಯಾಲಿಫೇಟ್ ಅವಧಿಯ ಜಾಗತೀಕರಣದ ಮೊದಲ ಅಲೆಗೆ ಸಿದ್ಧರಾದರು.

Written by - Girish Linganna | Last Updated : Feb 26, 2023, 12:31 PM IST
  • ಯೇಸುಕ್ರಿಸ್ತರ ಕಾಲದಿಂದಲೂ ಶಿಕ್ಷಣಕ್ಕೆ ಮಹತ್ವ ನೀಡಿದ ಜನಾಂಗ
  • ಶಿಕ್ಷಣಕ್ಕೆ ನೀಡಿದ ಮಹತ್ವ ಅವರಿಗೆ ಆರಂಭಿಕ ಅನುಕೂಲತೆ ಕಲ್ಪಿಸಿತು
  • ಯಹೂದಿ ಜನರ ಯಶಸ್ಸಿನ ಹಿಂದಿನ ಗುಟ್ಟುಗಳು
ಯಹೂದಿ ಜನರ ಯಶಸ್ಸಿನ ಹಿಂದಿನ ಗುಟ್ಟುಗಳು title=

Secrets behind the success of Israel : ಇಸ್ರೇಲ್ ರಾಷ್ಟ್ರ ಇಂದು ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆದಿದೆ. ಯಹೂದಿಗಳ ಯಶಸ್ಸಿನ ಹಿಂದಿರುವ ಅಂಶಗಳನ್ನು ಕುರಿತು ಗಮನ ಹರಿಸೋಣ.

ಶಿಕ್ಷಣದ ಮಹತ್ವ

ಯಹೂದೀಯರು ಇಂದು ಇಷ್ಟೊಂದು ಸಾಧನೆ ಮಾಡಿದ್ದಾರೆ ಎಂದರೆ, ಅದಕ್ಕೆ ಅವರ ಸಂಸ್ಕೃತಿಯಲ್ಲಿ ಶಿಕ್ಷಣಕ್ಕೆ ನೀಡಿರುವ ಅಪಾರ ಮಹತ್ವವೂ ಕಾರಣವಾಗಿದೆ. 2,500 ವರ್ಷಗಳ ಕಾಲ ಹೊರ ಜಗತ್ತಿನೊಡನೆ ಪರದಾಟ ನಡೆಸುತ್ತಿದ್ದರೂ, ಯಹೂದಿ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಒದಗಿಸಿದ್ದರು.

ಯೇಸುಕ್ರಿಸ್ತರ ಕಾಲದಿಂದಲೂ ಶಿಕ್ಷಣಕ್ಕೆ ಮಹತ್ವ ನೀಡಿದ ಮೊದಲ ಜನಾಂಗವೂ ಯಹೂದಿಗಳದೇ ಆಗಿದೆ. ಶಿಕ್ಷಣಕ್ಕೆ ನೀಡಿದ ಮಹತ್ವ ಅವರಿಗೆ ಆರಂಭಿಕ ಅನುಕೂಲತೆಗಳನ್ನು ಕಲ್ಪಿಸಿತು. ಆ ಮೂಲಕ ಅವರು ಮುಸ್ಲಿಂ ಕ್ಯಾಲಿಫೇಟ್ ಅವಧಿಯ ಜಾಗತೀಕರಣದ ಮೊದಲ ಅಲೆಗೆ ಸಿದ್ಧರಾದರು.

