Pakistan: ಪಾಕಿಸ್ತಾನಕ್ಕೆ ಕಹಿಯಾದ ‘ಸಿಹಿ’, ಪೆಟ್ರೋಲ್ ಗಿಂತಲೂ ಸಕ್ಕರೆ ದುಬಾರಿ..!

ಪಾಕಿಸ್ತಾನದಲ್ಲಿ 50 ಕೆಜಿಯ ಸಕ್ಕರೆ ಮೂಟೆ ಬೆಲೆ 200 ರೂ. ಹೆಚ್ಚಳವಾಗಿದ್ದು, 6,600 ರೂ. ಆಸುಪಾಸಿನಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Written by - Puttaraj K Alur | Last Updated : Nov 5, 2021, 11:42 AM IST
  • ಪಾಕಿಸ್ತಾನದಲ್ಲಿ ಪೆಟ್ರೋಲ್ ಗಿಂತಲೂ ದುಬಾರಿಯಾದ ಸಕ್ಕರೆ ಬೆಲೆ
  • ಸಕ್ಕರೆ ಮಿಲ್​ಗಳಿಂದ ಸಕ್ಕರೆ ಪೂರೈಕೆ ನಿಂತಕಾರಣ ಸಕ್ಕರೆ ಬೆಲೆ ಹೆಚ್ಚಳ
  • ಕರಾಚಿ ಸೇರಿ ಬಹುತೇಕ ಎಲ್ಲಾ ನಗರಗಳಲ್ಲೂ ಕೆಜಿಗೆ 140 ರೂ. ದಾಟಿದೆ
Pakistan: ಪಾಕಿಸ್ತಾನಕ್ಕೆ ಕಹಿಯಾದ ‘ಸಿಹಿ’, ಪೆಟ್ರೋಲ್ ಗಿಂತಲೂ ಸಕ್ಕರೆ ದುಬಾರಿ..!  title=
ಟ್ರೋಲ್ ಗಿಂತಲೂ ದುಬಾರಿಯಾದ ಸಕ್ಕರೆ ಬೆಲೆ

ಇಸ್ಲಾಮಾಬಾದ್: ಇಮ್ರಾನ್ ಖಾನ್(Imran Khan) ನೇತೃತ್ವದ ಪಾಕಿಸ್ತಾನವು ಸಕ್ಕರೆ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಹಣದುಬ್ಬರದ ಹೊಡೆತಕ್ಕೆ ತತ್ತರಿಸಿರುವ ಪಾಕ್ ನಲ್ಲಿ ಪೆಟ್ರೋಲ್ ಗಿಂತಲೂ ಸಕ್ಕರೆ ದುಬಾರಿಯಾಗಿದೆ. ಇಲ್ಲಿ ಒಂದು ಕೆಜಿ ಸಕ್ಕರೆ ಬೆಲೆ ಬರೋಬ್ಬರಿ 145 ರೂ. ತಲುಪಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕ್ ನಲ್ಲಿ ಮೊದಲಿನಿಂದಲೂ ಆರ್ಥಿಕ ಬಿಕ್ಕಟ್ಟು ಇದ್ದು, ಇದೀಗ ಸಕ್ಕರೆ ಬೆಲೆಯ ತೀವ್ರ ಹೆಚ್ಚಳವಾಗಿರುವುದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.

ಅಲ್ಲಿನ ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಹಣದುಬ್ಬರದ ನಡುವೆ ಪಾಕಿಸ್ತಾನ(Pakistan amid Inflation)ದಾದ್ಯಂತ ಸಕ್ಕರೆ ಬೆಲೆ ಏರಿಕೆಯಾಗಿದೆಯಂತೆ. ‘ಸಕ್ಕರೆ ಸಂಕಷ್ಟ’ದಲ್ಲಿ ಸಿಲುಕಿರುವ ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಸಕ್ಕರೆ ಬೆಲೆ ದಿಢೀರ್ ಏರಿಕೆ(Sugar Price Increases)ಯಾಗಿದೆ. ಅಗತ್ಯ ವಸ್ತುಗಳ ಸಗಟು ದರವು ಕರಾಚಿಯಲ್ಲಿ 25 ರೂ.ಗೆ ಏರಿದ್ದು, ಪ್ರತಿ ಕೆಜಿ ಸಕ್ಕರೆಗೆ ಹೋಲ್​ಸೇಲ್ ಬೆಲೆ 140 ರೂ. ಇದ್ದರೆ, ರಿಟೇಲ್ ಬೆಲೆ 145 ರೂ. ಇದೆ ಎಂದು ಅಲ್ಲಿನ ಎಆರ್​ವೈ ನ್ಯೂಸ್ (ARY News) ವರದಿ ಮಾಡಿದೆ.

