ಮದ್ಯ ಸಿಗಲಿಲ್ಲ ಎಂದು Sanitizer ಸೇವಿಸಿದ ಭೂಪರು, 7 ಸಾವು, ಕೊಮಾ ಸ್ಥಿತಿಗೆ ಜಾರಿದ ಇಬ್ಬರು

ಈ ಪ್ರಕರಣದಲ್ಲಿ ಸ್ಯಾನಿಟೈಸರ್ ನಿಂದ ವಿಷಬಾಧೆಯಾದ ಕಾರಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಫೆಡರಲ್ ಪಬ್ಲಿಕ್ ಹೆಲ್ತ್ ವಾಚ್ ಡಾಗ್ ಹೇಳಿದೆ. ಬಳಿಕ ಸ್ಥಳೀಯ ಆಡಳಿತ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಬೇಡಿ ಎಂದು ನಾಗರಿಕರಿಗೆ ಮನವಿ ಮಾಡಿದೆ.

Last Updated : Nov 23, 2020, 12:27 PM IST
  • ಮದ್ಯ ಸಿಗಲಿಲ್ಲ ಎಂದು ಹ್ಯಾಂಡ್ ಸ್ಯಾನಿಟೈಸರ್ ಕುಡಿದ ಜನ.
  • ರಷ್ಯಾದ ಔತಣಕೂಟದ ವೇಳೆ ಈ ಘಟನೆ ಸಂಭವಿಸಿದೆ.
  • ಸ್ಯಾನಿಟೈಸರ್ ಕುಡಿದ 9 ಜನರಲ್ಲಿ 7 ಮಂದಿ ಸಾವು, ಇಬ್ಬರು ಕೊಮಾ ಸ್ಥಿತಿಗೆ ಜಾರಿದ್ದಾರೆ.
ಮದ್ಯ ಸಿಗಲಿಲ್ಲ ಎಂದು Sanitizer ಸೇವಿಸಿದ ಭೂಪರು, 7 ಸಾವು, ಕೊಮಾ ಸ್ಥಿತಿಗೆ ಜಾರಿದ ಇಬ್ಬರು

ಮಾಸ್ಕೋ: ಔತಣಕೂಟವೊಂದರಲ್ಲಿ ಮದ್ಯ ಮುಗಿದ ಕಾರಣ ಜನರು ಹ್ಯಾಂಡ್ ಸ್ಯಾನಿಟೈಸರ್ (Hand Sanitizer) ಸೇವಿಸಿದ ಘಟನೆ ನಡೆದಿದೆ.  ಆದರೆ, ಇದು ಅವರ ಜೀವಕ್ಕೆ ಕುತ್ತು ತಂದಿದೆ. ಈ ವೇಳೆ ಸ್ಯಾನಿಟೈಸರ್ ಸೇವಿಸಿದ ಏಳು ಜನ ಸಾವನ್ನಪ್ಪಿದ್ದು, ಇಬ್ಬರು ಕೊಮಾ ಸ್ಥಿತಿಗೆ ಜಾರಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.

ಇದನ್ನು ಓದಿ- ಸ್ನ್ಯಾನಿಟೈಸರ್ ನ ಅತಿಯಾದ ಬಳಕೆ ಆರೋಗ್ಯಕ್ಕೆ ಅಪಾಯಕಾರಕ: ಆರೋಗ್ಯ ಸಚಿವಾಲಯ

ರಷ್ಯಾದ ಪಶ್ಚಿಮ ಭಾಗದಲ್ಲಿರುವ ತಾತಿನ್ಸಿಕಿ ಜಿಲ್ಲೆಯ ತೊಂತೊರ್ ಗ್ರಾಮದಲ್ಲಿ ಒಂದು ಔತಣಕೂಟ ಏರ್ಪಡಿಸಲಾಗಿತ್ತು. ಈ ವೇಳೆ ಪಾರ್ಟಿಯಲ್ಲಿ ಶಾಮೀಲಾಗಿದ್ದ 9 ಜನರು ಕುಡಿದ ಸ್ಯಾನಿಟೈಸರ್ ನಲ್ಲಿ ಶೇ.69 ರಷ್ಟು ಮಿಥೆನಾಲ್ ಇತ್ತು. ಹ್ಯಾಂಡ್ ಸ್ಯಾನಿಟೈಸರ್ ಕುಡಿದ ಜನರು ವಿಷಬಾಧೆಯಿಂದ ಸಾವನ್ನಪ್ಪಿದ್ದಾರೆ.

ಇದನ್ನು ಓದಿ- 200 ಮಿ ಬಾಟಲ್ ಹ್ಯಾಂಡ್ ಸ್ಯಾನಿಟೈಜರ್ ನ್ನು 100 ರೂ.ಗಿಂತ ಹೆಚ್ಚು ಮಾರಾಟ ಮಾಡುವಂತಿಲ್ಲ - ಕೇಂದ್ರ

ಈ ಪ್ರಕರಣದಲ್ಲಿ ಸ್ಯಾನಿಟೈಸರ್ ನಿಂದ ವಿಷಬಾಧೆಯಾದ ಕಾರಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಫೆಡರಲ್ ಪಬ್ಲಿಕ್ ಹೆಲ್ತ್ ವಾಚ್ ಡಾಗ್ ಹೇಳಿದೆ. ಬಳಿಕ ಸ್ಥಳೀಯ ಆಡಳಿತ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಬೇಡಿ ಎಂದು ನಾಗರಿಕರಿಗೆ ಮನವಿ ಮಾಡಿದೆ.

ಇದನ್ನು ಓದಿ- Coronavirus ತಪ್ಪಿಸಲು ಯಾವ ಹ್ಯಾಂಡ್ ಸ್ಯಾನಿಟೈಜರ್ ಪ್ರಯೋಜನಕಾರಿ

ರಷ್ಯಾದಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕಿಗೆ 20,64,748 ಮಂದಿ ಗುರಿಯಾಗಿದ್ದು, ಅವರಲ್ಲಿ 35,778 ಜನ ಸಾವನ್ನಪ್ಪಿದ್ದಾರೆ. ಭಾನುವಾರ ಒಂದೇ ದಿನದಲ್ಲಿ ರಷ್ಯಾದಲ್ಲಿ ಕೊರೊನಾ ಸೋಂಕಿನ 24,822 ಹೊಸ ಪ್ರಕರಣಗಳು ಪತ್ತೆಯಾಗಿವೆ.

More Stories

Trending News