ಎಲ್ಲೆಡೆಯೂ ಅಲ್ಪಸಂಖ್ಯಾತರು: ಅಸ್ತಿತ್ವದ ಸಂಘರ್ಷ

ಯಹೂದಿಗಳು ತಾವು ಜೀವಿಸಿದ ಬಹುತೇಕ ಎಲ್ಲ ಭೂ ಪ್ರದೇಶಗಳಲ್ಲೂ ಅಲ್ಪಸಂಖ್ಯಾತರಾಗಿದ್ದರು. ಪ್ರಸ್ತುತ ಇಸ್ರೇಲ್‌ನಲ್ಲೂ ಅವರ ಬಹುಸಂಖ್ಯಾತ ಪಟ್ಟ ಕುಸಿಯುತ್ತಿದೆ. ಒಂದು ಪ್ರದೇಶದಲ್ಲಿ ಅಲ್ಪಸಂಖ್ಯಾತರು ಎನಿಸಿಕೊಂಡಾಗ, ಅವರಲ್ಲಿ ಕಠಿಣ ಪರಿಶ್ರಮ ಪಡುವ, ಸಾಧಿಸುವ ಛಲ ಮೂಡುತ್ತದೆ. ಇದನ್ನು ಅಮೆರಿಕಾದಲ್ಲಿನ ಸಾಕಷ್ಟು ವಲಸಿಗ ಸಮುದಾಯಗಳಲ್ಲಿ, ಶ್ರೀಲಂಕಾದ ತಮಿಳರಲ್ಲಿ, ಲೆಬಾನೀಸ್ ಮೆಕ್ಸಿಕನ್ನರಲ್ಲೂ ಗುರುತಿಸಬಹುದು.

ಇದನ್ನೂ ಓದಿ : “ಉಕ್ರೇನ್ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಲು ಭಾರತ ಬಯಸುತ್ತದೆ”

ಸತತವಾಗಿ ತಾರತಮ್ಯ ಎದುರಿಸುವ ಅಲ್ಪಸಂಖ್ಯಾತರಲ್ಲಿ ಒಂದು ಪ್ರಮುಖ ಗುರಿ ಇರುತ್ತದೆ. ಅದೆಂದರೆ, ಅಂತಹ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿ ಯಶಸ್ವಿಯಾಗುವುದು. ಆದ್ದರಿಂದಲೇ ಯಹೂದಿಗಳಲ್ಲಿ ಹೆಚ್ಚಿನ ಪ್ರಾಯೋಗಿಕ ಮನಸ್ಥಿತಿ ಮತ್ತು ಸಮುದಾಯದ ಸಂಪರ್ಕ ಇರುತ್ತದೆ.

ಪ್ರಬಲ ಸಂಪರ್ಕ

ಅಲ್ಪಸಂಖ್ಯಾತರು ಸಾಮಾನ್ಯವಾಗಿ ಅತ್ಯಂತ ಪ್ರಬಲ ಸಂಪರ್ಕ ಹೊಂದಿರಲು ಪ್ರಯತ್ನಿಸುತ್ತಾರೆ. ಅವರ ಜನಸಂಖ್ಯೆ ಬಹಳ ಹೆಚ್ಚಿಲ್ಲವಾದರೆ ಅದೊಂದು ರೀತಿ ಕ್ಲಬ್ ರೀತಿ ಇರುತ್ತದೆ. ದೊಡ್ಡ ಅಲ್ಪಸಂಖ್ಯಾತ ಸಮುದಾಯ (ಉದಾಹರಣೆಗೆ ಆಫ್ರಿಕನ್ ಅಮೆರಿಕನ್ನರು ಅಥವಾ ಭಾರತೀಯ ಮುಸಲ್ಮಾನರು) ಇಂತಹ ಸಣ್ಣ ಅಲ್ಪಸಂಖ್ಯಾತರಂತೆ ಸಂಪರ್ಕ ಸಾಧಿಸಲು ಸಾಧ್ಯವಿಲ್ಲ. ಸಮುದಾಯ ಎಲ್ಲರಿಗೂ ಇರುವ ಸಮಾನ ಸವಾಲುಗಳು ಮತ್ತು ಐತಿಹಾಸಿಕ ಬಂಧದ ಮೂಲಕ ಸಂಪರ್ಕ ಹೊಂದಿರುತ್ತಾರೆ.

ಮೂರ್ಖರಿಂದ ಕನಿಷ್ಠ ಪ್ರಭಾವ

ಜನಸಂಖ್ಯೆ ಅಷ್ಟೊಂದು ಕಡಿಮೆ ಇರುವಾಗ ಮತ್ತು ಸಮಸ್ಯೆಗಳು ಬೃಹತ್ ಆಗಿರುವಾಗ, ಮೂರ್ಖರ ಸಂಖ್ಯೆ ಹೆಚ್ಚಿರಲೂ ಸಾಧ್ಯವಿಲ್ಲ. ಹಾಗೇನಾದರೂ ಮೂರ್ಖ ಜನರು ಇದ್ದರೂ, ಅವರು ಇತರರ ಮೇಲೆ ಪ್ರಭಾವ ಬೀರಿ, ಸಮುದಾಯದ ಹಾದಿ ತಪ್ಪಿಸಲು ಸಾಧ್ಯವಿಲ್ಲ.

