Firm bonus scheme for employees with children: ದಕ್ಷಿಣ ಕೊರಿಯಾದ ಕಂಪನಿಯೊಂದು ಮಗುವಿಗೆ ಜನ್ಮ ನೀಡಿದ ಮೇಲೆ ತನ್ನ ಉದ್ಯೋಗಿಗಳಿಗೆ ಬೋನಸ್ ನೀಡುತ್ತಿದೆ. ತನ್ನ ಕಂಪನಿಯ ಉದ್ಯೋಗಿಗೆ ಮಗುವಾದರೆ ಆ ಉದ್ಯೋಗಿಗೆ 100 ಮಿಲಿಯನ್ ಕೊರಿಯನ್ ವನ್ ಅಂದರೆ ಅಂದಾಜು 62.23 ಲಕ್ಷ ರೂಪಾಯಿ ನೀಡಲಾಗುತ್ತದೆ. ಸಿಯೋಲ್ ಮೂಲದ ನಿರ್ಮಾಣ ಕಂಪನಿ Boyoung ಗ್ರೂಪ್ ತನ್ನ ಉದ್ಯೋಗಿಗಳಿಗೆ ಈ ಆಫರ್ ನೀಡಿದೆ. 2021 ರ ನಂತರ 70 ಮಕ್ಕಳಿಗೆ ಜನ್ಮ ನೀಡಿದ ಉದ್ಯೋಗಿಗಳಿಗೆ ಕಂಪನಿಯು ಒಟ್ಟು 7 ಬಿಲಿಯನ್ ವಾನ್ ($5.25 ಮಿಲಿಯನ್ ಅಥವಾ ಅಂದಾಜು ₹43 ಕೋಟಿ) ಪಾವತಿಸಲಿದೆ. ಈ ಆಫರ್ ನಿಜಕ್ಕೂ ವಿಚಿತ್ರವೆನಿಸಬಹುದು. ಆದರೆ ದಕ್ಷಿಣ ಕೊರಿಯಾಕ್ಕೆ ಇದು ಎಚ್ಚರಿಕೆಯ ಗಂಟೆಯಂತಿದೆ.
ಮೂರು ಮಕ್ಕಳಾದರೆ ಮನೆ :
ಕಂಪನಿಯ ಅಧ್ಯಕ್ಷ ಲೀ ಜಂಗ್-ಕ್ಯೂನ್ ಪ್ರಕಾರ, ಈ ಮೊತ್ತವು ಮಕ್ಕಳನ್ನು ಬೆಳೆಸುವಲ್ಲಿ ಉದ್ಯೋಗಿಗಳಿಗೆ ಸಹಾಯ ಮಾಡುತ್ತದೆ. ಇನ್ನುಯಾವ ಉದ್ಯೋಗಿಗೆ ಮೂರು ಮಕ್ಕಳಾ ಗುತ್ತದೆಯೋ ಆ ಉದ್ಯೋಗಿಗೆಗೆ ಮನೆ ನೀಡುವ ಆಫರ್ ಕೂಡಾ ಇದೆ. ಮನೆ ಅಥವಾ ನಗದು ಈ ಎರಡರ ಪೈಕಿ ಯಾವುದನ್ನಾದರೂ ಉದ್ಯೋಗಿ ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರ ಮನೆ ನಿರ್ಮಾಣಕ್ಕೆ ಭೂಮಿ ನೀಡಿದರೆ, ಮೂರು ಮಕ್ಕಳಿರುವ ಉದ್ಯೋಗಿಗಳಿಗೆ ಮನೆ ನಿರ್ಮಿಸಿ ಕೊಡಲು ಕಂಪನಿ ಸಿದ್ದವಿದೆ. ಇಲ್ಲವಾದರೆ 2.25 ಲಕ್ಷ ಅಮೆರಿಕನ್ ಡಾಲರ್ ಅಂದರೆ ಸುಮಾರು 1.86 ಕೋಟಿ ರೂ. ನಗದು ನೀಡಲಾಗುವುದು. ಬೂಯಾಂಗ್ ಗ್ರೂಪ್ ಹೊರತಾಗಿ, ಅನೇಕ ಇತರ ಕಂಪನಿಗಳು ಕೂಡಾ ಮಗು ಮಾಡಿಕೊಳ್ಳುವ ಉದ್ಯೋಗಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತಿವೆ.