ಇದನ್ನೂ ಓದಿ: Viral News: ಚಿನ್ನಕ್ಕಿಂತ ದುಬಾರಿ ಈ ಹಣ್ಣಿನ ಬೆಲೆ , ತಿನ್ನುವ ಮೊದಲು ಯೋಚಿಸಬೇಕು ನೂರು ಬಾರಿ..!

ಪಾಕಿಸ್ತಾನ್ ಐ ಪ್ರಕಟಣೆಯ ಪ್ರಕಾರ, ಲಾಹೋರ್(Lahore)ನಲ್ಲಿ ಸಕ್ಕರೆಯ ಚಿಲ್ಲರೆ ಬಲೆ ಪ್ರಸ್ತುತ ಪ್ರತಿ ಕೆಜಿಗೆ 140 ರೂ.ಗಳಷ್ಟಿದೆ. ಆದರೆ ಸಕ್ಕರೆ ವಿತರಕರ ಸಂಘವು ಗಿರಣಿದಾರರಿಂದ ಸರಕುಗಳ ಪೂರೈಕೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 9 ರೂ.ನಷ್ಟು ಸಕ್ಕರೆ ದರ ಏರಿಕೆಯಾಗಿದ್ದು, ನಿನ್ನೆಯ(ನ.4) ದರ ಕೆಜಿಗೆ 126 ರೂ.ಗೆ ಹೋಲಿಸಿದರೆ ಇಂದು(ನ.5) 135 ರೂ.ಗೆ ಮಾರಾಟವಾಗುತ್ತಿದೆ ಎಂದು ಎಆರ್​ವೈ ನ್ಯೂಸ್ ವರದಿ ಮಾಡಿದೆ.

ಕಳೆದ 2 ದಿನಗಳಲ್ಲಿಯೇ ಸಕ್ಕರೆ ಬೆಲೆ ಪಾಕಿಸ್ತಾನ(Pakistan)ದಲ್ಲಿ ಪ್ರತಿ ಕೆಜಿಗೆ 13 ರೂ.ನಷ್ಟು ಏರಿಕೆಯಾಗಿದೆ. 50 ಕೆಜಿಯ ಸಕ್ಕರೆ ಮೂಟೆ ಬೆಲೆ 200 ರೂ. ಹೆಚ್ಚಳವಾಗಿದ್ದು, 6,600 ರೂ. ಆಸುಪಾಸಿನಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ಹಣದುಬ್ಬರ ಪಾಕಿಸ್ತಾನವನ್ನು ಆವರಿಸಿದ್ದು, ಆಹಾರ ಬೆಲೆಗಳು ಏರಿಕೆಯಾಗುತ್ತಿವೆ. ಇದರಿಂದ ಹೊರಬರುವ ಉದ್ದೇಶದಿಂದ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರವು ಸುಮಾರು 120 ಮಿಲಿಯನ್ ರೂ. ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ದೇಶದ 130 ಮಿಲಿಯನ್ ಜನರಿಗೆ ಅನುಕೂಲವಾಗಲಿ ಎಂದು ಮುಖ್ಯವಾಗಿ ತುಪ್ಪ, ಹಿಟ್ಟು, ಬೇಳೆಕಾಳುಗಳ ಮೇಲೆ ಶೇ.30ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Afghanistan: ಇಸ್ಲಾಮಿಕ್ ಸ್ಟೇಟ್ ದಾಳಿಯಲ್ಲಿ ತಾಲಿಬಾನ್ ವಿಶೇಷ ಕಮಾಂಡರ್ ಹತ್ಯೆ, ಪಾಕಿಸ್ತಾನಕ್ಕೂ ದೊಡ್ಡ ಹೊಡೆತ

ಸಕ್ಕರೆ ಮಿಲ್​ಗಳಿಂದ ಸಕ್ಕರೆ ಪೂರೈಕೆ ನಿಂತುಹೋಗಿರುವ ಕಾರಣದಿಂದ ಈ ರೀತಿಯಲ್ಲಿ ಬೆಲೆ(Sugar price Hike) ಹೆಚ್ಚಳವಾಗಿದೆ ಎಂದು ಪಾಕಿಸ್ತಾನದ ಶುಗರ್ ಡೀಲರ್ಸ್​ ಅಸೋಸಿಯೇಷನ್ ಸ್ಪಷ್ಟನೆ ನೀಡಿದೆ. ಕರಾಚಿ ಮಾತ್ರವಲ್ಲದೇ ಬಹುತೇಕ ಎಲ್ಲಾ ನಗರಗಳಲ್ಲೂ ಕೂಡ ಸಕ್ಕರೆ ಬೆಲೆ ಪ್ರತಿ ಕೆಜಿಗೆ 140 ರೂ. ದಾಟಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News