ಇದನ್ನೂ ಓದಿ : ತಮ್ಮ ಆಫೀಸ್ ನಲ್ಲಿಯೇ ನೇಣಿಗೆ ಶರಣಾದ ಅಮೇರಿಕನ್ ಬಿಲಿಯನೇರ್..!

ಇಸ್ರೇಲ್ ಯಾಕೆ ಯಶಸ್ವಿಯಾಗಿದೆ?

ಯಹೂದಿಗಳು ಇಸ್ರೇಲ್‌ನಲ್ಲಿ ಸಣ್ಣಮಟ್ಟಿಗೆ ಬಹುಸಂಖ್ಯಾತ ಸಮುದಾಯವಾದರೂ, ಒಟ್ಟಾರೆ ಅವರ ಪ್ರದೇಶವನ್ನು ಗಣನೆಗೆ ತೆಗೆದುಕೊಂಡರೆ ಅವರು ಅಲ್ಪಸಂಖ್ಯಾತರು. ಅವರು ಯಶಸ್ವಿಯಾಗಲು ಇನ್ನೂ ಒಂದಷ್ಟು ಕಾರಣಗಳಿವೆ.

1. ಸತತ ಬಾಹ್ಯ ಅಪಾಯ

ಇಸ್ರೇಲಿಗಳು ಸದಾ ಯಾವುದಾದರೂ ಯುದ್ಧವನ್ನು ಎದುರಿಸಲು ಸಿದ್ಧರಾಗಿರಲೇಬೇಕು. ರೋಗ ನಿರೋಧಕ ವ್ಯವಸ್ಥೆಯು ವ್ಯಾಕ್ಸಿನ್ ಪಡೆಯುವಂತೆ, ಮಾಂಸಖಂಡಗಳು ವ್ಯಾಯಾಮ ನಡೆಸುವಂತೆ, ಇಂತಹ ಬಾಹ್ಯ ಒತ್ತಡ ಅವರು ಸದಾ ಬಚಾವಾಗುವ ಉದ್ದೇಶ ಹೊಂದಿರುವಂತೆ ನೋಡಿಕೊಳ್ಳುತ್ತದೆ. ಇಸ್ರೇಲಿಗಳು ಅತ್ಯಂತ ಪ್ರಬಲ ರಕ್ಷಣಾ ಪಡೆಗಳನ್ನು ಹೊಂದಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

Secrets behind the success of the Yahudi people

2. ಇತರ ದೇಶಗಳಿಂದ ಅತ್ಯುತ್ತಮ ತಲೆಗಳ ವಲಸೆ

1948ರಲ್ಲಿ ಇಸ್ರೇಲ್ ನಿರ್ಮಾಣಗೊಂಡಾಗ, ಪ್ರಪಂಚದ ಎಲ್ಲ ಭಾಗಗಳಿಂದಲೂ (ರಷ್ಯಾದಿಂದ, ಆಸ್ಟ್ರಿಯಾ ಹಾಗೂ ಅಮೆರಿಕಾಗಳಿಂದ) ಯಹೂದಿಗಳು ಇಸ್ರೇಲ್‌ಗೆ ಆಗಮಿಸಿದರು. ಯುದ್ಧ ಆರಂಭಗೊಳ್ಳುವ ಮೊದಲು, ಇವರಲ್ಲಿ ಬಹುತೇಕ ಜನರು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದರು. ಇಸ್ರೇಲಿಗೆ ಮರಳಿದಾಗ ದಿವಾಳಿಗಳಾಗಿದ್ದ ಈ ಜನರು ತಮ್ಮ ಸಮಾಜವನ್ನು ಮರಳಿ ನಿರ್ಮಿಸಲು ಆರಂಭಿಸಿದರು. ಇತರ ದೇಶಗಳಿಂದ ವಲಸೆ ಹೋಗುವ ಜನರಂತೆ ಅಲ್ಲದೆ, ಯಹೂದಿಯರಿಗೆ ಹಿಂದೆ ಉದ್ಯಮ ನಾಯಕತ್ವ, ಕಲೆ ಮತ್ತು ವಿಜ್ಞಾನಗಳಲ್ಲಿ ಅಪಾರ ಅನುಭವವಿತ್ತು. ಅವರು ಪ್ರಪಂಚದ ಅತ್ಯುತ್ತಮ ಅಭ್ಯಾಸಗಳನ್ನು ಅವರ ಜೊತೆ ತಂದಿದ್ದರು.

