Afghanistan: ಅಫ್ಘಾನಿಸ್ತಾನದ ಅಧಿಕಾರವನ್ನು ತಾಲಿಬಾನ್ ವಶಪಡಿಸಿಕೊಂಡಿರಬಹುದು, ಆದರೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಈಗಲೂ ಕೂಡ ತನ್ನ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಲೇ ಇದೆ. ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ದಾಳಿಯಲ್ಲಿ ತಾಲಿಬಾನ್ ವಿಶೇಷ ಕಮಾಂಡರ್ ಹತ್ಯೆಗೈದಿದ್ದು, ಇದು ತಾಲಿಬಾನ್‌ಗೆ ದೊಡ್ಡ ಹೊಡೆತ ನೀಡಿದೆ. ಈ ಕಮಾಂಡರ್ ತಾಲಿಬಾನ್‌ನ ಹಕ್ಕಾನಿ ಜಾಲದೊಂದಿಗೆ ಸಂಬಂಧ ಹೊಂದಿದ್ದನು, ಅವರು ಪಾಕಿಸ್ತಾನದ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದ್ದನು ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ, ಬುಧವಾರ ಕಾಬೂಲ್‌ನಲ್ಲಿ ಆತ್ಮಹತ್ಯಾ ದಾಳಿ ನಡೆದಿದ್ದು, ಇದರಲ್ಲಿ ತಾಲಿಬಾನ್ ಸರ್ಕಾರದಲ್ಲಿ ಆಂತರಿಕ ಸಚಿವರಾಗಿದ್ದ ಹಕ್ಕಾನಿ ನೆಟ್‌ವರ್ಕ್ (Haqqani Network) ಮುಖ್ಯಸ್ಥ ಸಿರಾಜುದ್ದೀನ್ ಹಕ್ಕಾನಿಯ ಮುಖ್ಯ ಮಿಲಿಟರಿ ತಂತ್ರಜ್ಞ ಮತ್ತು ಕಾಬೂಲ್‌ನ ಕಮಾಂಡರ್ ಹಮ್ದುಲ್ಲಾ ಮುಖ್ಲಿಸ್ ಅವರನ್ನು ಹತ್ಯೆಗೈಯಲಾಗಿದೆ.
ಇದನ್ನೂ ಓದಿ- J&Kಗೆ Taliban ನುಸುಳುವ ಸಾಧ್ಯತೆ, ಎಚ್ಚರಿಕೆ ನೀಡಿದ ಸೇನಾ ಮುಖ್ಯಸ್ಥ
ಹಮ್ದುಲ್ಲಾ ಮೊಖ್ಲಿಸ್ (Hamdullah Mokhlis) ತಾಲಿಬಾನ್ ಅಫ್ಘಾನಿಸ್ತಾನಕ್ಕೆ ಹಿಂದಿರುಗಿದ ನಂತರ ಸಾವನ್ನಪ್ಪಿದ ಅತ್ಯಂತ ಹಿರಿಯ ಮತ್ತು ಪ್ರಮುಖ ವ್ಯಕ್ತಿ. ಸರ್ದಾರ್ ದಾವೂದ್ ಖಾನ್ ಆಸ್ಪತ್ರೆಯ ಮೇಲೆ ದಾಳಿ ನಡೆದಿದೆ ಎಂದು ಮಾಹಿತಿ ತಿಳಿಯುತ್ತಿದ್ದಂತೆ ಕಾಬೂಲ್ ಕಾರ್ಪ್ಸ್ ಕಮಾಂಡರ್ ಹಮ್ದುಲ್ಲಾ ಮುಖ್ಲಿಸ್, ತಕ್ಷಣವೇ ಸ್ಥಳಕ್ಕೆ ಧಾವಿಸಿ ಅಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗಿನ ಕಾದಾಟದಲ್ಲಿ ಹತರಾದರು ಎಂದು ತಾಲಿಬಾನ್ ಮಾಧ್ಯಮ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುರ್ಚಿ ಮೇಲೆ ಕುಳಿತಿರುವ ಫೋಟೋ ವೈರಲ್ ಆಗಿತ್ತು:
ತಾಲಿಬಾನ್ (Taliban) ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಅಶ್ರಫ್ ಘನಿ ಅವರ ಕಛೇರಿಯನ್ನು ಪ್ರವೇಶಿಸಿದ ಮೊದಲ ವ್ಯಕ್ತಿ ಹಮ್ದುಲ್ಲಾ ಮುಖ್ಲಿಸ್ ಎಂದು ಹೇಳಲಾಗುತ್ತದೆ. ಅಶ್ರಫ್ ಘನಿ ಅವರ ಕಚೇರಿಯಲ್ಲಿ ತಾಲಿಬಾನಿ ಕುರ್ಚಿಯ ಮೇಲೆ ಕುಳಿತಿರುವ ಚಿತ್ರ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅದು ಹಕ್ಕಾನಿ ಕಮಾಂಡರ್ ಹಮ್ದುಲ್ಲಾ ಮುಖ್ಲಿಸ್ ಎಂದು ಹೇಳಲಾಗಿತ್ತು. ಇದೀಗ ಹಮ್ದುಲ್ಲಾ ಮುಖ್ಲಿಸ್ ಅವರ ಸಾವಿನಿಂದಾಗಿ ಹಕ್ಕಾನಿ ನೆಟ್‌ವರ್ಕ್‌ಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಬಣ್ಣಿಸಲಾಗುತ್ತಿದೆ.
ಇದನ್ನೂ ಓದಿ- ಅಫ್ಘಾನಿಸ್ತಾನದ ಕಂದಹಾರ್ ಮಸೀದಿಯೊಂದರಲ್ಲಿ ಬಾಂಬ್ ಸ್ಪೋಟ, 32 ಸಾವು
ವಾಸ್ತವವಾಗಿ, ಕಾಬೂಲ್‌ನ ಮುಖ್ಯ ಮಿಲಿಟರಿ ಆಸ್ಪತ್ರೆಯ ಮೇಲಿನ ದಾಳಿಯಲ್ಲಿ 19 ಜನರು ಮರಣ ಹೊಂದಿದ್ದಾರೆ. ಈ ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಾಗೊಂಡಿದ್ದಾರೆ. ತಾಲಿಬಾನ್ ಆಂತರಿಕ ಸಚಿವಾಲಯದ ವಕ್ತಾರ ಕ್ವಾರಿ ಸೈಯದ್ ಖೋಸ್ತಿ ಅವರು ಸ್ಫೋಟದ ಕೆಲವೇ ನಿಮಿಷಗಳಲ್ಲಿ ಘಟನೆಯನ್ನು ದೃಢಪಡಿಸಿದರು ಮತ್ತು ಹಲವಾರು ಸಾವುನೋವುಗಳು ಸಂಭವಿಸಿವೆ ಎಂದು ಹೇಳಿದರು. ಆದರೆ, ಅವರು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್-ಖೊರಾಸನ್ (ಐಎಸ್-ಕೆ) ಆಸ್ಪತ್ರೆಯ ಮೇಲಿನ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಪಾಕಿಸ್ತಾನಕ್ಕೂ ದೊಡ್ಡ ಹೊಡೆತ:
ಹಕ್ಕಾನಿ ನೆಟ್‌ವರ್ಕ್ ಮತ್ತು ಪಾಕಿಸ್ತಾನದ ನಡುವೆ ನಿಕಟ ಸಂಬಂಧವಿದೆ. ಪಾಕಿಸ್ತಾನ ತನ್ನ ನೀಚ ಷಡ್ಯಂತ್ರವನ್ನು ಕಾರ್ಯಗತಗೊಳಿಸಲು ಕಾಲ ಕಾಲಕ್ಕೆ ಈ ಜಾಲವನ್ನು ಆಶ್ರಯಿಸುತ್ತದೆ. ಹಕ್ಕಾನಿ ನೆಟ್‌ವರ್ಕ್ ಅನ್ನು ಜಲಾಲುದ್ದೀನ್ ಹಕ್ಕಾನಿ ಸ್ಥಾಪಿಸಿದರು. ಪಾಕಿಸ್ತಾನವು ಈ ಜಾಲಕ್ಕೆ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತದೆ ಎಂದು ಕೂಡ ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