ಇದನ್ನೂ ಓದಿ : Pakistan Police Station Attack: ಪಾಕಿಸ್ತಾನದಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ, 10 ಪೊಲೀಸರು ಹುತಾತ್ಮ, 6 ಮಂದಿಗೆ ಗಾಯ
ಚೀನಾದ ಕಂಪನಿಯೂ ನೀಡಿದೆ ಇಂತಹ ಆಫರ್ :
ದಕ್ಷಿಣ ಕೊರಿಯಾದಂತೆ ಚೀನಾ ಕೂಡ ಜನನ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಕಳೆದ ವರ್ಷ, ಚೀನಾದ ಅತಿದೊಡ್ಡ ಆನ್‌ಲೈನ್ ಟ್ರಾವೆಲ್ ಏಜೆನ್ಸಿ ಕೂಡ ಇದೇ ಮಾರ್ಗದಲ್ಲಿ ಕಾರ್ಮಿಕರಿಗೆ ಆಫರ್ ನೀಡಿತ್ತು.ಕಂಪನಿಯಲ್ಲಿ ಮೂರು ವರ್ಷಗಳನ್ನು ಪೂರೈಸಿದ ಉದ್ಯೋಗಿಗಳು ಮಗುವನ್ನು ಹೊಂದಿದ್ದರೆ, ಮಗುವಿಗೆ ಐದು ವರ್ಷ ತುಂಬುವವರೆಗೆ ಅವರು ಪ್ರತಿ ವರ್ಷ 10,000 ಯುವಾನ್ ($1,376 ಅಥವಾ ಅಂದಾಜು 1.14 ಲಕ್ಷ ರೂ.) ನೀಡಲಾಗುವುದು.
ಜನಸಂಖ್ಯೆಯ ಸಮಯದ ಬಾಂಬ್!
ದಕ್ಷಿಣ ಕೊರಿಯಾ ಸೇರಿದಂತೆ ಪೂರ್ವ ಏಷ್ಯಾದ ಹಲವು ದೇಶಗಳಲ್ಲಿ ಜನಸಂಖ್ಯೆ ಅತ್ಯಂತ ವಿರಳವಾಗಿದೆ. ದಕ್ಷಿಣ ಕೊರಿಯಾದ ಫರ್ಟಿಲಿಟಿ ರೇಟ್ (0.78) ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಮುಂದಿನ ವರ್ಷದ ವೇಳೆಗೆ 0.65ಕ್ಕೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಇದೇ ವೇಗ ಮುಂದುವರಿದರೆ, 2100 ರ ವೇಳೆಗೆ ದಕ್ಷಿಣ ಕೊರಿಯಾದ ಜನಸಂಖ್ಯೆಯು ಕೇವಲ 24 ಮಿಲಿಯನ್‌ಗೆ ಅರ್ಧಕ್ಕೆ ಇಳಿಯುತ್ತದೆ. 2022 ರಲ್ಲಿ 249,000 ಶಿಶುಗಳು ಜನಿಸುವ ನಿರೀಕ್ಷೆಯಿದೆ. ಆದರೆ ದಕ್ಷಿಣ ಕೊರಿಯಾ ತನ್ನ ಕಾರ್ಮಿಕ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಪ್ರತಿ ವರ್ಷ ಕನಿಷ್ಠ 500,000 ಶಿಶುಗಳ ಅಗತ್ಯವಿದೆ.
ಇದನ್ನೂ ಓದಿ : Pakistan: ಫೆಬ್ರವರಿ 8ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಬಲೂಚಿಸ್ತಾನದ ಚುನಾವಣಾ ಆಯೋಗದ ಕಚೇರಿ ಹೊರಗೆ ಸ್ಫೋಟ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.