3. ಸಂಪನ್ಮೂಲಗಳ ವಿರೋಧಾಭಾಸಗಳಿಲ್ಲ

ಇಸ್ರೇಲ್ ಬಳಿ ಹೇಳಿಕೊಳ್ಳುವಂತಹ ಯಾವುದೇ ನೈಸರ್ಗಿಕ ಸಂಪನ್ಮೂಲಗಳಿಲ್ಲ. ಡಚ್ ಡಿಸೀಸ್ ಪ್ಯಾರಡೋಕ್ಸ್ ಪ್ರಕಾರ, ಯಾವುದೇ ಸಂಪನ್ಮೂಲ ಹೊಂದಿರದ ಅಥವಾ ಅತ್ಯಂತ ಕಡಿಮೆ ಸಂಪನ್ಮೂಲ ಹೊಂದಿರುವ ರಾಷ್ಟ್ರಗಳು ತಮ್ಮ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಅಪಾರ ಒತ್ತು ನೀಡುತ್ತವೆ. ಇಂತಹ ರಾಷ್ಟ್ರಗಳಲ್ಲಿ ಆರ್ಥಿಕತೆ ತೈಲ, ಗಣಿಗಾರಿಕೆ ಅಥವಾ ಇತರ ಯಾವುದೇ ಆದಾಯ ಮೂಲಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಇದರಿಂದ ಇಂತಹ ರಾಷ್ಟ್ರಗಳು ದುರ್ಬಲ ಹಣಕಾಸು ಹಾಗೂ ಪ್ರಬಲ ಸರ್ಕಾರದ ಮೇಲೆ ಒತ್ತು ನೀಡುತ್ತವೆ. ಇಂತಹ ಕ್ರಮಗಳನ್ನು ಕಡಿಮೆ ಸಂಪನ್ಮೂಲ ಹೊಂದಿರುವ ಜಪಾನ್, ಸಿಂಗಾಪುರ ಹಾಗೂ ತೈವಾನ್ ಗಳಲ್ಲಿ ಗಮನಿಸಬಹುದು.

4. ಸಣ್ಣ ಭೂ ಪ್ರದೇಶ

ಸಾಮಾನ್ಯವಾಗಿ ಕಡಿಮೆ ಭೂ ಪ್ರದೇಶ ಹೊಂದಿರುವುದು ಯಾವುದಾದರೂ ರಾಷ್ಟ್ರಕ್ಕೆ ಅನಾನುಕೂಲಕರ ಎಂದು ಎಲ್ಲರೂ ಭಾವಿಸಬಹುದು. ವಾಸ್ತವವಾಗಿ ಅದು ಒಂದು ರೀತಿಯ ಅನುಕೂಲ. ಸಣ್ಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಬುದ್ಧಿವಂತ ಜನರಿರುವಾಗ, ಅವರ ಬುದ್ಧಿವಂತಿಕೆಯಿಂದ ಬಹಳಷ್ಟು ಸಾಧಿಸಬಹುದು. ಇದು ಮಾನವ ಸಂಪನ್ಮೂಲದ ಮೇಲೆ ಅವಲಂಬಿತವಾಗಿರುವ ಸಮಾಜದ ವಿಚಾರದಲ್ಲಿ ನಿಜ. ಸಿಂಗಾಪುರ, ಹಾಂಕಾಂಗ್ ಅಥವಾ ಸ್ವಿಜರ್ಲ್ಯಾಂಡ್‌ನಂತಹ ರಾಷ್ಟ್ರಗಳು, ನ್ಯೂಯಾರ್ಕ್, ಲಂಡನ್, ಸಿಲಿಕಾನ್ ವ್ಯಾಲಿ ಅಥವಾ ಐತಿಹಾಸಿಕ ಫ್ಲಾರೆನ್ಸ್ ನಗರಗಳು ಇದಕ್ಕೆ ಉದಾಹರಣೆ. ಸಣ್ಣ ಪ್ರದೇಶದಲ್ಲಿನ ಬುದ್ಧಿವಂತ ಮೆದುಳುಗಳು ಒಟ್ಟಾಗಿ ಗಮನ ಕೇಂದ್ರೀಕರಿಸಿ ಕಾರ್ಯಾಚರಿಸಬಹುದು.

5. ಅನಿವಾಸಿಗಳ ಶಕ್ತಿ

ಅಮೆರಿಕ ಹಾಗೂ ಯೂರೋಪ್ ನಲ್ಲಿ ಸಾಕಷ್ಟು ಸಂಖ್ಯೆಯ ಇಸ್ರೇಲ್ ಜನರಿದ್ದು, ಅವರು ತಮ್ಮ ರಾಷ್ಟ್ರವಾದ ಇಸ್ರೇಲಿಗೆ ಸಾಕಷ್ಟು ನೆರವು ನೀಡುತ್ತಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರೂ ತಮ್ಮ ದೇಶಕ್ಕೆ ನೆರವಾಗುತ್ತಾರಾದರು, ಇಸ್ರೇಲ್ ನಲ್ಲಿ ಅದು ಅತಿ ಹೆಚ್ಚು.

ಇದನ್ನೂ ಓದಿ : ಪ್ರಪಂಚದ ವಿನಾಶಕ್ಕೆ ಡೆಡ್ಲಿ ಡೇಟ್ ಫಿಕ್ಸ್​ : ವಿಜ್ಞಾನಿಗಳಿಂದ ಸಿಕ್ಕಿದೆ ವಿಶ್ವ ವಿನಾಶದ ಸ್ಫೋಟಕ ರಹಸ್ಯ..!

ಇಸ್ರೇಲ್ ಕುರಿತ ಕೆಲವು ಸತ್ಯಗಳು

ಇಸ್ರೇಲ್ ಜಗತ್ತಿನ 100ನೇ ಅತಿ ಸಣ್ಣ ರಾಷ್ಟ್ರವಾಗಿದ್ದು, ಜಗತ್ತಿನ 1/1000 ಜನಸಂಖ್ಯೆ ಹೊಂದಿದೆ. ಆದರೂ ಹಲವು ವಿಚಾರಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ಇಸ್ರೇಲ್ ತನ್ನ ಅತಿದೀರ್ಘ ತುದಿಗಳಲ್ಲಿ ಲೆಕ್ಕ ಹಾಕಿದರೆ, 420 ಕಿಲೋಮೀಟರ್ ಉದ್ದ ಹಾಗೂ 115 ಕಿಲೋಮೀಟರ್ ಅಗಲವಿದೆ. ಇಸ್ರೇಲಿನ ಉತ್ತರಕ್ಕೆ ಲೆಬನಾನ್, ಈಶಾನ್ಯದಲ್ಲಿ ಸಿರಿಯಾ, ಪೂರ್ವದಲ್ಲಿ ಜೋರ್ಡಾನ್, ನೈಋತ್ಯದಲ್ಲಿ ಈಜಿಪ್ಟ್ ಹಾಗೂ ಪಶ್ಚಿಮದಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ಹೊಂದಿದೆ.

ಇಸ್ರೇಲ್ ಜಗತ್ತಿನಲ್ಲಿ ನಾಲ್ಕನೇ ಅತಿ ದೊಡ್ಡ ವಾಯುಪಡೆ ಹೊಂದಿದೆ. (ಇದು ಅಮೇರಿಕಾ, ರಷ್ಯಾ ಹಾಗೂ ಚೀನಾಗಳ ನಂತರದ ಸ್ಥಾನದಲ್ಲಿದೆ). ಇತರ ಯುದ್ಧ ವಿಮಾನಗಳು ಮಾತ್ರವಲ್ಲದೆ, ಇಸ್ರೇಲ್ ಬಳಿ 250ಕ್ಕೂ ಹೆಚ್ಚು ಎಫ್-16 ಗಳಿವೆ.

ಈಗ ಅಮೆರಿಕದ ರಕ್ಷಣಾಧಿಕಾರಿಗಳು ವಾಯು ಆಧಾರಿತ ಸವಾಲುಗಳನ್ನು ಎದುರಿಸುವುದರ ಕುರಿತು ಇಸ್ರೇಲಿನಿಂದ ಸಲಹೆ ಪಡೆಯುತ್ತಿದ್ದಾರೆ.

ಇಸ್ರೇಲ್ ನೂರು ಬಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದ್ದು, ಮಧ್ಯ ಪೂರ್ವದಲ್ಲಿಯೇ ಅತ್ಯುತ್ತಮ ಜೀವನ ಮಟ್ಟವನ್ನು ಹೊಂದಿದೆ. ಇಸ್ರೇಲ್ ಜನರ ತಲಾ ಆದಾಯ ಯುಕೆಯ ತಲಾ ಆದಾಯವನ್ನು ಮೀರುತ್ತದೆ.

24% ಇಸ್ರೇಲ್ ಕಾರ್ಮಿಕ ಪಡೆ ಯುನಿವರ್ಸಿಟಿ ಪದವಿಯನ್ನು ಹೊಂದಿದ್ದು, ಅರ್ಧದಷ್ಟು ಜನರು ಹೆಚ್ಚಿನ ಪದವಿಗಳನ್ನು ಹೊಂದಿದ್ದಾರೆ. ಇಸ್ರೇಲ್ ಅತಿ ಹೆಚ್ಚು ವಿಜ್ಞಾನ ಪತ್ರಿಕೆಗಳನ್ನು ಮಂಡಿಸುತ್ತಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ತಲಾ ಪೇಟೆಂಟ್ ಹೊಂದಿದೆ.

ಇಸ್ರೇಲ್ ಜಗತ್ತಿನಲ್ಲಿ 3ನೇ ಅತಿ ಹೆಚ್ಚು ಉದ್ಯಮಶೀಲತೆಯ ದರ ಹೊಂದಿದ್ದು, ಮಹಿಳೆಯರು ಮತ್ತು 55 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಅತಿ ಹೆಚ್ಚು ಉದ್ಯಮಿಶೀಲತೆ ಹೊಂದಿದೆ.

Secrets behind the success of the Yahudi people

ಅಮೆರಿಕದಿಂದ ಹೊರಗೆ, ಇಸ್ರೇಲ್ ಅತಿ ಹೆಚ್ಚು ಎನ್ಎಎಸ್‌ಡಿಎಕ್ಯು ನಮೂದಿಸಿದ ಸಂಸ್ಥೆಗಳನ್ನು ಹೊಂದಿದ್ದು, ಉದ್ಯಮ ಬಂಡವಾಳದಲ್ಲಿ ಎರಡನೇ ಸ್ಥಾನದಲ್ಲಿದೆ.

3000ಕ್ಕೂ ಹೆಚ್ಚು ಹೈಟೆಕ್ ಕಂಪನಿಗಳು ಮತ್ತು ಸ್ಟಾರ್ಟಪ್‌ಗಳನ್ನು ಹೊಂದಿರುವ ಇಸ್ರೇಲ್, ಅಮೆರಿಕಾದ ಹೊರಗೆ ಅತಿಹೆಚ್ಚು ಸಂಸ್ಥೆಗಳ ಸಾಂದ್ರತೆ ಹೊಂದಿರುವ ಪ್ರದೇಶವಾಗಿದೆ.

ಇಸ್ರೇಲ್ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಖ್ಯೆಯಲ್ಲಿ ಅತಿ ಹೆಚ್ಚು ದರ ಹೊಂದಿದ್ದು, 10,000 ಜನರಲ್ಲಿ 145 ಜನರನ್ನು ಹೊಂದಿದೆ. ಈ ದರ ಅಮೆರಿಕಾದಲ್ಲಿ 10,000 ಕ್ಕೆ 85 ಆದರೆ, ಜಪಾನಿನಲ್ಲಿ 70 ಹಾಗೂ ಜರ್ಮನಿಯಲ್ಲಿ 60ಕ್ಕಿಂತ ಕಡಿಮೆಯಿದೆ.

ಇದನ್ನೂ ಓದಿ : Israel attack on Syrian :ಸಿರಿಯಾ ರಾಜಧಾನಿ ಡಮಾಸ್ಕಸ್‌ ಮೇಲೆ ಇಸ್ರೇಲ್ ದಾಳಿ..

ಇಸ್ರೇಲ್ ವಿಜ್ಞಾನಿಗಳು ಜಗತ್ತಿನ ಪ್ರಥಮ ಸಂಪೂರ್ಣ ಕಂಪ್ಯೂಟರೀಕೃತ, ರೇಡಿಯೇಶನ್ ರಹಿತ ಸ್ತನ ಕ್ಯಾನ್ಸರ್ ಪತ್ತೆಹಚ್ಚುವ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ.

ಔಷಧ ನೀಡುವ ಪ್ರಕ್ರಿಯೆಯನ್ನು ಕಂಪ್ಯೂಟರೀಕೃತಗೊಳಿಸಿ, ಮಾನವ ತಪ್ಪುಗಳನ್ನು ಕಡಿತಗೊಳಿಸಲಾಗಿದೆ. ಪ್ರತಿವರ್ಷವೂ ಚಿಕಿತ್ಸೆಯಲ್ಲಿನ ಎಡವಟ್ಟಿನ ಕಾರಣದಿಂದಲೇ ಅಮೆರಿಕಾದಲ್ಲಿ 7,000 ರೋಗಿಗಳು ಸಾವಿಗೀಡಾಗುತ್ತಾರೆ.

ಇಸ್ರೇಲ್ ಇಮೇಜಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದು, ನುಂಗಬಲ್ಲ ವೀಡಿಯೋ ಕ್ಯಾಮರಾ ಅಭಿವೃದ್ಧಿ ಪಡಿಸಿದ್ದಾರೆ. ಈ ಕ್ಯಾಮರಾ ಒಂದು ಮಾತ್ರೆಯೊಳಗೆ ಅಳವಡಿಸಬಲ್ಲದಾಗಿದ್ದು, ಸಣ್ಣ ಕರುಳನ್ನು ಒಳಗಿನಿಂದಲೇ ವೀಕ್ಷಿಸಬಲ್ಲದು. ಆ ಮೂಲಕ ಕ್ಯಾನ್ಸರ್ ಹಾಗೂ ಜೀರ್ಣಾಂಗ ಸಮಸ್ಯೆಗಳನ್ನು ಗುರುತಿಸಲು ನೆರವಾಗುತ್ತದೆ.

ಇಸ್ರೇಲ್ ಹೃದಯಕ್ಕೆ ರಕ್ತವನ್ನು ಪಂಪ್ ಮಾಡಲು ನೆರವಾಗುವ ಉಪಕರಣವನ್ನು ಅಭಿವೃದ್ಧಿಪಡಿಸಿದೆ. ಇದು ಹೃದಯ ವೈಫಲ್ಯದ ಸಂದರ್ಭದಲ್ಲಿ ಜೀವ ರಕ್ಷಕವಾಗಿದೆ. ಕ್ಯಾಮೆರಾದೊಡನೆ ಅಳವಡಿಸಲಾಗುವ ಈ ಉಪಕರಣ ವೈದ್ಯರಿಗೆ ಸೆನ್ಸರ್ಗಳ ಮೂಲಕ ಹೃದಯದ ಸ್ಥಿತಿಗತಿಯನ್ನು ಅರಿಯಲು ನೆರವಾಗುತ್ತದೆ.

ಇಸ್ರೇಲ್ ಕ್ಲಿಯರ್ ಲೈಟ್ ಡಿವೈಸ್ ಎನ್ನುವ ಮೊಡವೆ ಚಿಕಿತ್ಸಾ ಉಪಕರಣವನ್ನು ಅಭಿವೃದ್ಧಿಪಡಿಸಿದ್ದು, ನ್ಯಾರೋ ಬ್ಯಾಂಡ್ ಬ್ಲೂ ಬೆಳಕಿನ ಮೂಲಕ ಮೊಡವೆ ಉಂಟುಮಾಡುವ ಬ್ಯಾಕ್ಟಿರಿಯಾಗಳು ಸ್ವತಃ ನಾಶಪಡಿಸುವಂತೆ ಮಾಡುತ್ತದೆ. ಇದರಿಂದ ಸುತ್ತಮುತ್ತಲಿನ ಚರ್ಮಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಮೊದಲ ಮೊಬೈಲ್ ಫೋನ್ ಸಹ ಮೋಟೋರೋಲಾದ ಇಸ್ರೇಲ್ ಘಟಕದಲ್ಲಿ ಉತ್ಪಾದಿಸಲಾಯಿತು. ಬಹುತೇಕ ವಿಂಡೋಸ್ ಎನ್‌ಟಿ ಹಾಗೂ ಎಕ್ಸ್‌ಪಿ ಆಪರೇಟಿಂಗ್ ಸಿಸ್ಟಮ್‌ಗಳು ಇಸ್ರೇಲ್‌ನಲ್ಲಿ ಅಭಿವೃದ್ಧಿ ಹೊಂದಿದವು.

ಇದನ್ನೂ ಓದಿ : Trending News: 5 ಸಾವಿರ ವರ್ಷಗಳ ಹಿಂದೆಯೂ ಜನರು ಪಾರ್ಟಿ ಮಾಡುತ್ತಿದ್ದರು, ಬಿಯರ್ ಕುಡಿಯುತ್ತಿದ್ದರು.. ಇಲ್ಲಿ ಸಿಕ್ಕಿದೆ ಖಚಿತ 'ಸಾಕ್ಷಿ'

ಪೆಂಟಿಯಮ್‌ ಎಂಎಂಎಕ್ಸ್ ಚಿಪ್ ತಂತ್ರಜ್ಞಾನವನ್ನೂ ಇಸ್ರೇಲ್‌ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಪೆಂಟಿಯಮ್‌-4 ಮೈಕ್ರೋ ಪ್ರೊಸೆಸರ್‌ ಹಾಗೂ ಸೆಂಟ್ರಿನೋ ಪ್ರೊಸೆಸರ್‌ಗಳು ಇಸ್ರೇಲ್‌ನಲ್ಲೇ ವಿನ್ಯಾಸ ಹೊಂದಿ, ಅಭಿವೃದ್ಧಿ ಪಡಿಸಲಾಗಿದೆ. ಬಹುತೇಕ ಎಲ್ಲರ ಕಂಪ್ಯೂಟರ್‌ಗಳಲ್ಲಿರುವ ಪೆಂಟಿಯಮ್‌ ಮೈಕ್ರೋ ಪ್ರೊಸೆಸರ್‌ಗಳು ಇಸ್ರೇಲ್‌ನಲ್ಲೇ ಉತ್ಪಾದಿಸಿರುವ ಸಾಧ್ಯತೆಗಳಿವೆ.

ವಾಯ್ಸ್ ಮೇಲ್ ತಂತ್ರಜ್ಞಾನ ಮೊದಲ ಬಾರಿಗೆ ಇಸ್ರೇಲಿನಲ್ಲಿ ಅಭಿವೃದ್ಧಿ ಹೊಂದಿತು. ಅಮೆರಿಕಾದ ಹೊರಗಿನ ಮೈಕ್ರೋಸಾಫ್ಟ್ ಹಾಗೂ ಸಿಸ್ಕೋ ಆರ್ ಆ್ಯಂಡ್ ಡಿ ಘಟಕಗಳು ಇಸ್ರೇಲ್‌ನಲ್ಲಿವೆ. ಎಒಎಲ್ ಇನ್ಸ್ಟಾಂಟ್ ಮೆಸೆಂಜರ್ ಐಸಿಕ್ಯು ತಂತ್ರಜ್ಞಾನವನ್ನು ಇಸ್ರೇಲಿಗಳೇ ಅಭಿವೃದ್ಧಿ ಪಡಿಸಿದರು.

ಇಸ್ರೇಲ್ ಜಗತ್ತಿನಲ್ಲಿ ಅತಿಹೆಚ್ಚು ತಲಾ ಮ್ಯೂಸಿಯಂಗಳನ್ನು ಹೊಂದಿದೆ. ಅವರ ಬುದ್ಧಿಮತ್ತೆಯ ಪರಿಣಾಮವಾಗಿಯೂ ಅತಿಹೆಚ್ಚು ಮ್ಯೂಸಿಯಂಗಳು ಇರುವ ಸಾಧ್ಯತೆಗಳಿವೆಯೇನೋ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News